ತಿಪಟೂರು:ತಾಲೂಕಿನ ನೋವಿನಕೆರೆ ಕಸಬಾ ಹೋಬಳಿಯ ನಾರಸಿಕಟ್ಟೆ ಪೂಜಾರಿಪಾಳ್ಯ ಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಿ ಮತ್ತು ಶ್ರೀ ದ್ಯಾವಮ್ಮ ದೇವಿಯವರ ಜಾತ್ರಾ ಮಹೋತ್ಸವವು ಇಂದಿನಿಂದ ಇದೇ 24-ರಿಂದ 27 ವರೆಗೆ ಹಮ್ಮಿಕೊಳ್ಳಲಾಗಿದೆ.
ಮೊದಲದಿನದಂದು ಶ್ರೀ ಅಮ್ಮನವರ ಮದುವಣಗಿತ್ತಿ ಮತ್ತು ಪ್ರಸಾದ ವಿನಿಯೋಗ ವಿತರಣೆ ಇರಲಿದೆ. 25 ರಂದು ನಾರಸಿಕಟ್ಟೆ ಅಮ್ಮನವರ ದೇವಸ್ಥಾನದಿಂದ ಊರ ಹೆಬ್ಬಾಗಿಲವರೆಗೂ ಉತ್ಸವ ಹಾಗೂ ಶ್ರೀಕ್ಷೇತ್ರ ನಾರಸೀಕಟ್ಟೆ ಪೂಜಾರಿಪಾಳ್ಯದ ಶ್ರೀ ಹುಚ್ಚಮ್ಮ ದೇವಿ ಶ್ರೀ ದ್ಯಾವಮ್ಮ ದೇವಿಯವರ ತಿಳಿಯುವಿಕೆಯ ಮೇಲಿನ ಬಾಗಿದ ರಚನಾತ್ಮಕ ಕಥೆಯ ಉದ್ಘಾಟನೆ ಹಾಗೂ ಶ್ರೀ ಅಮ್ಮನವರಿಗೆ ಆರತಿ ಬಾನ, ದೇವರುಗಳಿಗೆ ವಿಶೇಷ ಅಲಂಕಾರ ಮತ್ತು ಅಮ್ಮನವರ ಉತ್ಸವ
26 ರಂದು ಶ್ರೀ ಅಮ್ಮನವರ ಮಹಾ ಗಂಗಾಸ್ನಾನ ಅಲಂಕಾರ. ಪಾನಕ ಪಲಹಾರ ಅನ್ನಸಂತಪಣೆ ಹಾಗೂ ನಾರಸಿಕಟ್ಟೆ ಗ್ರಾಮದಲ್ಲಿ ಸಂಜೆ 4 ಘಂಟೆಗೆ ಶ್ರೀನರಸಿಂಹಸ್ವಾಮಿ ದೇವಸ್ಥಾನದ ಅವರಣದ ಮುಂಭಾಗದಲ್ಲಿ ಅಗ್ನಿ ಕುಂಡೋತ್ಸವ ಮತ್ತು ಮದ್ದುಗುಂಡಿನ ಪ್ರದರ್ಶನ
27 ರಂದು ರಥಕ್ಕೆ ಮತ್ತು ದೇವರುಗಳಿಗೆ ಹೂವಿನ ಅಲಂಕಾರದೊಂದಿಗೆ ಮಧ್ಯಾಹ್ನ 1.30 ಕ್ಕೆ ಪೂಜಾರಿ ಪಾಳ್ಯಗ್ರಾಮದ ಮೂಲಸ್ಥಾನದ ಆವರಣದಲ್ಲಿ ಶ್ರೀ ಹುಚ್ಚಮ್ಮ ದೇವಿ ಶ್ರೀ ದ್ಯಾವಮ್ಮ ದೇವಿಯವರ ಮಹಾರಾತ್ಯೋತ್ಸವ ನಂತರ ಸೋಮದೇವರ ಕುಣಿತ ಪ್ರದರ್ಶನ ಹಾಗೂ ಶ್ರೀ ಅಮ್ಮನವರಿಗೆ ಕುಂಕುಮ ಸೇವೆ ನೆರವೇರಿಸಿದ ನಂತರ ಪೂಜಾರಿ ಪಾಳ್ಯದ ರಾಜಭೀದಿಗಳಲ್ಲಿ ಅಮ್ಮನವರ ಮೆರವಣಿಗೆ ಮೂಲಕ ಜಾತ್ರೋತ್ಸವ ಮುಕ್ತಾಯವಾಗುವುದು
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಹುಚ್ಚಮ್ಮ ದ್ಯಾವಮ್ಮ ದೇವಿಯವರ ಜಾತ್ರ ಮಹೋತ್ಸವಕ್ಕೆ ಭಾಗವಹಿಸುವಂತೆ ಭಕ್ತ ದೇವಾಲಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.