ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪತ್ನಿಯೇ ಸರ್ವಸ್ವ
ವಿಜಯಲಕ್ಷ್ಮೀ ಜೊತೆ ಭರತನಾಟ್ಯ ನೋಡಲು ಬಂದ ದರ್ಶನ್
ಜೆಸಿ ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ದರ್ಶನ್ ದಂಪತಿ
ಶೈಲಜಾ ಹಾಗೂ ಸುರೇಶ್ ಅವರ ಆಹ್ವಾನದ ಮೇಲೆ ದರ್ಶನ್ ಭಾಗಿ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ ಬಳಿಕ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಾಕಷ್ಟು ಸಂಕಟಪಟ್ಟರು. ಪತಿಯನ್ನು ಹೊರಕ್ಕೆ ಕರೆದುಕೊಂಡು ಬರಲು ಸಾಕಷ್ಟು ಹರಸಾಹಸಪಟ್ಟರು. ಕೊನೆಗೂ ಅವರ ಪ್ರಯತ್ನ ಫಲ ಕೊಟ್ಟಿತು. ಈಗ ಅವರು ಪತ್ನಿಯ ಜೊತೆಯೇ ಇರುತ್ತಿದ್ದಾರೆ. ಅವರ ಜೊತೆಯೇ ಸುತ್ತಾಡುತ್ತಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಕೂಡ ಖುಷಿಯಾಗಿದ್ದಾರೆ.
ಇತ್ತೀಚೆಗೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರು ಒಟ್ಟಾಗಿ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.ನಟ, ನಿರ್ಮಾಪಕ ಬಿ. ಸುರೇಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ದಂಪತಿ ಜೊತೆ ದರ್ಶನ್ ಅವರಿಗೆ ಒಳ್ಳೆಯ ಒಡನಾಟ ಇದೆ. ಶೈಲಜಾ ಹಾಗೂ ಸುರೇಶ್ ಪುತ್ರಿ ಚಂದನಾ ಎಸ್. ನಾಗ್ ಏಪ್ರಿಲ್ 20ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ.
ಶೈಲಜಾ ಹಾಗೂ ಸುರೇಶ್ ಅವರ ಆಹ್ವಾನದ ಮೇಲೆ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಒಟ್ಟಾಗಿ ಆಗಮಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ದರ್ಶನ್ ಒಂಟಿಯಾಗಿ ಬರುತ್ತಾರೆ ಅಥವಾ ಗೆಳೆಯರ ಗ್ಯಾಂಗ್ ಜೊತೆ ಬರುತ್ತಾರೆ. ಅವರು ಈ ರೀತಿ ಫ್ಯಾಮಿಲಿ ಜೊತೆ ಬಂದಿದ್ದು ಕಡಿಮೆ. ಆದರೆ, ಈಗ ದರ್ಶನ್ ಅವರು ವಿಜಯಲಕ್ಷ್ಮೀ ಜೊತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

