ಕುಣಿಗಲ್ : – ಬಿಲ್ ಕಲೆಕ್ಟರ್ ರಾಜೇಶ್ ಎಚ್ ಎಸ್, ಅಕ್ರಮ ದಾಖಲಾತಿ ಸೃಷ್ಟಿಮಾಡಿ 2007ರಲ್ಲಿ ಹುದ್ದೆ ಪಡೆದು ನಂತರ ಮೂರು ವರ್ಷ ರಾಮನಗರದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿನಿತ್ಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಾಜರಾತಿ ಹಾಕಿ ಸರ್ಕಾರಕ್ಕೆ ಮೋಸ ಮಾಡಿ ಮತ್ತು ಗ್ರಾಮ ಪಂಚಾಯಿತಿಯ ಕಂದಾಯದ ಹಣವನ್ನು ಲಕ್ಷಾನುಗಟ್ಟಲೆ ಲೂಟಿ ಹೊಡೆದಿದ್ದಾರೆ ಎಂದು, ಕೆ ಆರ್ ಎಸ್, ಪಕ್ಷದ ಕಾರ್ಯಕರ್ತರು ನಾಲ್ಕನೇ ದಿನ ಪ್ರತಿಭಟನೆ ನಡೆಸಿದ್ದಾರೆ,,
ಬಿಲ್ ಕಲೆಕ್ಟರ್ ರಾಜೇಶ್ ಎಚ್ ಎಸ್ ಎಂಬ( ಭ್ರಷ್ಟ ಅಧಿಕಾರಿ )
ಗ್ರಾಮ ಪಂಚಾಯಿತಿಯ ಕಂದಾಯದ ಹಣವನ್ನು ಅಕ್ರಮವಾಗಿ ದುರುಪಯೋಗ ಮಾಡಿಕೊಂಡಿದ್ದು ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸದೆ ಕಣ್ಮುಚ್ಚಿ ಕುಳಿತಿದ್ದಾರೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರೆಗೂ ಗಮನಕ್ಕೆ ತಂದರೂ ಕೂಡ ಬಿಲ್ ಕಲೆಕ್ಟರ್ ಗೆ ಶಾಮೀಲಾಗಿದ್ದಾರೆ ಎಂದು ಕಂಡು ಬಂದಿದೆ ಈ ಹಿಂದೆ ಎಷ್ಟು ಬಾರಿ ಮನವಿ ಕೊಟ್ಟರೂ ಸಹ ಸ್ಪಂದಿಸದೆ ಭ್ರಷ್ಟ ಅಧಿಕಾರಿಗಳ ಬೆಂಗವಲಾಗಿ ನಿಂತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಈ ಕೂಡಲೇ ಬಿಲ್ ಕಲೆಕ್ಟರ್ ಹುದ್ದೆಯನ್ನು ವಜಾ ಗೊಳಿಸಿ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು, ನಾಲ್ಕನೇ ದಿನ ಧರಣಿ ಕುಳಿತಿದ್ದರು ಸಹ ಯಾವೊಬ್ಬ ಅಧಿಕಾರಿಯು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ,,
ಇದೇ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ತಾಲೂಕು ಉಪಾಧ್ಯಕ್ಷರಾದ ಚೆನ್ನಯ್ಯ ಮಾತನಾಡಿ ಕಡು ಭ್ರಷ್ಟ ಭ್ರಷ್ಟಾಧಿ ಭ್ರಷ್ಟ ಅವನನ್ನು ಯಾವ ಪದದಿಂದ ವರ್ಣಿಸಬೇಕು ಎಂದು ಜನಸಾಮಾನ್ಯರು ಹೇಳಬೇಕು, ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು,, ಈತ 13, 8, 2007 ರಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿರುತ್ತಾನೆ ನಂತರ 7 ತಿಂಗಳ ಮುಂಚೆಯೇ ನಾನು ಬಿಲ್ ಕಲೆಕ್ಟರ್ ಎಂದು ಗುರುತಿಸಿಕೊಂಡಿರುತ್ತಾನೆ,,
ಬಿಲ್ ಕಲೆಕ್ಟರ್” ರಾಜೇಶ್ ಎಚ್ಎಸ್ ಎಂಬುವನು ಅಕ್ರಮ ಕಂದಾಯ ವಸೂಲಿಗಾರ ಇವನ ಬೆಂಬಲಕ್ಕೆ ಇಲಾಖೆ ಅಧಿಕಾರಿಗಳು ನಿಂತಿರುವುದು ಯಾವುದೇ ರೀತಿ ಸರಿಯಲ್ಲ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಈ ಓ ನಾರಾಯಣ್ ರವರಿಗೆ ಫೋನ್ ಕಾಲ್ ಮಾಡಿದರೆ ನಾನು ಮಧ್ಯಾಹ್ನ ಬರುತ್ತೇನೆ ಸಂಜೆ ಬರುತ್ತೇನೆ ಎಂಬ ಉದಾಫೆ ಉತ್ತರವನ್ನು ನೀಡುತ್ತಿದ್ದಾರೆ, ಇಲ್ಕಲ್ ರಾಜೇಶ್ ವಿರುದ್ಧ ಎಚ್ಚೆತ್ತುಕೊಳ್ಳದಿದ್ದರೆ, ತಾಲೂಕಿನಾದ್ಯಂತ ಉಗ್ರವಾದ ಹೋರಾಟವನ್ನು ಮಾಡುತ್ತೇವೆ,ಎಂದು ಖಡಕ್ ಎಚ್ಚರಿಕೆ ನೀಡಿದರು,
ವರದಿ ನರಸಿಂಹರಾಜು