ಬೆಂಗಳೂರು: ಬೆಂಗಳೂರು: ನಗರದ ಪ್ರಸಿದ್ಧ ಗಾಳಿ ಆಂಜನೇಯ ದೇವಾಸ್ಥಾನದಲ್ಲಿ ಎಣಿಕೆಯ ವೇಳೆ ಹಣವನ್ನು ಕದಿಯಲಾಗಿದೆ. ದೇವಸ್ಥಾನ ಸಿಬ್ಬಂದಿಯೇ ಹುಂಡಿ ಹಣವನ್ನು ಎಗರಿಸಿದ್ದು, ಹಣವನ್ನು ಕಳವು ಮಾಡುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ, ಹುಂಡಿ ಎಣಿಕೆ ಮಾಡಲು ಚಾಪೆ ಮೇಲೆ ರಾಶಿ ರಾಶಿ ನಾಣ್ಯ ಸುರಿಯಲಾಗಿತ್ತು. ಆದರೆ ಈ ಹಣ ಲೆಕ್ಕಚಾರ ಹಾಕಿ ದೇವಸ್ಥಾನಕ್ಕೆ ಬಳಸಬೇಕಿದ್ದವರೇ ಗುಳುಂ ಮಾಡಿದ್ದಾರೆ.
ದೇಗುಲದಲ್ಲಿ ಸಿಸಿಟಿವಿ ಕಣ್ಗಾವಲು ಇದ್ದರೂ ಕ್ಯಾರೇ ಎನ್ನದೇ ಕಂತೆ ಕಂತೆ ಹಣವನ್ನು ತಮ್ಮ ಜೇಬಿಗಿಳಿಸಿದ್ದಾರೆ. 500 ರೂಪಾಯಿ ನೋಟ್ ಗಳ ಕಂತೆಯನ್ನೇ ಕದ್ದು ಸಾಗಿಸಿ ಬಿಟ್ಟಿದ್ದಾರೆ. ಹಣ ಕದ್ದವರು ಹೊರಗಿನವರಲ್ಲ ಬದಲಾಗಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಕೆಲ ಅರ್ಚಕರು ಹಾಗೂ ಕೆಲ ಟ್ರಸ್ಟಿಗಳಾಗಿದ್ದಾರೆ.
ಈ ಹಿಂದೆ ಇಂಥದ್ದೇ ಕೃತ್ಯ ನಡೆದಾಗ ಬ್ಯಾಟರಾಯನಪುರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆದರೆ ಈ ಬಾರಿ ಇದುವರೆಗೂ ಯಾವುದೇ ದೂರು ಹಾಗೂ ಎಫ್ ಐಆರ್ ದಾಖಲಾಗಿಲ್ಲ. ಈ ಹಿಂದೆ ಕೃತ್ಯ ನಡೆದಾಗ ಬ್ಯಾಟರಾಯನಪುರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.

