1.ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ದಶಕಗಳಿಂದ ಕಾಡುತ್ತಿದ್ದ ನಕ್ಸಲ್ವಾದ ಅಂತಿಮ ಹಂತಕ್ಕೆ ತಲುಪಿದ್ದು, ಆರು ಮಂದಿ ನಕ್ಸಲರು ಶರಣಾಗಲು ನಿರ್ಧರಿಸಿದ್ದಾರೆ. ಶರಣಾಗತಿಗೂ ಮುನ್ನ ನಕ್ಸಲರು ಸರ್ಕಾರಕ್ಕೆ ಪತ್ರ ಬರೆದಿದ್ದು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಒಟ್ಟು ಆರು ಜನ ನಕ್ಸಲ್ರು ಶರಣಾಗಲಿದ್ದಾರೆ.
2.ತಮಿಳು ನಟ ವಿಶಾಲ್ ಅವರು ‘ಮದ ಗಜ ರಾಜ’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕೈ ನಡುಗುತ್ತಿದ್ದ ದೃಶ್ಯ ವೈರಲ್ ಆಗಿದೆ. ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ವಿಶಾಲ್ ಅವರಿಗೆ ಜ್ವರ ಇದ್ದ ಕಾರಣ ನಡುಕ ಉಂಟಾಗಿತ್ತೆಂದು ಸ್ಪಷ್ಟನೆ ಸಿಕ್ಕಿದೆ. ಅವರ ಡೆಡಿಕೇಷನ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಜನವರಿ 12 ರಂದು ಬಿಡುಗಡೆಯಾಗಲಿದೆ.
3.ಕಾಣೆಯಾದ ಬೀದಿ ನಾಯಿಗಾಗಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಲ್ಯಾಣ ನಗರದ HRBR ಲೇಔಟ್ ನಿವಾಸಿ ಡಾ. ಪುನೀತಾ ರಂಗಸ್ವಾಮಿಯವರು ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಬೀದಿ ನಾಯಿಗೆ ಹಿಂಸೆ ನೀಡಿ, ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ಪುನೀತಾ ತಮ್ಮದೇ ಲೇಔಟ್ನ ಅನಿಲ್ ಎಂಬುವರು ವಿರುದ್ಧ ಆರೋಪ ಕೂಡ ಮಾಡಿದ್ದಾರೆ.
4.ಮಾರುಕಟ್ಟೆಯಲ್ಲಿ ಕೆಂಪು ಚೆಲುವೆ ಟೊಮೆಟೊ ಬೆಲೆ ಪಾತಾಳಕ್ಕೆ ಇಳಿದಿದೆ. ಈ ಬಾರಿ ಉತ್ತಮ ಬೆಲೆ ಸಿಗುವ ಕನಸಿನಲ್ಲಿ ಹೆಚ್ಚಿನ ಟೊಮೆಟೊ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಟೊಮೆಟೊ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡು ಕಂಗಾಲಾಗಿದ್ದಾರೆ.ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಟೊಮೆಟೊ ಖರೀದಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ.ಸದ್ಯ ಈಗ ಬೆಲೆ ಇಳಿಕೆಯಾಗಿದ್ದು ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
5.ಹೊಸವರ್ಷದ ಶುಭಾಶಯ ಕೋರುವ ನೆಪದಲ್ಲಿ ವೈದ್ಯರಿಗೆ ವಿಧಾನ ಪರಿಷತ್ ಧನಂಜಯ್ ಸರ್ಜಿ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಯನ್ನು ಸೌಹಾರ್ದ ಪಟೇಲ್ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಾಗಿದ್ದು, ವೈದ್ಯರ ಮೇಲಿನ ದ್ವೇಷದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
6.ಬೆಂಗಳೂರು ಸೇರಿದಂತೆ ಮೆಟ್ರೋ ಸಿಟಿಗಳಲ್ಲಿ ಮನೆ ಜಾಗದ ಬೆಲೆ ಭರ್ಜರಿ ಹೆಚ್ಚಳವಾಗಿದೆ. 2023 -24ನೇ ಸಾಲಿನಲ್ಲಿದ್ದ ಮನೆ ಬೆಲೆಗೂ ಈಗ ಇರುವ ಬೆಲೆಗೂ ಸಾಕಷ್ಟು ವ್ಯತ್ಯಾಸವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 7 ನಗರಗಳಲ್ಲಿ ಮನೆಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಪ್ರತಿ ಚದರ ಮೀಟರ್ ಗೆ ಶೇ 28 ಪ್ರತಿಶತ ಹೆಚ್ಚಳವಾಗಿದೆ
7.ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಕ್ಕೆ ತಲೆ ನೋವಾಗಿದ್ದ ಕಾಡುಗಳ್ಳ ವೀರಪ್ಪನ್ ನೆನಪು ಇಂದಿಗೂ ಮಾಡಿಕೊಳ್ಳಲಾಗುತ್ತದೆ. ವೀರಪ್ಪನ್ ಸಂಚಾರ ನಡೆಸಿದ ಕಾಡಿನಲ್ಲಿ ಈಗ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಚಿಂತನೆಯಲ್ಲಿದ್ದು 22 ಕಿ. ಮೀ. ಉದ್ದದ ಈ ಸಫಾರಿ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಇದೆ. ಹಾಗೇನೇ ಈ ಸಫಾರಿಯಲ್ಲಿ ಪ್ರವಾಸಿಗರಿಗೆ ಆನೆ, ಜಿಂಕೆ, ಕರಡಿ ಮುಂತಾದ ಪ್ರಾಣಿಗಳನ್ನು ವೀಕ್ಷಣೆ ಮಾಡುವ ಅವಕಾಶವಿದೆ.
8.ಮ್ಮಪ್ಪನ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನ ಮಹತ್ವದ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಮುಂದಿನ ಹತ್ತು ದಿನಗಳ ಅವಧಿಗೆ ವೈಕುಂಠ ದ್ವಾರವನ್ನು ತೆರೆದಿಡಲು ಟಿಟಿಡಿ ನಿರ್ಧರಿಸಿದೆ. ಅಂದರೆ ಜನವರಿ 10ರಿಂದ ಜನವರಿ19ರವರೆಗೆ ವೈಕುಂಠ ದ್ವಾರ ತೆರೆದಿರಲಿದ್ದು. ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.
9.ಶೇಕಡಾ 60 ರ ಕಮಿಷನ್ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಜೆಟ್‌ನಲ್ಲಿನ ಅನುದಾನ ಕಡಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿನ ನಿಧಾನಗತಿಯನ್ನು ಅಂಕಿಅಂಶ ಸಮೇತ ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ರಾಜ್ಯ ದಿವಾಳಿಯತ್ತ ಸಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
10.ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಯುವಕನ ಈ ಒಂದು ಸಾಹಸ ಹಾಗೂ ಧೈರ್ಯಕ್ಕೆ ಸ್ವತಃ ಅರಣ್ಯ ಸಂಬಂಧಿಗಳೇ ಶಾಕ್ ಗೆ ಒಳಗಾಗಿದ್ದಾರೆ.

