ಗುಬ್ಬಿ : ತಾಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಬ್ಬಿ ತಾಲೂಕಿನಲ್ಲಿ ಮೂವರ ಸೂಸೈಡ್ ಕೇಸ್ ಗೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ, ಅಂಗವಿಕಲ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ, ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ತಾಯಿ ಮತ್ತು ಇಬ್ಬರು ಮಕ್ಕಳು, ಸಾವನ್ನಪ್ಪಿದ್ದು ಇಡೀ ಗ್ರಾಮದಲ್ಲಿ ಸ್ಮಶಾನದ ಮೌನ ಆವರಿಸಿದೆ,,
ಇತ್ತ ಮುದ್ದಾದ ಹೆಂಡತಿ ಮಕ್ಕಳನ್ನು ಕಳೆದುಕೊಂಡ ಗಂಡ “ಮಹದೇವಯ್ಯ” ಕಣ್ಣೀರಿನಲ್ಲಿ ಕೈ ತೊಳೆಯುತ್ತಾ ಇದ್ದರೆ, ಆದರೆ ಈಗ ಮೂವರ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ ನಂತರ ಸಾವಿನ ಬಗ್ಗೆ ಸತ್ಯ ಹೊರ ಬಿದ್ದಿದೆ, ತಾಯಿ ಮಕ್ಕಳ ಸುಸೈಡ್ ಪ್ರಕರಣವನ್ನು ಚೇಳೂರು ಪೊಲೀಸರು ಕೈಗೊಂಡಿದ್ದು ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಿದ್ದಿದೆ,
ತಾಯಿ ಮಕ್ಕಳ ಸೂಸೈಡ್ ಪ್ರಕರಣವನ್ನು ಚೇಳೂರು ಪೊಲೀಸರು ಕೈಗೊಂಡಿದ್ದು ಸಾವಿಗೆ ಕಾರಣವನ್ನು ವರದಿಯಲ್ಲಿ ಬಹಿರಂಗ ಪಡಿಸಿದ್ದಾರೆ, ಎಂದು ತಿಳಿದು ಬಂದಿದೆ, ತಾಯಿ ವಿಜಯಲಕ್ಷ್ಮಿಗೆ ಸಕ್ಕರೆ ಕಾಯಿಲೆ ಅಂಟಿಕೊಂಡಿದ್ದು ತಾನು ಬದುಕುವುದಿಲ್ಲ ಎಂದು ತನ್ನ ಅಂಗವಿಕಲ ಇಬ್ಬರು ಮಕ್ಕಳಿಗೆ ನೇಣು ಹಾಕಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸ್ಪೋಟಕ ಮಾಹಿತಿ ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ,,
ತಾಯಿ ವಿಜಯಲಕ್ಷ್ಮಿ ನಾನು ಸತ್ತ ಬಳಿಕ ನನ್ನ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ, ಎಂದು ಚಿಂತಿಸಿ ಕೊನೆಗೆ ಮೂವರ ಪ್ರಾಣ ಒಂದೇ ಸಲ ಹೋಗಬೇಕೆಂದು ಆಲೋಚಿಸಿದ್ದರು, ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬುದ್ಧಿಮಾಂದ್ಯ ಅಂಗವಿಕಲ ಮಕ್ಕಳಾದ ಚೂಡಾಮಣಿ ,ಮತ್ತು ನರಸಿಂಹಮೂರ್ತಿಗೆ, ಬಲವಂತವಾಗಿ ಕಾಲು ಕಟ್ಟಿ ನೇಣು ಬಿಗಿದು ಕೊಲೆ ಮಾಡಿದ್ದಾಳೆ, ಮಕ್ಕಳ ಪ್ರಾಣಪಕ್ಷಿ ಹಾರಿ ಹೋದ ಬಳಿಕ ತಾಯಿ ವಿಜಯಲಕ್ಷ್ಮಿ, ಸೀರೆಯಿಂದ ನೇಣಿಗೆ ಕೊರಲೊಡ್ಡಿದ್ದಾಳೆ ಎಂದು ತಿಳಿದು ಬಂದಿದೆ,,
ಸಕ್ಕರೆ ಕಾಯಿಲೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ ಆದರೆ ಯಾರು ಸಾಯೋದಿಲ್ಲ ,ಹೀಗಿದ್ದರೂ ಸಹ ತಾಯಿ ಸಕ್ಕರೆ ಕಾಯಿಲೆಗೆ ಹೆದರಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಂಬಾ ದುರಂತವೆ ಸರಿ, ಮೇಲ್ನೋಟಕ್ಕೆ ತಾಯಿ ವಿಜಯಲಕ್ಷ್ಮಿ, ಸಕ್ಕರೆ ಕಾಯಿಲೆಯಿಂದ ತಾಯಿ ಈ ಕೃತ್ಯ ಎಸರಿರಬಹುದು, ಕಂಡುಬಂದಿದ್ದು ಪ್ರಕರಣದ ತನಿಖೆ ಮುಗಿದ ಬಳಿಕವಷ್ಟೇ ತಾಯಿ ಸಾವಿಗೆ ಕಾರಣ ತಿಳಿದು ಬರಲಿದೆ
ವರದಿ : ನರಸಿಂಹರಾಜು

