ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿ
ಡಿಜಿಟಲ್ ಮ್ಯಾಪ್ ಬಳಸಿ ಭಾರತಕ್ಕೆ ಬಂದು ಕೃತ್ಯ
ಕೇಕ್ ಕತ್ತರಿಸಿ ಹಿಂದೂಗಳ ಹತ್ಯೆ ಸಂಭ್ರಮಿಸಿದ ಪಾಕ್ ಅಧಿಕಾರಿಗಳು!
ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಭಾರತ ಬೆಚ್ಚಿ ಬೀಳುವಂತಹ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದೆ. 28 ಮಂದಿ ಪ್ರವಾಸಿಗರನ್ನು ಹತ್ಯೆಗೈದ ಉಗ್ರರು ಡಿಜಿಟಲ್ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಭಾರೀತಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಹಿಂದೂಗಳ ನರಮೇಧ ಬೆನ್ನಲ್ಲೆ ಪಾಕಿಸ್ತಾನ ರಾಯಭಾರಿಗಳಿಗೆ ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಪಾಕ್ ಅಧಿಕಾರಿಗಳು ಕಚೇರಿಯಿಂದ ಹೊರ ಹೋಗುವಾಗ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಪಹಲ್ಗಾಮ್ನಲ್ಲಿ ಮಂಗಳವಾರ ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಪಾಕ್ ಉಗ್ರರು ಅಟ್ಟಹಾಸ ಮೆರೆದಿದ್ದರು. ಘಟನೆ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಲ್ಲಿ ಪಾಕ್ ರಾಯಭಾರಿ ಕಚೇರಿ ತೊರೆಯುವಂತೆ ಪಾಕಿಸ್ತಾನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದು ಪ್ರಮುಖ ಕ್ರಮವಾಗಿದೆ. ಪಾಕಿಸ್ತಾನ ಎಲ್ಲ ನಾಗರಿಕರ ವಿಸಾ ರದ್ದು ಮಾಡಿ ಕ್ರಮವಹಿಸಲಾಗಿದೆ. ಪಾಕ್ ವಿರುದ್ಧ ಇನ್ನಷ್ಟು ಕ್ರಮಗಳು ಜರುಗುವ ಸಾಧ್ಯತೆ ಇದೆ.ಪಾಕ್ ಅಧಿಕಾರಿಗಳು ವಾರದೊಳಗೆ ದೇಶ ತೊರೆಯಬೇಕು.
ಪಾಕ್ ರಾಜತಾಂತ್ರಿಕ ಚೇರಿ ಬಂದ್ ಮಾಡುವಂತೆ ನಿರ್ಧಾರ ಕೈಗೊಂಡಿದೆ. ಇದಾಗಿ 24 ಗಂಟೆಗಳಲ್ಲಿ ಪಾಕ್ ಅಧಿಕಾರಿಗಳು ಭಾರತ ಬಿಟ್ಟು ತೊಲಗುವಾಗ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.ಎನ್ನುವ ಮಾಹಿತಿ ಲಭ್ಯವಾಗಿದ್ದು ಅಧಿಕಾರಿಗಳು ಭಾರತೀಯ ಹತ್ಯೆಯನ್ನು ಸಂಭ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಹೀನ ಮನಸ್ಥಿತಿ ಪಾಕಿಸ್ತಾನದವರಿಗೆ ಬಿಟ್ಟು ಬೇರಾರಿಗೂ ಬರಲು ಸಾಧ್ಯವಿಲ್ಲವೆಂದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಶ್ಮೀರದಲ್ಲಿನ ಸುಂದರ ವಾತಾವರಣ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಪ್ರವಾಸಿಗರ ಹತ್ಯೆಗೆ ಬಂದಿದ್ದ ಉಗ್ರರು ಡಿಜಿಟಲ್ ತರಬೇತಿ ಪಡೆದಿದ್ದಾರೆ. ದುಷ್ಟರು ಡಿಜಿಟಲ್ ಮ್ಯಾಪ್ ಬಳಕೆ ಮಾಡುವುದನ್ನು ಕಲಿತಿದ್ದಾರೆ. ಅದರ ಸಹಾಯದಿಂದಲೇ ಪಹಲ್ಗಾಮ್ ಪ್ರದೇಶ ನುಗ್ಗಿ ಹೇಡಿಗಳಂತೆ ನಿಶಸ್ತ್ರ ನಾಗರಿಕರ ಮೇಲೆ ಪೌರುಷ ತೋರಿದ್ದಾರೆ. ಉಗ್ರ ಡಿಜಿಟಲ್ ಮ್ಯಾಪ್ ಬಳಕೆಯನ್ನು ಭಾರತಿಯ ಗುಪ್ತಚರ ಇಲಾಖೆ ಮಾಹಿತಿ ಖಚಿತಪಡಿಸಿದೆ.
ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿ ಬೆನ್ನಲ್ಲೆ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೇಲಿಂದ ಮೇಲೆ ಸಭೆಗಳು ನಡೆದಿವೆ. ಪ್ರಧಾನಿ ಮೋದಿಯವರು ಕಾರ್ಯಕ್ರಮದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಭಾರೀ ಬಿಗಿ ಭದ್ರತೆ ನೀಡಲಾಗಿದೆ. ಪ್ರಧಾಣಿ ಮೋದಿ ಅವರು ಇಂದು ಬಿಹಾರ ಪ್ರವಾಸದ್ದಾರೆ. ಅಲ್ಲಿ ಅವರಿಗೆ ಫುಲ್ ಟೈಟ್ ಸೆಕ್ಯೂರಿಟಿ ಒದಗಿಸಲಾಗಿದೆ.