ಕೋಲಾರ ಜಿಲ್ಲಾ ಕಛೇರಿ ಮುಂದೆ ದಲಿತ ಮುಖಂಡರ ಪ್ರತಿಭಟನೆ
ಕೋಲಾರ ಉಪವಿಭಾಗಧಿಕಾರಿ ಡಾ. ಮೈತ್ರಿ ರವರ ಪರವಾಗಿ ಘೋಷಣೆ
ಕರ್ತವ್ಯ ನಿರ್ವಹಣೆಗೆ ನಿರಂತರವಾಗಿ ಅಡ್ಡಿ ಉಂಟು ಮಾಡುತ್ತಿರುವ ಪ್ರಕರಣ
ಹೇಳಿಕೆ ನೀಡಿದ ಬಹುಜನ ಒಕ್ಕೂಟ ರಾಜ್ಯ ಅಧ್ಯಕ್ಷರು ಡಾ ಸಂಗಸಂದ್ರ ವಿಜಿ
ಕೋಲಾರ : ಕೋಲಾರ ಜಿಲ್ಲಾ ಕಛೇರಿ ಮುಂದೆ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು. ಕೋಲಾರ ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ನಿರಂತರವಾಗಿ ಅಡ್ಡಿ ಉಂಟು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು. ಉಪ ವಿಭಾಗ ಅಧಿಕಾರಿ ಡಾಕ್ಟರ್ ಮೈತ್ರಿ ವಿರುದ್ಧ ಇತ್ತೀಚಿಗೆ ನಡೆದಿರುವ ಘಟನೆಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬಹುಜನ ಒಕ್ಕೂಟ ರಾಜ್ಯ ಅಧ್ಯಕ್ಷರು ಡಾ ಸಂಗಸಂದ್ರ ವಿಜಿ ಕುಮಾರ್ ತಿಳಿಸಿದರು.
ಸಂವಿಧಾನ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಿರುವ ಅದೆಷ್ಟೋ ದಕ್ಷ ಮತ್ತು ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಗಳ ಮೇಲೆ ದೌರ್ಜನ್ಯ, ಕಿರುಕುಲ, ಹತ್ಯೆಗಳು ನಡೆದಿದ್ದು ಅವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಅದೆಷ್ಟೋ ಕಾಣದಂತ ಕೈಗಳು ಅವರ ವಿರುದ್ಧ ಕೆಲಸ ಮಾಡುತ್ತಿರುತ್ತವೆ.
ಜಿಲ್ಲೆಯ ರಾಜ್ಯದ ಗಡಿ ಭಾಗವಾಗಿದ್ದು ಅದರಲ್ಲಿಯೂ ಬರಪೀಡಿತ ಪ್ರದೇಶವಾಗಿದ್ದು ಜಿಲ್ಲೆಯಾದ್ಯಂತ ಅಮಾಯಕ ರೈತಪಿ ವರ್ಗ ಮತ್ತು ಅಮಾಯಕ ದಲಿತ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಎಸ್ ಸಿ. ಎಸ್ ಟಿ. ಒ ಬಿ ಸಿ. ಬಡ ರೈತರ ಜಮೀನು ಸಮಸ್ಯೆಗಳನ್ನು ಆ ಇತ್ತೀಚಿಗೆ ಜಾರಿಗೆ ಬಂದಂತಹ PTCL ಕಾಯ್ದೆ ಹಾಗೂ RA ಹಾಗೂ LND ಪ್ರಕರಣಗಳನ್ನು ಸಮರ್ಪಕವಾಗಿ ಕಾನೂನು ರೀತಿಯಲ್ಲಿ ಬಗೆಹರಿಸುತ್ತಿದ್ದಾರೆ. ಇಂತಹ ದಕ್ಷ ಅಧಿಕಾರಿಗಳಾಗಿರುವ ಡಾಕ್ಟರ್ ಮೈತ್ರಿ ರವರ ವಿರುದ್ಧ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರು ಗುಡುಗಿದರು.
ವರದಿ : ಅರುಣ್ ಕುಮಾರ್ ಬಿ ಎಸ್