ಬಾದಾಮಿ : ಬಾಗಲಕೋಟ ಜಿಲ್ಲೆಬಾದಾಮಿ ತಾಲೂಕಿನಲ್ಲಿ ಶ್ರೀ ಬನಶಂಕರಿ ಜಾತ್ರೆಗೆ ಆದೂರಿಯಾಗಿ ನೆರವೇರಿತು, ಜಾತ್ರೆಗೆ ಬಂದ ಭಕ್ತರ ಬಂಗಾರದ ತಾಳಿ ಚೈನ ಹಾಗೂ ಮೊಬೈಲ್ ಹೀಗೆ ಕಳೆದುಕೊಂಡ ಭಕ್ತರು ಜಾತ್ರಾ ಪೊಲೀಸ್ ಸ್ಟೇಷನನಲ್ಲಿ ಕಂಪ್ಲೇಟ್ ಕೊಡುತ್ತಿರುವ ದೃಶ್ಯ ಕಂಡುಬಂದಿತು.
ಜಾತ್ರೆಗೆ ಬಂದು ನಮ್ಮ ಬಂಗಾರ ಕಳೆದುಕೊಂಡವರು ಕಣ್ಣೀರು ಹಾಕುತ್ತಿರುವ ಭಕ್ತರು ಇದಕ್ಕೆ ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ಸಾಕಷ್ಟು ಕಂಪ್ಲೇಟ್ ಆದರೂ ಕಳ್ಳರು ಸಿಕ್ಕರೂ ಏನು ಕ್ರಮಗಳು ತೆಗೆದುಕೊಳ್ಳುತ್ತಿಲ್ಲ ಎಂದು ಭಕ್ತರ ಆಕ್ರೋಶ ವ್ಯಕ್ತ ಪಡಿಸಿದರು.
ಬಾದಾಮಿಯ ಸನ್ಮಾನ್ಯ ಶ್ರೀ ಭೀಮಸೇನ್ ಬಿ ಚಿಮ್ಮನಕಟ್ಟಿ ಶಾಸಕರು ಇಂದು ಶ್ರೀ ಬನಶಂಕರಿ ದೇವಿ ರಥೋತ್ಸವ ಕ್ಕೆ ಚಾಲನೆ ನೀಡಿದರು ಚಾಲುಕ್ಯರ ಆರಾಧ್ಯ ದೇವಿ ಶ್ರೀ ಬನಶಂಕರಿ ಜಾತ್ರೆ ಬಹಳ ವಿಜೃಂಭಣೆಯಿಂದ ಜರುಗಿತು.
ಈ ಜಾತ್ರೆ ಉತ್ತರ ಕರ್ನಾಟಕದಲ್ಲಿ ತುಂಬಾ ಹೆಸರುವಾಸಿ ಯಾಗಿದೆ ಈ ಜಾತ್ರೆಗೆ ಬೇರೆ ರಾಜ್ಯ ದಿಂದ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ನಮ್ಮ ಕರ್ನಾಟಕ ದಲ್ಲಿ ಸಹ ಭಕ್ತರ ದಂಡು ಹರಿದು ಬಂದಿದೆ ಹಾಗೂ ಈ ಜಾತ್ರೆ ಯ ವಿಶೇಷ ಎನೆಂದರೆ ಹಿರಿಯರು ಹೇಳುವ ಅನುಭವದ ಮಾತು ಏನೆಂದರೆ ತಂದೆ ತಾಯಿ ಒಂದು ಬಿಟ್ಟು ಈ ಜಾತ್ರೆಯಲ್ಲಿ ಎಲ್ಲಾ ಸಿಗುತ್ತದೆ ಅಂತಾ ಹೇಳುತ್ತಾರೆ ಇಲ್ಲಿ ಕರ್ನಾಟಕದ ಹಲವು ನಾಟಕ ಕಂಪನಿಗಳು ಸುಮಾರು 10-15 ದು ಕಂಪನಿಗಳು ಮತ್ತು ಚಲನಚಿತ್ರಗಳ ಟೆಂಟು ಕೊಡಾ ಇವೆ ಹಾಗೂ ಹಲವು ಮಾರಾಟ ಮಳಿಗೆ ಇದೆ.
ಈ ಭಾಗದ ಬಾದಾಮಿ ತಾಲೂಕಿನ ಸನ್ಮಾನ್ಯ ಶ್ರೀ ಭೀಮಸೇನ್ ಬಿ ಚಿಮ್ಮನಕಟ್ಟಿ ಶಾಸಕರು ಜಾತ್ರೆಯ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡು ಎಲ್ಲಾ ಇಲಾಖೆಯ ಅಧಿಕಾರಿಗಳು ಸೂಚನೆ ಕೊಟ್ಟಿದ್ದು ಅದರ ಪ್ರಕಾರ್ ನೀರಿನ ವ್ಯವಸ್ಥೆ ಆಸ್ಪತ್ರೆಯ ಕರೆಂಟು ರಸ್ತೆ ಸ್ವಚ್ಚತೆ ವಾಹನಗಳ ಪಾರ್ಕಿಂಗ್ ಬಸ್ ಗಳ ವ್ಯವಸ್ಥೆ ಒಟ್ಟಿನಲ್ಲಿ ಜಾತ್ರೆ ತುಂಬಾ ವಿಜೃಂಭಣೆ ಯಿಂದ ಜರುಗಿತು ಈ ಜಾತ್ರೆಗೆ ಬಂದ ಭಕ್ತರು ಶಾಸಕರರನ್ನು ಕಂಡು ಜಾತ್ರಾ ಶುಭಾಶಯಗಳು ತಿಳಿಸಿದರು ಈ ಜಾತ್ರೆಯಲ್ಲಿ ಮೊಬೈಲ್ ಬಂಗಾರ ಬೆಲೆ ಬಾಳುವ ವಸ್ತುಗಳ ಕಳ್ಳತನವಾಗುತ್ತವೆ
ವರದಿ : ಬಸವರಾಜ ಕೆರೂರ ಸಂಪೂರ್ಣ ನ್ಯೂಸ್

