By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಸೆಂಚುರಿ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಇಸ್ರೋ, 100ನೇ GSLV F15 ಉಪಗ್ರಹ ಉಡಾವಣೆ ಯಶಸ್ವಿ…!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Blog - ಸೆಂಚುರಿ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಇಸ್ರೋ, 100ನೇ GSLV F15 ಉಪಗ್ರಹ ಉಡಾವಣೆ ಯಶಸ್ವಿ…!

Blog

ಸೆಂಚುರಿ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಇಸ್ರೋ, 100ನೇ GSLV F15 ಉಪಗ್ರಹ ಉಡಾವಣೆ ಯಶಸ್ವಿ…!

ISRO Hits 100th Rocket Launch Milestone With Navigation Sat Mission

Published January 29, 2025
Share
3 Min Read
ISRO 100th Mission
SHARE

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ (ಜನವರಿ 29, 2025) ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಐತಿಹಾಸಿಕ 100 ನೇ ಉಡಾವಣೆಯನ್ನು ನಡೆಸುವ ಮೂಲಕ ಸೆಂಚುರಿ ಸಾಧನೆ ಮಾಡಿದೆ. NVS-02 ಉಪಗ್ರಹದೊಂದಿಗೆ GSLV-F15 ರಾಕೆಟ್ ಬಾಹ್ಯಾಕಾಶ ನಿಲ್ದಾಣದ ಎರಡನೇ ಉಡಾವಣಾ ಪ್ಯಾಡ್‌ನಿಂದ ಬೆಳಿಗ್ಗೆ 6.23 ಕ್ಕೆ ಉಡಾವಣೆಯಾಯಿತು.‌

ಇಂದು ಬೆಳಿಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎನ್’ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್’ವಿ ಬೆಂಕಿ ಉಗುಳುತ್ತಾ ನಭಕ್ಕೆ ಜಿಗಿಯಿತು. ಈ ಮೂಲಕ ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್’ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 100ನೇ ಉಡ್ಡಯನದೊಂದಿಗೆ ಇತಿಹಾಸ ಸೃಷ್ಟಿಸಿದೆ.

#WATCH | Tirupati, Andhra Pradesh: ISRO launchs its 100th mission, the NVS-02 navigation satellite aboard the launch vehicle GSLV-F15 from Sriharikota in Andhra Pradesh at 6.23 am today.

(Source: ISRO) pic.twitter.com/n5iY9N8N0p

— ANI (@ANI) January 29, 2025

1963ರಲ್ಲಿ ಮೊದಲ ಉಪಗ್ರಹ ಉಡಾಯಿಸಿ ಅಂಬೆಗಾಲಿಟ್ಟ ಭಾರತದ ಇಸ್ರೋ ಇಂದು 100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. GSLV F15 ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಇತಿಹಾಸ ರಚಿಸಿದೆ.

ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಹೊಂದಿರುವ ಜಿಯೋಸಿಂಕ್ರೋನಸ್‌ ಉಪಗ್ರಹ ಉಡ್ಡಯನ ವಾಹನ(ಜಿಎಸ್‌ಎಲ್‌ವಿ)ನ 17ನೇ ಉಡ್ಡಯನ ಇದಾಗಿದೆ. ಈ ಉಪಗ್ರಹವು ನ್ಯಾವಿಗೇಷನ್‌ ಸೆಟಲೈಟ್‌ ಎನ್‌ವಿಎಸ್‌-02(ಎರಡನೇ ತಲೆಮಾರಿನ ಎನ್‌ವಿಎಸ್‌ ಉಪಗ್ರಹ)ವನ್ನು ನಭಕ್ಕೆ ಹೊತ್ತೊಯ್ದಿದೆ.

ಈ ಎನ್‌ವಿಎಸ್‌ ಸ್ಯಾಟಲೈಟ್‌ ಭಾರತದ ನ್ಯಾವಿಗೇಷನ್‌(ಸ್ವದೇಶಿ ಜಿಪಿಎಸ್‌) ಉಪಗ್ರಹಗಳ ಜಾಲದ ಎರಡನೇ ತಲೆಮಾರಿನ ಉಪಗ್ರಹವಾಗಿದೆ. ಇದು ಭಾರತೀಯ ಉಪಖಂಡ(ಜತೆಗೆ ಅದರಾಚೆಗಿನ 1500 ಕಿ.ಮೀ. ದೂರದವರೆಗೆ)ದ ಬಳಕೆದಾರರಿಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿ ಹೊಂದಿದೆ. ಈ ಹಿಂದೆ ಜಿಎಸ್‌ಎಲ್‌ವಿ-ಎಫ್‌12 ರಾಕೆಟ್‌ ಎನ್‌ವಿಎಸ್‌-01 ಉಪಗ್ರಹವನ್ನು ಮೇ 29, 2023ರಂದು ಯಶಸ್ವಿಯಾಗಿ ಗಗನಕ್ಕೆ ಕೂರಿಸಿತ್ತು. ಇದೀಗ 50.9 ಮೀಟರ್‌ ಎತ್ತರದ ಜಿಎಸ್‌ಎಲ್‌ವಿ-ಎಫ್‌15 ರಾಕೆಟ್‌ ಎರಡನೇ ತಲೆಮಾರಿನ ಎನ್‌ವಿಎಸ್‌ ಉಪಗ್ರಹದೊಂದಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಈ ಎನ್‌ವಿಎಸ್‌-02 ಉಪಗ್ರಹವನ್ನು ಯು.ಆರ್‌.ಸ್ಯಾಟಲೈಟ್‌ ಸೆಂಟರ್‌ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು 2,250 ಕೆ.ಜಿ.ಭಾರವಿದ್ದು, ಎಲ್‌1, ಎಲ್‌5 ನ್ಯಾವಿಗೇಷನ್‌ ಪೇ ಲೋಡ್‌ ಮತ್ತು ಸಿ ಬ್ಯಾಂಡ್‌ ಜೊತೆಗೆ ಹೆಚ್ಚುವರಿಯಾಗಿ ಎಸ್‌ ಬ್ಯಾಂಡ್‌ಗಳನ್ನು ಹೊಂದಿದೆ. ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ಕೃಷಿ, ನೌಕೆಗಳ ನಿರ್ವಹಣೆ, ಮೊಬೈಲ್‌ ಲೊಕೇಷನ್‌ ಆಧಾರಿತ ಸೇವೆಗಳು, ಸ್ಯಾಟಲೈಟ್‌ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್‌ ಆಫ್‌ ಥಿಂಗ್ಸ್‌((IoT)) ಆಧಾರಿತ ಅಪ್ಲಿಕೇಷನ್‌ಗಳು, ತುರ್ತು ಮತ್ತು ಸಮಯಾಧಾರಿತ ಸೇವೆಗಳಿಗೆ ನೆರವು ನೀಡಲಿದೆ.

ಭಾರತೀಯ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಯ (IRNSS) ಉಪಗ್ರಹ ತಾರಾಮಂಡಲವು ಒಟ್ಟು 7 ಉಪಗ್ರಹಗಳನ್ನು ಹೊಂದಿರುತ್ತದೆ. 100ನೇ ಉಡಾವಣೆಯೊಂದಿಗೆ, ಭಾರತವು ಈಗ 7 ರಲ್ಲಿ 5 ಅನ್ನು ಬಾಹ್ಯಾಕಾಶದಲ್ಲಿ ಹೊಂದಿದೆ. ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್ (NavIC) ಭಾರತದ ಸ್ವತಂತ್ರ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಯಾಗಿದ್ದು, ಭಾರತದಲ್ಲಿ ಮತ್ತು ಭಾರತೀಯ ಭೂಪ್ರದೇಶದಿಂದ ಸುಮಾರು 1500 ಕಿ.ಮೀ.ವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಇಸ್ರೋ ಮುಖ್ಯಸ್ಥರ ಹರ್ಷ :
“2025 ರ ಮೊದಲ ಉಡಾವಣೆಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಇರಿಸಲಾಗಿದೆ” ಎಂದು ಈ ತಿಂಗಳ ಆರಂಭದಲ್ಲಿ ಬಾಹ್ಯಾಕಾಶ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.

ಈ ವರ್ಷದ 2025 ರ ಮೊದಲ ಉಡಾವಣೆ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋದ ಬಾಹ್ಯಾಕಾಶ ನಿಲ್ದಾಣದಿಂದ ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ, ಜಿಎಸ್‌‍ಎಲ್‌ವಿ -ಎಫ್‌ 15 ಉಡಾವಣಾ ವಾಹನವು ನ್ಯಾವಿಗೇಷನ್‌ ಉಪಗ್ರಹ ಎನ್‌ವಿಎಸ್‌‍ -02 ಅನ್ನು ಉದ್ದೇಶಿತ (ಜಿಟಿಓ) ಕಕ್ಷೆಯಲ್ಲಿ ನಿಖರವಾಗಿ ಕಳುಹಿಸಲಾಗಿದೆ ಎಂದು ನಾರಾಯಣನ್‌ ತಿಳಿಸಿದ್ದಾರೆ. ಈ ಮಿಷನ್‌ ನಮ ಲಾಂಚ್‌ಪ್ಯಾಡ್‌ಗಳಿಂದ 100 ನೇ ಉಡಾವಣೆಯಾಗಿದೆ, ಇದು ಭಾರತದ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಇಸ್ರೋ ಮುಖ್ಯಸ್ಥರು ಸೇರಿಸಿದ್ದಾರೆ.

You Might Also Like

12 ಜ್ಯೋತಿರ್ಲಿಂಗಗಳು ಯಾವ ಜಾತಿಗೆ ಸೇರಿವೆ..? : ಸುರೇಶ್ ಭಯ್ಯಾಜಿ

‘ಪೆಪೆ’ ಚಿತ್ರಕ್ಕೆ ‘A’ ಸರ್ಟಿಫಿಕೇಟ್

ವರ್ಣಾರ್ಭಟಕ್ಕೆ ನಲುಗಿನಿಂದ ಸಿಲಿಕಾನ್ ಸಿಟಿ, ಜನಜೀವನ ಅಸ್ತವ್ಯಸ್ಥ

ಮನೆಯೂಟಕ್ಕೆ ನಟ ದರ್ಶನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಬಿಬಿಎಂಪಿ ಪೌರಕಾರ್ಮಿಕರಿಗೆ ಹೊಸ ಸಮವಸ್ತ್ರ

TAGGED:GSLVISROISRO ChairmanSriharikota
Share This Article
Facebook Copy Link Print
Previous Article Cash In Car ಉತ್ತರ ಕನ್ನಡ : ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ರೂ. ಪತ್ತೆ..!
Next Article Leopard ಬೆಂಗಳೂರಿನ ಸಿಂಗನಾಯಕನಹಳ್ಳಿಯಲ್ಲಿ 2 ಚಿರತೆಗಳು ಪ್ರತ್ಯಕ್ಷ..!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Nida Nida Nida
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ
ರಾಷ್ಟ್ರೀಯ-National Latest
March 28, 2026
Gas 1 Gas 1 Gas 1
ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ
ರಾಜ್ಯ-Karnataka
March 28, 2026
Rai Rai Rai
ರಾಯಚೂರು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರ
ರಾಯಚೂರು - Raichur
March 28, 2026
Bus Bus Bus
ಚಿಕ್ಕಬಳ್ಳಾಪುರ: ಪ್ರಯಾಣಿಕರನ್ನು ಬಿಸಿಲಿನಲ್ಲಿ ನಿಲ್ಲಿಸಿ ಸರಕು ಮೂಟೆಗಳನ್ನು ಸಾಗಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡ್ರೈವರ್, ಕಂಡಕ್ಟರ್
ಚಿಕ್ಕಬಳ್ಳಾಪುರ-Chikkaballapura
March 28, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up