ಸುನಾಮಿ ಕಿಟ್ಟಿ ಅಭಿನಯಿಸಿರುವ ಕೋರ ಸಿನಿಮಾ ರಿಲೀಸ್ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒರಟ ಶ್ರೀ ನಿರ್ದೇಶನದ ಸಿನಿಮಾ ಇದಾಗಿದ್ದು ಪಿ ಮೂರ್ತಿ ಅವರು ಬಂಡವಾಳ ಹೂಡಿ ವಿಭಿನ್ನ ವಿಲನ್ ಪಾತ್ರದಲ್ಲಿ ಅಭಿನಯಿಸಿ ಎಲ್ಲಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ಕೋರ ಚಿತ್ರ ಧುಳೆಬ್ಬಿಸಿದ್ದು ಸುನಾಮಿ ಕಿಟ್ಟಿಗೆ ತಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಅನ್ನಬಹುದು. ಇನ್ನು ಕಾಡಿನಲ್ಲಿಯೇ ಹೆಚ್ಚಿನ ಸಮಯ ಕಳೆದು ಈ ಚಿತ್ರ ಯಶಸ್ವೀ ಕಾಣೋದಕ್ಕೆ ಚಿತ್ರತಂಡ ಶ್ರಮಿಸಿದೆ ಅನ್ನೋದರಲ್ಲಿ ತಪ್ಪೇನಿಲ್ಲ.
ಕೊರಗಜ್ಜನ ಆಶೀರ್ವಾದದೊಂದಿಗೆ ಆರಂಭವಾದ ಈ ಚಿತ್ರ ಇಂದಿನ ಯಶಸ್ಸಿಗೆ ಗೆ ಕೊರಗಜ್ಜನೇ ಕಾರಣ ಅನ್ನಬಹುದು. ಬುಡಕಟ್ಟು ಜನಾಂಗದವ ಜಾಗವನ್ನು ಸರ್ಕಾರ ಯಾವ ರೀತಿ ಕಬಳಿಸೋದಕ್ಕೆ ಪ್ಲಾನ್ ಮಾಡ್ತಾರೆ ಅವರಿಂದ ಬುಡಕಟ್ಟು ಜನಾಂಗದವರು ಯಾವ ರೀತಿ ಕಷ್ಟ ಪಟ್ಟು ತಮ್ಮ ಭೂಮಿಯನ್ನು ಉಳಿಸಿಕೊಳ್ಳುತ್ತಾರೆ ಅನ್ನೋದೋ ಈ ಚಿತ್ರದ ಮುಖ್ಯ ಕಥೆಯಾಗಿದೆ.

