ಅಜಯ್ ಕುಮಾರ್ ಅಭಿನಯಿಸಿರುವ ಯುದ್ಧಕಾಂಡ ಸಿನಿಮಾ ರಿಲೀಸ್ ಆಗಿದೆ. ಕನ್ನಡದ ಪಾಲಿಗೆ ಇದೊಂದು ಹೊಸ ಪ್ರಯತ್ನ ಎಂದೇ ಹೇಳಬಹುದಾಗಿದೆ. ಅತ್ಯಾಚಾರ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲು ಏರಿದಾಗ ಏನೆಲ್ಲ ಆಗಬಹುದು ಎಂಬುದನ್ನು ನಿರ್ದೇಶಕ ಪವನ್ ಭಟ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಇಡೀ ಚಿತ್ರ ಕೋರ್ಟ್ ರೂಂ ಡ್ರಾಮಾವಾದರೂ, ಭಾವುಕ ಅಂಶಗಳು ಹೆಚ್ಚಿವೆ.ಯುದ್ಧಕಾಂಡ’ ಸಿನಿಮಾದಲ್ಲಿ ಸಂದೇಶದ ಜೊತೆಗೆ ಎಚ್ಚರಿಕೆಯ ಮಾತುಗಳು ಇವೆ. ಕೋರ್ಟ್ ರೂಮ್ ಡ್ರಾಮ ಓಟಿಟಿ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಬಾಲಿವುಡ್‌ನಲ್ಲಿ ನಡೆದ ಚಮತ್ಕಾರ ಸ್ಯಾಂಡಲ್‌ವುಡ್‌ನಲ್ಲಿ ನಡೆಯಬೇಕಿದೆ.
ಅಂತಹದ್ದೊಂದು ಪ್ರಯತ್ನಕ್ಕೆ ಅಜಯ್ ರಾವ್ ಕೈ ಹಾಕಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಹಿಂದೆ ಬಿದ್ದಿರೋ ಸ್ಟಾರ್ ನಟರಿಂದ ಕೊಂಚ ದೂರ ಸರಿದು, ಕಮರ್ಷಿಯಲ್ ಜೊತೆ ಗಂಭೀರ ಸಮಸ್ಯೆಯನ್ನು ಇಟ್ಟಿಕೊಂಡು ಬಾಕ್ಸಾಫೀಸ್‌ನಲ್ಲಿ ಯುದ್ಧ ಸಾರುವುದಕ್ಕೆ ಮುಂದಾಗಿದ್ದಾರೆ.

