ಕೋಲಾರ : ಮುಳಬಾಗಿಲು ತಾಲ್ಲೂಕು ನಂಗಲಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕರ ಕನಸಾಗಿದ್ದ ನಂಗಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆೇರಿಸಿ CHC ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದ ಶಂಕುಸ್ಥಾಪನೆ ಇಂದು ನೆರವೇರಿತು.
ಇಂದು ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯ ಸಚಿವರು ದಿನೇಶ್ ಗುಂಡುರಾವ್, ಶಾಸಕರು ಶ್ರೀ ಸಮೃದ್ಧಿ ಮಂಜುನಾಥ್ ರವರು ಶಂಕುಸ್ಥಾಪನೆ ನೆರವೇರಿಸಿದರು.
ಸತತವಾಗಿ ಸುಮಾರು ವರ್ಷಗಳಿಂದ ನಂಗಲಿ ಗ್ರಾಮದ ಸುತ್ತಮುತ್ತಲಿನ 36ಗ್ರಾಮಗಳ ಸಾರ್ವಜನಿಕರು ಸುಮಾರು 25,000 ಜನಸಂಖ್ಯೆಯುಳ್ಳ ಆಸ್ಪತ್ರೆ ಮೇಲ್ದರ್ಜೇಗೇರಿಸಲು ಹೋರಾಟಗಳು ಮಾಡಿದ್ದು ಇಂದು ಶಂಕುಸ್ಥಾಪನೆಯಾಗಿರುವುದು ಸಂತಸ ತಂದಿದೆ. ನಿರಂತರ ಶ್ರಮಕ್ಕೆ ಫಲ ಸಿಕ್ಕಿದಿಯೆಂದು ಖುಷಿತಂದಿದೆ.
ಮಾನ್ಯ ಶಾಸಕರು ಶ್ರೀ ಸಮೃದ್ಧಿ ಮಂಜಣ್ಣರವರು ನಮ್ಮ ನಂಗಲಿ ಗ್ರಾಮದ ಬಗ್ಗೆ ವಿಶೇಷ ಕಾಳಜಿವಹಿಸಿ ಆಸ್ಪತ್ರೆಯ ಮೇಲ್ದರ್ಜೆಗೇರಿಸಲು ಮುತುವರ್ಜಿ ವಹಿಸಿದಕ್ಕೆ ಧನ್ಯವಾದಗಳು ಅಂತ ನಂಗಲಿ ಕಿಶೋರ್ ಯುವ ಮುಖಂಡರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಶ್ರೀ ಅಕ್ರಂಪಾಷಾ, ಜಿಲ್ಲಾ ಪೋಲೀಸ್ ವರೀಷ್ಠಾಧಿಕಾರಿಗಳು ಶ್ರೀ ನಿಖಿಲ್ ರವರು, ತಾಲ್ಲೂಕು ವೈದ್ಯಾಧಿಕಾರಿಗಳು ಸುಗುಣ ರವರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀ NC ಶ್ರೀಧರ್ ರವರು, ಗ್ರಾಮ ಪಂಚಾಯಿತಿ ಸದಸ್ಯರು ಅಶ್ವಿನಿ ಪ್ರಸನ್ನಕುಮಾರ್, ರಾಜಾರೆಡ್ಡಿ, ಶ್ರೀನಿವಾಸ್, ಮುರುಗನ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ನಾಗೇಶ್ ಹಾಗೂ ಗ್ರಾಮಸ್ಥರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ : ಅರುಣ್ ಕುಮಾರ್ ಬಿ.ಎಸ್

