ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ. ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ. ಬೆಳಗಾವಿಯ ವಡ್ಡರವಾಡಿಯಲ್ಲಿ ಅಮಾನವೀಯ ಘಟನೆ. ಮಗಳು ವೇಶಾವಾಟಿಕೆ ಮಾಡ್ತಿದ್ದಾಳೆ ಅಂತಾ ಆರೋಪಿಸಿ ಹಲ್ಲೆ. ಮನೆಗೆ ನುಗ್ಗಿ ಎಳೆದು ತಂದು ತಾಯಿ, ಮಗಳ ಮೇಲೆ ಹಲ್ಲೆ ಮಾಡಿ ಅಟ್ಟಹಾಸ. ಮನೆಯ ಪಕ್ಕದ ಅಷ್ಟೇಕರ್ ಕುಟುಂಬದಿಂದ ಹಲ್ಲೆ ಆರೋಪ. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ.
ಸಂಬಂಧ ಇಲ್ಲದವರು ಮನೆಗೆ ಬಂದು ಹೋಗ್ತಾರೆ.ವೇಶಾವಾಟಿಕೆ ದಂಧೆ ಮಾಡ್ತಿದೀರಿ ಅಂತಾ ಅಮಾನವೀಯವಾಗಿ ವರ್ತಿಸಿ ಹಲ್ಲೆ.ತಾಯಿ ಮಗಳನ್ನ ಮನೆ ಬಿಡಿಸಲು ಈ ರೀತಿ ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡ್ತಿದ್ದಾರೆ.
ತಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಮನವಿ. ಪುಟ್ಟ ಬಾಲಕಿ ಜೊತೆಗೆ ನಾಲ್ಕು ವರ್ಷದಿಂದ ವಾಸವಾಗಿರುವ ಮೂವರು. ಹಲ್ಲೆ ಬಳಿಕ ನ್ಯಾಯಕ್ಕಾಗಿ ಎರಡು ದಿನ ಮಾಳಮಾರುತಿ ಠಾಣೆಗೆ ಅಲೆದ್ರೂ ಸ್ಪಂದನೆ ಇಲ್ಲ.
ಮನೆಗೆ ನುಗ್ಗಿ ಹಲ್ಲೆ ಮಾಡಿ ಬಟ್ಟೆ ಹರಿದು ಹಾಕುವ ದೃಶ್ಯ ಮೊಬೈಲ್ ನಲ್ಲಿ ಸೆರೆ.ಸೋಮವಾರ ಸಂಜೆಯಿಂದ ಮನೆ ಬಿಟ್ಟು ನ್ಯಾಯ ಕೊಡಿಸಿ, ರಕ್ಷಣೆ ನೀಡಿ ಅಂತಾ ರಾಜು ಸೇಟ್ ಬೆಳಗಾವಿ ಉತ್ತರ ಶಾಸಕರು ಅವರ ಮುಂದೆ ಆದಂತ ಅನ್ಯಾಯ ಹೇಳಿಕೊಂಡರು.
ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಎಫ್‌ಐಆರ್ ದಾಖಲು. ನಿನ್ನೆ ರಾತ್ರಿ ಮೂರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ ಪೊಲೀಸರು. ಬಿಎನ್‌ಎಸ್ ಕಾಯ್ದೆಯಡಿ 115(2), 3(5), 331, 352, 74 ಸೆಕ್ಷನ್ ನಲ್ಲಿ ಪ್ರಕರಣ ದಾಖಲು. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲು.
ಬೆಳಗಾವಿ : ವರದಿಗಾರರು.
ದಯಾನಂದ. ಎಂ. ಸಂಪೂರ್ಣನ್ಯೂಸ್
