ಬೆಳಗಾವಿ : ಠೇವಣಿದಾರರ ಹಣ ಮರು ಪಾವತಿಸದ ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್, ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಬೈಲಹೊಂಗಲನ ಅಧ್ಯಕ್ಷರಾದ ಡಾ. ವಿ.ಎಸ್. ಸಾಧುನವರ ವಿರುದ್ಧ ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಇಂದು ಬೆಳಗಾವಿಗೆ ಆಗಮಿಸಿದ ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್, ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಬೈಲಹೊಂಗಲದ ಗ್ರಾಹಕರು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿ, ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು
ಈ ವೇಳೆ ಮಾತನಾಡಿದ ವೈದ್ಯರೊಬ್ಬರು ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್, ಕ್ರೇಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 119y ವೈದ್ಯರು ತಮ್ಮ ಠೇವಣಿಗಳನ್ನು ಇಟ್ಟಿದ್ದಾರೆ. ಅವಧಿ ಮುಗಿದರೂ ಹಣವನ್ನು ಮರಳಿ ನೀಡುತ್ತಿಲ್ಲ. ಕರೆ ಮಾಡಿದರೇ ಸ್ವೀಕರಿಸುತ್ತಿಲ್ಲ.
ನಮ್ಮೆಲ್ಲ ಹಣವನ್ನು ತಮ್ಮ ಉದ್ಯೋಗಕ್ಕೆ ಬಳಸಿಕೊಂಡಿದ್ದಾರೆ. ಇನ್ನು 5 – 6 ವರ್ಷದ ಹಿಂದೆಯೂ ಇಂತಹದ್ದೇ ಗೋಲಮಾಲ್ ನಡೆದಿತ್ತು. ಆದರೇ ಬಡ್ಡಿ ದರವನ್ನು ಹೆಚ್ಚಿಸಿ ಮತ್ತೇ ಗ್ರಾಹಕರನ್ನು ತನ್ನೆಡೆ ಆಕರ್ಷಿಸಿತ್ತು. ಸುಮಾರು 500 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕಿಗೆ ಮರಳಿ ನೀಡಬೇಕಾಗಿದೆ.
ಠೇವಣಿ ಇಟ್ಟ ಗ್ರಾಹಕರಿಗೆ ಬಡ್ಡಿಯೊಂದಿಗೆ ಹಣವನ್ನು ಮರಳಿಸಬೇಕು. ಸೌಹಾರ್ದ ಕಾನೂನನ್ನು ರದ್ದುಪಡಿಸಬೇಕು. ವಂಚನೆಗೈದ ಸೌಹಾರ್ದ ಸೊಸೈಟಿಯ ಚೇರಮನ್ ಮತ್ತು ಆಡಳಿತ ಮಂಡಳಿಯವರನ್ನು ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕೆಂದು ಮಹಾರುದ್ರಪ್ಪ ನೀರಲಗಿ ಒತ್ತಾಯಿಸಿದರು.
ವರದಿ. ದಯಾನಂದ. ಎಂ.

