ಐಕಾನ್ ಸ್ಟಾರ್ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸೆನ್ಸಾರ್ ಬೋರ್ಡ್ U/A ಪ್ರಮಾಣ ಪತ್ರ ನೀಡಿದೆ. ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ಡಿ.5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.
‘ಪುಷ್ಪ 2’ ಕಳ್ಳಸಾಗಣೆದಾರರ ಸಿನಿಮಾ ಆಗಿರುವ ಕಾರಣ ಕೆಲವು ಸಂಭಾಷಣೆಗಳು ಮತ್ತು ದೃಶ್ಯಗಳನ್ನು ಸಹ ಬದಲಾಯಿಸಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯಾವುದೇ ಹೆಚ್ಚಿನ ಕಟ್‌ಗಳು ಇಲ್ಲದೆ ಯು/ಎ ಪ್ರಮಾಣ ಪತ್ರವನ್ನು ಸಿನಿಮಾಕ್ಕೆ ನೀಡಲಾಗಿದೆ.

