ಮಂಗಳೂರಿನಲ್ಲಿ ವಕ್ಫ್ ವಿರುದ್ಧ ನಡೆದ ಪ್ರತಿಭಟನೆ
ಪ್ರತಿಭಟನಾಕಾರರಿಗೆ ACP ಕಾರ್ ನಲ್ಲಿ ಡ್ರಾಪ್
ಎಮರ್ಜೆನ್ಸಿ ಲೈಟ್, ಸೈರನ್ ಹಾಕಿಕೊಂಡು ದರ್ಬಾರ್
ಎಸಿಪಿ ನಜ್ಮಾ ಫಾರೂಕಿ ಕಾರಿನಲ್ಲಿ ಡ್ರಾಪ್
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನ ಅಡ್ಯಾರ್‌ನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆದಿರುವ ವಿಚಾರ ನಿಮಗೆಲ್ಲ ಗೊತ್ತಿರುವ ವಿಚಾರಣೆ.. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಎಸಿಪಿ ನಜ್ಮಾ ಫಾರೂಕಿ ಪ್ರತಿಭಟನಾಕಾರರನ್ನು ಕಾರಿನಲ್ಲಿ ಕೂರಿಸಿ ಎಮರ್ಜೆನ್ಸಿ ಲೈಟ್, ಸೈರನ್ ಹಾಕಿಕೊಂಡು ಕಾರಿನಲ್ಲೇ ಡ್ರಾಪ್ ಮಾಡಿ ಈಗೀಗ ಸುದ್ದಿಯಾಗಿದ್ದಾರೆ.
ಹೌದು. ವಕ್ಫ್ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 73ರ ಸಮೀಪದ ಅಡ್ಯಾರ್ ಶಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಕಿಲೋಮೀಟರ್‌ಗಟ್ಟಲೇ ಸ್ತಬ್ಧವಾಗಿತ್ತು. ಹೆದ್ದಾರಿ ಬಂದ್ ಮಾಡಬಾರದು ಎಂಬ ಹೈಕೋರ್ಟ್ ಸೂಚನೆ ಇದ್ದರೂ, ಪ್ರತಿಭಟನಾಕಾರರ ಗುಂಪು ಉದ್ದೇಶಪೂರ್ವಕವಾಗಿ ಹೆದ್ದಾರಿಯನ್ನು ಅಲ್ಲಲ್ಲಿ ಬಂದ್ ಮಾಡಿತ್ತು.
ಮತ್ತೊಂದೆಡೆ ವಾಹನಗಳು ಕಿಲೋಮೀಟರ್ ಗಟ್ಟಲೆ ರಸ್ತೆಯಲ್ಲಿ ನಿಂತಿದ್ದವು, ಪೊಲೀಸರು ಹರಸಾಹಸ ಪಟ್ಟು ವಾಹನಗಳನ್ನು ಮುಂದಕ್ಕೆ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ಮುಗಿದ ಬಳಿಕ ಕೆಲ ಪ್ರತಿಭಟನಾಕಾರರಿಗೆ ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರು ಬಸುವ ಕಾರಿನಲ್ಲಿ ಸೈರನ್, ಎಮರ್ಜೆನ್ಸಿ ಲೈಟ್ ಹಾಕಿಕೊಂಡು ಡ್ರಾಪ್ ಮಾಡಿದ್ದಾರೆ.

