ಬಾಗಲಕೋಟೆ : ಆನ್ ಲೈನ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀಧಿಸುವ ಮುನ್ನ ಈ ಸ್ಟೋರಿ ನೋಡಿ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಈ ಘಟನೆ ನಡೆದಿದ್ದು, ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮೃತ ಯೋಧನ ಪತ್ನಿ ಬಸಮ್ಮ ಯರನಾಳ ಎಂಬ ಮಹಿಳೆಯ ಮುಂಗೈ ಹಾಗೂ ಬೆರಳುಗಳು ಚಿದ್ರ ಚಿದ್ರವಾಗಿ ತುಂಡಾಗಿದ್ದು ಮನೆಯಲ್ಲಾ ರಕ್ತ ಚೆಲ್ಲಾಡಿದೆ.
ಶಶಿಕಲಾ ಎಂಬುವವರ ಹೆಸರು ಹಾಗೂ ನಂಬರ್ ಹೊಂದಿದ್ದ ಡಿಟಿಡಿಸಿ ಪಾರ್ಸಲ್ ಕೊರಿಯರ್ ಬಂದಿದೆ. ಕೊರಿಯರ್ ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆಯಲು ಹೇಳಿದ್ದಾರೆ.
ಕೊರಿಯರ್ ಪಡೆದ ನಂತರ ಶಶಿಕಲಾ ಬಸಮ್ಮ ಅವರಿಗೆ ಕೊರಿಯರ್ ಓಪನ್ ಮಾಡಲು ಹೇಳಿದ್ದಾರೆ. ಒಪನ್ ಮಾಡಿದಾಗ ಹೇರ್ ಡ್ರೈಯರ್ ಇತ್ತು. ಆದ್ರೆ ಇಲ್ಲಿ ಟ್ವಿಸ್ಟ್ ಏನ್ನೆದರೆ, ಶಶಿಕಲಾ ಯಾವುದೇ ಆನ್ ಲೈನ್ ಬುಕಿಂಗ್ ಮಾಡಿರಲಿಲ್ಲವಂತೆ, ಹಾಗಾಗಿ ಆಣ್ ಮಾಡಿ ನೋಡಿ ಎಂದಿದ್ದಾರೆ.
ಹಾಗಾಗಿ ಬಸಮ್ಮ ಸ್ವಿಚ್ ಹಾಕಿ ಹೇರ್ ಡ್ರೈಯರ್ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಜೋರಾಗಿ ಸದ್ದು ಬಂದಿದೆ. ಏನಾಯ್ತು ಎಂದು ಮನೆಯವರು ಬಂದು ನೋಡಿದಾಗ ಮುಂಗೈ ಹಾಗೂ ಬೆರಳುಗಳು ಚಿದ್ರ ಚಿದ್ರವಾಗಿ ತುಂಡಾದ ಬಿದ್ದಿದ್ದು, ತಕ್ಷಣ ಬಸಮ್ಮನನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.
ಇದೀಗ ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶಶಿಕಲಾ ಹೇರ್ ಡ್ರೈಯರ್ ಆರ್ಡರ್ ಮಾಡದೆ ಇದ್ದರು ಅವರ ಹೆಸರಲ್ಲಿ ಹೇರ್ ಡ್ರೈಯರ್ ಕೊರಿಯರ್ ಹೇಗೆ ಬಂತು ,ಆರ್ಡರ್ ಮಾಡಿದವರು ಯಾರು? ಹಣ ಸಂಧಾಯ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಪಾರ್ಸಲ್ ಬಂತು ಎಂದು ಇಳಕಲ್ ನಗರ ಪೊಲೀಸರಿ ತನಿಖೆ ನಡೆಸುತ್ತಿದ್ದಾರೆ.

