ಕೇರಳ: ಶಬರಿಮಲೆ ಅಯ್ಯಪ್ಪ ಭಕ್ತರ ಅನುಕೂಲಕ್ಕೆಂದು ಕೆಎಸ್‌ಆರ್‌ಟಿಸಿ ವಿಶೇಷ ವೋಲ್ವೋ ಬಸ್ ಸೇವೆ ಪ್ರಾರಂಭ ಮಾಡಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಎಸ್‌ಆರ್‌ಟಿಸಿ ನವೆಂಬರ್ 29 ರಿಂದ ಹೊಸ ವೋಲ್ವೋ ಬಸ್ ಸಂಚಾರ ಆರಂಭವಾಗಲಿದೆ. ಇದು ಬೆಂಗಳೂರಿನಿಂದ ನೀಲಕ್ಕಲ್ (ಪಂಪಾ-ಶಬರಿಮಲೈ) ವರೆಗೆ ಓಡಾಟ ಮಾಡಲಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.
ನವೆಂಬರ್ 29 ರಂದು ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50 ಕ್ಕೆ ಹೊರಟು ಮರುದಿನ ಬೆಳಗ್ಗೆ 6.45 ಕ್ಕೆ ನೀಲಕ್ಕಲ್ ತಲುಪುತ್ತದೆ. ನಂತರ ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿವಸ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ಪ್ರಯಾಣ ದರ ವಯಸ್ಕರರಿಗೆ ರೂ.1750 ನಿಗದಿಪಡಿಸಲಾಗಿದೆ.
ರೈಲ್ವೆ ಸಂಚಾರ :
ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕೆಂದು ರೈಲ್ವೆ ಇಲಾಖೆ ಮೂರು ತಿಂಗಳ ಕಾಲ ಈ ರೈಲು ಸಂಚರಿಸುವ ಕುರಿತು ಹೇಳಿದೆ. ಅದರ ಲಿಸ್ಟ್ ಈ ಕೆಳಗೆ ನೀಡಲಾಗಿದೆ. ಶಬರಿಮಲೆಗೆ ತೆರಳುವ ಭಕ್ತರು ಗಮನಿಸಿ.
ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06083) ಕೊಚುವೇಲಿ ನಿಲ್ದಾಣದಿಂದ ನ.12 ರಿಂದ ಜನವರಿ 28 ವರಗೆ ಪ್ರತಿ ಮಂಗಳವಾರ ಸಂಜೆ 6.05ಕ್ಕೆ ಹೊರಟು, ಮರುದಿನ ದಿನ 10.55 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು (ಸಂಖ್ಯೆ 06084) ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನ.13 ರಿಂದ ಜನವರಿ 29ವರಗೆ ಪ್ರತಿ ಬುಧವಾರ ಇರಲಿದೆ. ಈ ರೈಲು ಮಧ್ಯಾಹ್ನ 12.45ಕ್ಕೆ ಹೊರಟು, ಮರುದಿನ ದಿನ ಬೆಳಗ್ಗೆ 6.45ಕ್ಕೆ ಕೊಚುವೇಲಿ ತಲುಪಲಿದೆ.