ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಸಂತೋಷ್
ನಮಗೆ ಹಣಕಾಸಿನ ಸಹಾಯ ಮಾಡಿ
ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ ಸಂತೋಷ್ ಪತ್ನಿ
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಸಂತೋಷ್ ಜಗದಾಳೆ ಅವರ ಪತ್ನಿ ಪ್ರಗತಿ ಜಗದಾಳೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ತಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ನಮ್ಮ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಪತಿ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದರಿಂದ, ಸರ್ಕಾರಕ್ಕೆ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದೇವೆ.
ಇನ್ಮುಂದೆ ನನ್ನ ಜೀವನವನ್ನು ಹೇಗೆ ನಡೆಸುವುದು ಎಂದು ನನಗೆ ಚಿಂತೆಯಾಗಿದೆ. ಜೀವನ ನಿರ್ವಹಣೆ ಮಾಡುತ್ತಿದ್ದ ನನ್ನ ಪತಿ ಇನ್ನಿಲ್ಲ. ಆದ್ದರಿಂದ ನನಗೆ ಈಗ ಯಾವುದೇ ಆದಾಯದ ಮೂಲವಿಲ್ಲ. ನಾನು ಗೃಹಿಣಿ, ನನ್ನ ಮಗಳಿಗೂ ಕೆಲಸವಿಲ್ಲ. ಆದ್ದರಿಂದ ನಾನು ನನ್ನ ಮನೆಯನ್ನು ನಡೆಸಲು ಸರ್ಕಾರ ನನಗೆ ಕೆಲವು ವ್ಯವಸ್ಥೆಗಳನ್ನು ಮಾಡಬೇಕೆಂದು ಬಯಸುತ್ತೇನೆ.
ಹಾಗೇ, ನನ್ನ ಮಗಳಿಗೆ ಕೆಲಸ ನೀಡಿ. ಸರ್ಕಾರ ನಮಗಾಗಿ ವ್ಯವಸ್ಥೆ ಮಾಡಬೇಕು. ನಾವು ಈ ಪರಿಸ್ಥಿತಿಗೆ ಬಂದಿರುವುದರಲ್ಲಿ ನಮ್ಮ ತಪ್ಪಿಲ್ಲದ ಕಾರಣದಿಂದ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ನಮ್ಮ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

