ಬೆಳಗಾವಿ : ಸಂವಿದಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಕುರಿತು ಅವಹೇಳಕಾರಿ ಹೇಳಿಕೆ ಕೊಟ್ಟ ಹಿನ್ನಲ್ಲೇ ದಲಿತ ನಾಯಕರಿಂದ ಬಾರಿ ಪ್ರತಿಭಟನೆ ನಡೆಸಲಾಯಿತು. ನಾಲಾಯಕ ಅಮಿತ್ ಶಾ ಅವರನ್ನು ಗೃಹ ಸಚಿವ ಸ್ಥಾನದಿಂದ ಉಚ್ಚಾಟನೆ ಮಾಡಬೇಕು…
ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಮುಂಭಾಗದಲ್ಲಿ ಧರಣಿಗಿಳಿದ ಭೀಮ್ ಬಂದುಗಳು “ಅಂಬೇಡ್ಕರ್ ಜಪ ಬಿಟ್ಟು ಭಗವಾನ”ನ ಜಪ ಮಾಡಿ ಎಂದು ಹೇಳಿದ ಅಮಿತ್ ಅವರನ್ನು ಬಿಜೆಪಿ ಪಕ್ಷದಿಂದ ಕಿತ್ತೊಗೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸುತ್ತೇವೆ, ಗೃಹ ಸಚಿವ ಸ್ಥಾನದಿಂದ ಕೈಬಿಡದೆ ಇದ್ರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟು ಮಾಡುತ್ತೇವೆ, ಯಾವ ದೇವರುಗಳು ನಮಗೆ ಸ್ಥಾನ ಮಾನ ಕೊಟ್ಟಿಲ್ಲ, ನಮಗೆ ಅಂಬೇಡ್ಕರ್ ಮಾತ್ರ ದೇವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

