ಜಮ್ಮು : ಅಕ್ಟೋಬರ್ 8 ರಂದು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಅನಂತನಾಗ್ ಪ್ರದೇಶದಲ್ಲಿ ಟೆರಿಟೋರಿಯಲ್ ಆರ್ಮಿಯ 161 ಯೂನಿಟ್‌ಗೆ ಸೇರಿದ ಇಬ್ಬರು ಸೈನಿಕರನ್ನು ಅನಂತನಾಗ್‌ನ ಅರಣ್ಯ ಪ್ರದೇಶದಿಂದ ಅಪಹರಿಸಲಾಗಿತ್ತು. ಅವರಲ್ಲಿ ಒಬ್ಬರು ಎರಡು ಗುಂಡಿನ ಗಾಯಗಳ ನಂತರವೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಇನ್ನೊಬ್ಬ ಯೋಧ ಶವವಾಗಿ ಪತ್ತೆಯಾಗಿದ್ದಾರೆ. ಯೋದರ ದೇಹದಲ್ಲಿ ಹಲವು ಗುಂಡಿನ ಗುರುತುಗಳಿವೆ.
ಗಾಯಗೊಂಡ ಯೋಧನನ್ನು ಅಗತ್ಯ ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯಕ್ಕೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನ ಈ ಘಟನೆ ನಡೆದಿದೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಅಕ್ಟೋಬರ್ 8 ರಂದು ಕೋಕರ್ನಾಗ್‌ನ ಕಜ್ವಾನ್ ಅರಣ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಇತರ ಏಜೆನ್ಸಿಗಳೊಂದಿಗೆ ಭಾರತೀಯ ಸೇನೆಯು ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರಾದೇಶಿಕ ಸೇನೆಯ ಒಬ್ಬ ಯೋಧ ನಾಪತ್ತೆಯಾಗಿರುವುದರಿಂದ ಕಾರ್ಯಾಚರಣೆಯು ರಾತ್ರಿಯಿಡೀ ಮುಂದುವರೆಯಿತು. ಈ ವರ್ಷದ ಆಗಸ್ಟ್‌ನಲ್ಲಿ ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದರು ಮತ್ತು ಮೂವರು ಗಾಯಗೊಂಡಿದ್ದರು.

