ಕೋಲಾರ: ಮೂರು ಅಂತಸ್ಥಿನ ಕಟ್ಟವೊಂದು ಏಕಾಏಕಿ ಕುಸಿದು ಬಿದ್ದಿರುವ ಘಟನೆಯು ಕೋಲಾರ ಜಿಲ್ಲೆಯ ಬಂಗಾರಪೇಟೆಯ ದಂಡು ರಸ್ತೆ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಕಟ್ಟಡವು ವಾಲುತ್ತಿದೆ ಎಂದು ತಿಳಿದ ಕೂಡಲೇ ಸ್ಥಳೀಯರು ಕಟ್ಟದಲ್ಲಿದ್ದ ಜನರನ್ನು ತೆರವು ಮಾಡಿದ್ದಾರೆ. ಈ ಮುಂಜಾಗ್ರತಾ ಕ್ರಮವಾಗಿ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.
ಬಂಗಾರಪೇಟೆ ಪಟ್ಟಣದ ಬೂದಿಕೋಟೆ ರಸ್ತೆಯಲ್ಲಿ ರಾಜ್‌ಕುಮಾರ್ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದೆ. ಕಟ್ಟಡವು ಶುಕ್ರವಾರ ಬೆಳಗಿನ ಜಾವ ಒಂದು ಕಡೆಗೆ ವಾಲಿದೆ. ಇದನ್ನ ಕಂಡು ಮಾಲೀಕರು ಆತಂಕಗೊಂಡಿದ್ದಾರೆ. ಕೂಡಲೇ ಅವರನ್ನು ಕಟ್ಟದಲ್ಲಿ ಇದ್ದ ನಾಲ್ಕೈದು ಮನೆಗಳ ಜನರನ್ನು ಹೊರಕ್ಕೆ ಕರೆತರಲಾಗಿತ್ತು.ನಂತರದ ಕೆಲ ಗಂಟೆಗಳಲ್ಲಿಯೂ ಕಟ್ಟ ಕುಸಿತು ಬದ್ದಿದೆ.
ಕಳೆದ ಎರಡು ತಿಂಗಳಿಂದ ಮನೆ ವಾಲಿದ ಮಾಹಿತಿ ಇದ್ದರು ಮಾಲೀಕರು ಮಾಹಿತಿ ನೀಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ ಎಂದು ತಿಳಿದುಬಂದಿದೆ. ಕಟ್ಟಡ ಕುಸಿದ ಪರಿಣಾಮ ಮುಂಭಾಗದ ಖಾಸಗಿ ಶಾಲೆಗೆ ಕಾಂಪೌಂಡ್ ಗೆ ಹಾನಿಯಾಗಿದೆ. ಜತೆಗೆ ಕೆಲ ಕಾಲ ಪಟ್ಟಣದ ಕೆ.ಇ.ಬಿ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಇನ್ನು ಸ್ಥಳದಲ್ಲೆ ಬೀಡು ಬಿಟ್ಟಿರುವ ಅಗ್ನಿಶಾಮಕ ದಳ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕಟ್ಟಡ ಮಾಲೀಕನ ಮೇಲೆ ಕ್ರಮ ಸಾಧ್ಯತೆ ಇದೆ.

