ನಟಿ ಸಿಲ್ಕ್ ಸ್ಮಿತಾ ಯಾರಿಗೆ ಗೊತ್ತಿಲ್ಲ? ಬರೋಬ್ಬರಿ 5 ಭಾಷೆಗಳಲ್ಲಿ 450 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಿಲ್ಕ್ ಸ್ಮಿತಾ. ಖ್ಯಾತ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಘೋಷಣೆಯಾಗಿದೆ. ಜಯರಾಮ್ ಸಂಕರನ್ ನಿರ್ದೇಶನದಲ್ಲಿ ಸಿಲ್ಕ್ ಸ್ಮಿತಾಳ ಜೀವನ ಚರಿತ್ರೆ ತೆರೆಯ ಮೇಲೆ ಮೂಡಿಬರಲಿದೆ. ಈ ಚಿತ್ರವನ್ನು ವಿಜಯ್ ಅಮೃತರಾಜ್ ಅವರು ಎಸ್‌ಟಿಆರ್‌ಐ (STRI Cinemas) ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ನಟಿ ಸಿಲ್ಕ್ ಸ್ಮಿತಾ ಪಾತ್ರವನ್ನು ನಟಿ ಚಂದ್ರಿಕಾ ರವಿ ಅವರು ಪೋಷಿಸಲಿದ್ದಾರೆ. ಈ ಚಿತ್ರವು 2025ರ ಶೂರುವಿನಲ್ಲಿ ಶೂಟಿಂಗ್ ಶುರುಮಾಡಲಿದ್ದು ಭಾರೀ ನಿರೀಕ್ಷೆ ಮನೆಮಾಡಿದೆ.
ಇದೀಗ, ಸಿಲ್ಕ್ ಸ್ಮಿತಾ ಅವರ ಜನ್ಮದಿನವಾದ ಡಿಸೆಂಬರ್ 02ರಂದು (02 December) ಈ ವಿಶೇಷ ಘೋಷಣೆ ಮಾಡುವ ಮೂಲಕ, ವಿಶೇಷ ವೀಡಿಯೊವನ್ನು ಅನಾವರಣಗೊಳಿಸಿದ್ದಾರೆ.
“ಸಿಲ್ಕ್ ಸ್ಮಿತಾ- ಕ್ವೀನ್ ಆಫ್ ದಿ ಸೌತ್” ಎಂಬ ಶೀರ್ಷಿಕೆಯ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್ ಸ್ಮಿತಾ ಅವರ ಪಾತ್ರವನ್ನು ತೆರೆಮೇಲೆ ತರುವವರು ಯಾರು ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಚಂದ್ರಿಕಾ ರವಿ, ತೆರೆಮೇಲೆ ಸ್ಮಿತಾ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾವನ್ನು ಜಯರಾಮ್ ಸಂಕರನ್ ನಿರ್ದೇಶನ ಮಾಡಲಿದ್ದು, ಎಸ್.ಬಿ ವಿಜಯ್ ಅಮೃತ್‌ರಾಜ್ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಸಿಲ್ಕ್ ಸ್ಮಿತಾ ಅವರ ಜನ್ಮದಿನದಂದು ಈ ವಿಶೇಷ ಘೋಷಣೆ ಮಾಡುವ ಮೂಲಕ, ವಿಶೇಷ ವೀಡಿಯೊವನ್ನು ಅನಾವರಣಗೊಳಿಸಿದ್ದಾರೆ.

