ತುಮಕೂರು: ಏ 22, ತುಮಕೂರು ರಾಜ್ಯ ವಕೀಲ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಅಖಿಲ ಭಾರತ ಬಾರ್ ಕೌನ್ಸಿಲ್ ಉಪಾಧ್ಯಕ್ಷರಾದ ಸದಾಶಿವ ರೆಡ್ಡಿ,ಅವರ ಮೇಲೆ ತೀವ್ರ ಹಲ್ಲೆಯನ್ನು ಖಂಡಿಸಿ, ಕರ್ನಾಟಕ ರಾಜ್ಯ ವಕೀಲರ ಸಂಘದ ಹೆಚ್ ಕೆಂಪರಾಜಯ್ಯನವರ ನೇತೃತ್ವದಲ್ಲಿ ಎರಡು ತೋಳಿಗೆ ಕೆಂಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು,,
ನಂತರ ಸಂಘದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಹಿರಿಯ ಕಿರಿಯ ಮಹಿಳಾ ವಕೀಲರುಗಳು, ಮೌನ ಪ್ರತಿಭಟನೆ ಮೂಲಕ ತೆರಳಿ ಸದರಿ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡುವಂತೆ, ಜಿಲ್ಲಾಧಿಕಾರಿಗಳ ಪರವಾಗಿ ತಹಶೀಲ್ದಾರ್ ಜಿವಿ ಮೋಹನ್ ಕುಮಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು, ನಂತರ ಅಧ್ಯಕ್ಷರಾದ ಹೆಚ್ ಕೆಂಪ ರಾಜಯ್ಯ ನವರು ಮಾತನಾಡುತ್ತಾ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರು, ಪಕ್ಷಿಧಾರರು ವಕೀಲರ ಮೇಲೆ ನಡೆಸಿದ ಹಲ್ಲೆಯನ್ನು ತುಮಕೂರು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಹಲ್ಲೆ ಮಾಡಿದವರ ಮೇಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು,,
ತಪ್ಪಿತಸ್ಥರ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಪೊಲೀಸ ಇಲಾಖೆ ಕ್ರಮವಹಿಸಬೇಕು, ಕಕ್ಷಿದಾರರು ತಮಗೆ ಏನಾದರೂ ತೊಂದರೆ ಆದರೆ ವಕೀಲರೊಂದಿಗೆ ಕುಳಿತು ಚರ್ಚಿಸಿ, ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಹ ವಕೀಲರ ಮೇಲೆ ಕೈ ಮಾಡಬಾರದು ಎಂದು ತೀವ್ರವಾಗಿ ಖಂಡಿಸಿದರು,,
ವರದಿ : ನರಸಿಂಹರಾಜು

