2024ರ ನೊಬೆಲ್ ಪ್ರಶಸ್ತಿಗಳ(Nobel Prize 2024) ಘೋಷಣೆ ಸೋ ಮವಾರದಿಂದ ಆರಂಭವಾಗಿದೆ. ನರಗಳ ಜಾಲದಲ್ಲಿ ಕೃತಕ ಯಂತ್ರಗಳನ್ನು ಸಕ್ರಿಯಗೊಳಿಸುವ ಬಗ್ಗೆ ನಡೆಸಿದ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕಾಗಿ ಈ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಜಾನ್ J. ಹಾಪ್‌ಫೀಲ್ಡ್ ಮತ್ತು ಜೆಫ್ರಿ E. ಹಿಂಟನ್ ಅವರಿಗೆ ಮಂಗಳವಾರ ನೀಡಲಾಯಿತು.
ಈ ವರ್ಷದ ಭೌತಶಾಸ್ತ್ರದ ನೊ ಬೆಲ್ ಪ್ರಶಸ್ತಿವಿಜೇತರು ಕೃತಕ ನ್ಯೂರಾನ್ಗಳನ್ನು ಆಧರಿಸಿದ ಯಂತ್ರ ಕಲಿಕೆಗೆ ಸಂಬಂಧಿಸಿದ ಹೊ ಸ
ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರು ಈ ಗೌರವವನ್ನು ಪಡೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಸಂಶೋಧನೆಗೆ ಸಂಬಂಧಿಸಿದಂತೆ ಜಾನ್ ಹಾಪ್‌ಫೆಲ್ಡ್ ಅವರು ಡೇಟಾ, ಅದರ ಚಿತ್ರ, ಇತರ ರೀತಿಯ ಮಾದರಿಗಳನ್ನು ಸಂಗ್ರಹಿಸಲು ಮತ್ತು ಮರುನಿರ್ಮಾಣ ಮಾಡಲು ಸಹಾಯಕ ತಂತ್ರಗಳನ್ನು ಬಳಸಿದ್ದಾರೆ. ಜೆಫ್ರಿ ಹಿಂಟನ್ ಅವರು ಜಾನ್ ಹಾಪ್‌ಫೆಲ್ಡ್ ಅವರು ನೀಡಿದ ಡೇಟಾಗಳ ಆಧಾರದ ಮೇಲೆ ಅವುಗಳ ಗುಣಲಕ್ಷಣಗಳನ್ನು ಸ್ವಾಯತ್ತವಾಗಿ ಕಂಡುಹಿಡಿಯುತ್ತಾರೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ 2024ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಬಗ್ಗೆ ಘೋಷಣೆ ಮಾಡಿದೆ.

