ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ದೊರೆಯುವ ನಿರೀಕ್ಷೆಯಲ್ಲಿ ಇದ್ದ ನಟ ದರ್ಶನ್ ಅವರಿಗೆ ಮತ್ತೆ ನಿರಾಸೆಯುಂಟಾಗಿದೆ, ಕೊಲೆ ಪ್ರಕರಣದ ಆರೋಪಿಗಳಾದ ಎ2 ದರ್ಶನ್ ಹಾಗೂ ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯು 57ನೇ ಸೆಷನ್ ಕೋರ್ಟ್‌ನಲ್ಲಿ ನಡೆಯಿತು. ಇದೇ ವೇಳೆ ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನೂ ಕೋರ್ಟ್ ಮುಂದೂಡಿತು.
ಈ ಹಿಂದೆ ಸೆ.30ಕ್ಕೆ ಆರೋಪಿ ದರ್ಶನ್ ಜಾಮೀನು ಅರ್ಜಿಮುಂದೂಡಿದ್ದ ಕೋರ್ಟ್, ಅ.04ಕ್ಕೆ ವಿಚಾರಣೆ
ಮುಂದೂಡಿಕೆಮಾಡಿತ್ತು . ಅದರ ಅನ್ವ ಯ ಇಂದು ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ
ಸಿಸಿಎಚ್ ನ್ಯಾ ಯಾಲಯ, ಇದೀಗ ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಿಕೆಮಾಡಿದ್ದು , ಅ.05ರ
ಮಧ್ಯಾ ಹ್ನ 12:30ಕ್ಕೆ ವಿಚಾರಣೆ ಕರೆದಿದೆ.

