ಬೆಳಗಾವಿ : ವಾಹನಗಳು ಈ ರಸ್ತೆ ದಾಟಬೇಕಾದರೆ ಹತ್ತು ಸಲ ಯೊಚಿಸಿ ಈ ಮಾರ್ಗವನ್ನು ದಾಟುಬೇಕು,ಅದು ಕೂಡ ನಸುಕಿನಜಾವ ಅಥವಾ ರಾತ್ರಿ 12 ನಂತರ ದಾಟಬೇಕು.ಎಕೆಂದರೆ ಅಷ್ಟೊಂದು ಟ್ರಾಫಿಕ್ ಅದು ಕೂಡ ಒಂದು ಹೊಟೇಲನಿಂದ ಈ ಸಮಸ್ಯೆ ,,
ಹೌದು ಇದು ಯಾವ ಬೆಂಗಳೂರು,ಮುಂಬೈ,ದೆಹಲಿ ನಗರದ ಬಗ್ಗೆ ಹೇಳುತ್ತಿಲ್ಲ, ಹೌದು ಗೋಕಾಕ ನಗರದ ನಾಕಾ ನಂಬರ 1 ವೃತ್ತದಲ್ಲಿರುವ ಶ್ರೀದುರ್ಗಾ ಪ್ರಸಾದ ಹೋಟೆಲ ಗೆ ಹೋಗಿ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಹೋಟೆಲ್ ಮುಂದೆ ಅಷ್ಟೆ ಅಲ್ಲ ರಸ್ತೆ ಮೇಲೆ ನಿಲ್ಲಿಸಿ ಹೊಗುತ್ತಾರೆ.
ದಿನಾಲು ಸಾವಿರಾರು ವಾಹನಗಳು ಹಾಯ್ದು ಹೊಗುವ ಮಾರ್ಗವಾಗಿ ಸವದತ್ತಿಯ ಶ್ರೀಯಲ್ಲಮ ದೇವಸ್ಥಾಕ್ಕೆ ತೆರಳುತ್ತಾರೆ.ಹೊಟೇಲ ಮುಂದೆ ನಿಲ್ಲುವ ಬೈಕಗಳನ್ನು ರಸ್ತೆ ಮೇಲೆ ನಿಲ್ಲಿಸಿ ಗ್ರಾಹಕರು ವಾಹನ ಸವಾರರಿಗೆ ತೊಂದರೆ ಮಾಡುತಿದ್ದಾರೆ. ರಸ್ತೆಯ ಮಧ್ಯದಲ್ಲಿಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ.
ಇದರಿಂದ ದಿನಾಲು ಟ್ರಾಪೀಕ್ ಜಾಮ ಆಗಿ ಹಲವಾರು ಬಾರಿ ಶ್ರೀ ದುರ್ಗಾ ಪ್ರಸಾದ ಹೋಟೆಲ್ ಮಾಲಿಕನ ಮೇಲೆ ಹಲವಾರು ಬಾರಿ ಮೌಖಿಕವಾಗಿ ವಾಹನ ಸವಾರರು ನಗರ ಪೋಲಿಸ ಠಾಣೆಗೆ ಹೋಗಿ ಹೇಳಿದರು.ಸಹ ಸ್ಥಳಿಯ ಪೋಲಿಸರು ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲಾ, ಇದರ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ,
ಸ್ವತಃ ಪೋಲಿಸ ಸಿಬ್ಬಂದಿಗಳು ,ಪಿ,ಎಸ್, ಐ, ಅಷ್ಟೆ ಅಲ್ಲ ಸಿ ಪಿ ಆಯ್ ಕೂಡ ಟ್ರಾಪಿಕ ಜಾಮ ಆದ ಸಂದರ್ಭದಲ್ಲಿ ತಾವೇ ನಿಂತು ಸಂಚಾರ ಸುಗಮ ಮಾಡಿದ್ದಾರೆ, ಇಷ್ಟಾದರೂ ಸಹ ನಾಕಾ ನಂಬರ 1 ರಲ್ಲಿನ ಶ್ರೀ ದುರ್ಗಾ ಪ್ರಸಾದ ಹೋಟೇಲ ಮಾಲಿಕ ಮಾತ್ರ ಕ್ಯಾರೆ ಅನ್ಯತ್ತಿಲ್ಲಾ ತಾನೆನೊ ತನ್ನ ವ್ಯಾಪಾರ ಎನೊ ,ಟ್ರಾಪೀಕ ಸುಗಮ ಮಾಡೊದು ಪೋಲಿಸರ ಕೆಲಸ ನಾವೇಕೆ ತಲೆ ಕೆಡಿಸಿಕೊಳ್ಳಬೆಕೆಂಬ ಅಹಂಕಾರ ತೊರುತಿದ್ದಾನೆ,
ಇಷ್ಟೆಲ್ಲಾ ದಿನಾಲು ಆಗುತ್ತಿದ್ದರೂ ಸಹ ಪೋಲಿಸರು ಹೊಟೇಲ ಮಾಲಿಕನ ಮೇಲೆ ಕ್ರಮ ಕೈಗೊಳುತ್ತಿಲ್ಲಾ ಯಾಕೆ,ಅನ್ನೊದೆ ಯಕ್ಷ ಪ್ರಶ್ನೆ,,ಇನ್ನಾದರೂ ಪೋಲಿಸರು ಹೊಟೆಲ ಮಾಲಿಕನ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ..
ವರದಿ. ದಯಾನಂದ. ಎಂ

