ನಟಿ ನಯನಾ ನಾಗರಾಜ್ ಅವರು ‘ಗಿಣಿ ರಾಮ’ ಧಾರಾವಾಹಿಯಿಂದ ನಿರ್ಗಮಿಸಿದ್ದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ವ್ಯಕ್ತಿಯಿಂದ ಸೆಟ್‌ನಲ್ಲಿ ಅವರಿಗೆ ಚಿತ್ರಹಿಂಸೆ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.
ವಾಹಿನಿಯವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೂಡ ತಿಳಿಸಿದ್ದಾರೆ. .ನಟಿ ನಯನಾ ನಾಗರಾಜ್ ಅವರು ಈ ಮೊದಲು ‘ಪಾಪ ಪಾಂಡು ಧಾರಾವಾಹಿಯಲ್ಲಿ ಚಾರು ಹೆಸರಿನ ಪಾತ್ರ ಮಾಡಿದ್ದರು.
ಆ ಬಳಿಕ ‘ಗಿಣಿ ರಾಮ’ ಧಾರಾವಾಹಿಯಲ್ಲಿ ನಟಿಸಿದ ಅವರು ನಂತರ ಕಿರುತೆರೆ ಲೋಕವನ್ನು ತೊರೆದೇ ಬಿಟ್ಟರು. ಈಗ ಅವರು ಸುಹಾಸ್ ಎಂಬ ವ್ಯಕ್ತಿಯನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಾಗಾದರೆ, ನಯನಾ ‘ಗಿಣಿ ರಾಮ’ ಬಿಡಲು ಕಾರಣ ಏನು? ಈ ಬಗ್ಗೆ ನಯನಾ ಅವರು ಮಾತನಾಡಿದ್ದಾರೆ

