ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಮಾಡುವೆ ಫಿಕ್ಸ್ ಆಯಿತು
ನಿಮ್ಮ ಹುಡುಗ ಹೇಗಿರಬೇಕು? ಮದುವೆ ಯಾವಾಗ ಎಂದ ನಟಿ
ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಪ್ರಶ್ನೆ
ಈ ವರ್ಷವೇ ಮದುವೆ ಆಗ್ತೀನಿ ಎಂದು ಅಧಿಕೃತವಾಗಿ ಹೇಳಿಕೆ
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅಧಿಕೃತವಾಗಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ . ಸೋಷಿಯಲ್ ಮಿಡಿಯಾ ಲೈವ್ಗೆ ಬಂದಿದ್ದ ಅನುಶ್ರೀ ಅವರನ್ನು ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಮದುವೆ ಕುರಿತು ಪ್ರಶ್ನಿಸಿದ್ದಾರೆ.
ಈ ವೇಳೆ ಇದೇ 2025ರ ಅಂತ್ಯದೊಳಗೆ ಮದುವೆಯಾಗುವುದಾಗಿ ಅನುಶ್ರೀ ಹೇಳಿದ್ದಾರೆ.ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಅನುಶ್ರೀಗೆ ಮದುವೆ ಕುರಿತು ಪ್ರಶ್ನಿಸಿದ್ದು, ನಿಮ್ಮ ಹುಡುಗ ಹೇಗಿರಬೇಕು? ಮದುವೆ ಯಾವಾಗ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ “ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರಬೇಕು.
ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ”. ಈ ವರ್ಷವೇ ಮದುವೆ ಆಗುತ್ತೆ ಗ್ಯಾರಂಟಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.ಅನುಶ್ರೀ ಮಾತಿಗೆ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಹೌದಾ ಎಂದು ಮತ್ತೊಮ್ಮೆ ಕೇಳಿದ್ದಾರೆ. ಹೌದು. ಈ ವರ್ಷವೇ ಮದುವೆ ಆಗ್ತೀನಿ ಎಂದು ಅಧಿಕೃತವಾಗಿ ಹೇಳಿದ್ದಾರೆ.

