ಚಿಕ್ಕೋಡಿ : ಬಾಗಲಕೊಟ ಜಿಲ್ಲೆಯ ಮುದೋಳ ತಾಲೂಕಿನ ಹಲಕಿ ಗ್ರಾಮದ ಜೆಕೆ ಸಿಮೆಂಟ್ ಕಾರ್ಖಾನೆಯಿಂದ ಪುಣೆ ಶಹರಕ್ಕೆ ಹೊರಟ್ಟಿದ್ದ ಬೃಹತ್ ಗಾತ್ರದ ಟ್ರಕ್ ಪಲ್ಟಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೂಡಲಗಿ ತಾಲೂಕೀನ ಗುರ್ಲಾಪುರದ ಜತ್ತ-ಜಾ0ಬೋಟಿ ರಸ್ತೆ ಮೇಲೆ ಟ್ರಕ್ ನ ಟಯರ್ ಬ್ಲಾಸ್ಟ ಆಗಿದ್ದು ಚಾಲಕನು ಕುಡಿದು ಅಮಲಿನಲ್ಲಿ ಟೈಯರ್ ಬ್ಲಾಸ್ಟ ಆಗಿದನ್ನು ಲೆಕ್ಕಿಸದೆ ಗುರ್ಲಾಪೂರದಿಂದ ಹಾರೂಗೇರಿ, ಹಾರೂಗೇರಿ ಕ್ರಾಸದಿಂದ 40 ರಿಂದ 50 ಸ್ಥಳಿಯ ಬೈಕಗಳಿಂದ ಟ್ರಕ್ ಬೆನ್ನಟ್ಟಿದರು ಯಾರಿಗು ಲೆಕ್ಕಿಸದೆ, ಅತಿ ವೇಗವಾಗಿ ಮುಂದಿನ ಗಾಲಿಯ ಟೈರ್ ಇಲ್ಲದೆ ಚಲಾಯಿಸಿ ಟ್ರಕ್ ಚಾಲಕ ಟ್ರಕ್ ನಿಯಂತ್ರಣಕ್ಕೆ ಬರದೇ ಸುಮಾರ ಹತ್ತಾರೂ ಬೈಕಗಳಿಗೆ ಗುದ್ದಿ ಜಕಂ ಮಾಡಿದ್ದಾನೆ
ಕೊನೆಗೆ ಮಿರಜ ಜಮಖಂಡಿ ರಸ್ತೆ ಮೇಲೆ ಕುಡಚಿ ಸಮೀಪದ ನಾಲ್ಕೆನೆಯ ಮೈಲ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಿಮೇಂಟ ತುಂಬಿದ ಟ್ರಕ್ ಪಲ್ಲಟ್ಟಿಯಾಗಿ ಚಾಲಕ ಟ್ರಕ್ ನಿಂದ ಹೋರ ಬರಲು ಪ್ರಯತ್ನಿಸಿದರೂ ಚಾಲಕನ ಮೇಲೆ ಟ್ರಕ್ ಬಿದ್ದ ಪರಿಣಾಮ ಚಾಲಕ ಶೇಕ್ ಖಯುಮಂ (26 ) ಸ್ಥಳದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿದೆ ,
ಮೃತ ವ್ಯಕ್ತಿಯು ಮಹಾರಾಷ್ಟ್ರದ ರಾಜ್ಯದ ನಾಂದೆಡ ಜಿಲ್ಲೆಯ ಮುಖೇಡ ತಾಲೂಕಾ , ಕೇರೂರು ಗ್ರಾಮದ ವರು ಎಂದು ತಿಳಿದು ಬಂದದಿದೆ , ಮೃತ ವ್ಯಕ್ತಿಯನ್ನ ಮರಣೋತ್ತರ ಪರಿಕ್ಷೇಗಾಗಿ ಕುಡಚಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ,ಈ ಪ್ರಕರಣ ಕುಡಚಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ,
ವರದಿ : ಎಂ. ಕೆ. ಸಪ್ತಸಾಗರ,

