ಇಂಡಿಯನ್ ಪ್ರೀಮಿಯರ್ ಲೀಗ್ 2025
ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
ಸುನಿಲ್ ನರೈನ್ ಅವರ ವಿಕೆಟ್ ಪಡೆದು ನೋಟ್ ಬುಕ್ ಸೆಲೆಬ್ರೇಷನ್
ಸೆಲೆಬ್ರೇಷನ್ನೊಂದಿಗೆ ಸಂಚಲನ ಸೃಷ್ಟಿಸಿದ ದಿಗ್ವೇಶ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೋಟ್ಬುಕ್ ಸೆಲೆಬ್ರೇಷನ್ನೊಂದಿಗೆ ದಿಗ್ವೇಶ್ ರಾಠಿ ಸಂಚಲನ ಸೃಷ್ಟಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದ ದಿಗ್ವೇಶ್ಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಿದ್ದರು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.
ಇದಾದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತದೇ ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ದಿಗ್ವೇಶ್ ರಾಠಿ ಕಾಣಿಸಿಕೊಂಡಿದ್ದರು. ಅಲ್ಲದೆ ಐಪಿಎಲ್ ನಿಯಮ ಉಲ್ಲಂಘಿಸಿದ್ದಕಾಗಿ ಈ ಬಾರಿ ದಿಗ್ವೇಶ್ಗೆ ಪಂದ್ಯ ಶುಲ್ಕದ ಶೇ. 50 ರಷ್ಟು ದಂಡ ಹಾಗೂ 2 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.
ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಸುನಿಲ್ ನರೈನ್ ಅವರ ವಿಕೆಟ್ ಪಡೆದು ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದಾರೆ. ಆದರೆ ಈ ಬಾರಿ ಅವರು ಆಟಗಾರರನ್ನು ಗುರಿಯಾಗಿಸಿಲ್ಲ.
ಬದಲಾಗಿ ಮೈದಾನದ ಮೇಲೆ ಸಹಿ ಹಾಕುವ ಮೂಲಕ ಸಂಭ್ರಮಿಸಿದ್ದಾರೆ. ಈ ಮೂಲಕ ದಿಗ್ವೇಶ್ ರಾಠಿ ಮೈದಾನದ ಮೇಲೆ ಸಹಿ ಹಾಕುವ ಸಂಭ್ರಮಕ್ಕೆ ಮುನ್ನಡಿ ಬರೆದಿದ್ದಾರೆ. ಆದರೆ ಈ ಸೆಲೆಬ್ರೇಷನ್ಗೆ ಬಿಸಿಸಿಐ ಅವರಿಗೆ ಮತ್ತೆ ದಂಡ ಹಾಕಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

