ಬೆಳಗಾವಿ : ಕಾಂಗ್ರೆಸ್ ಸಂವಿಧಾನ ರಕ್ಷಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ನುಸುಳಿ ಬಂದು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿ ಹೈಡ್ರಾಮಾ ನಡೆಸಲಾಯಿತು. ಈ ವೇಳೆ ಬಿಜೆಪಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ಯಲು ಪೊಲೀಸರಿಗೆ ಹರಸಾಹಸ ಪಡಬೇಕಾಯಿತು.
ಇಂದು ಬೆಳಗಾವಿಯ ಸಿ.ಪಿಎಡ್. ಮೈದಾನದಲ್ಲಿ ಕಾಂಗ್ರೆಸ್ ಸಂವಿಧಾನ ರಕ್ಷಣೆ ಮತ್ತು ಕೇಂದ್ರದ ಬೆಲೆ ಏರಿಕೆಯನ್ನು ೩ ಸಮಾವೇಶವನ್ನು ಆಯೋಜಿಸಿತ್ತು. ಈ ವೇಳೆ ಸಿಎಂ ಸಿದ್ಧರಾಮಯ್ಯ ಭಾಷಣ ಮಾಡುತ್ತಿರುವಾಗ ಸಮಾವೇಶ ಆಗಮಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿ ಗಲಾಟೆ ನಡೆಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಿಜೆಪಿ ನಾಯಕರಿಗೆ ವಾರ್ನಿಂಗ್ ಮಾಡಿದ ಡಿಸಿಎಂ.
ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯವರು ನಾಲ್ಕು ಜನರನ್ನು ಕಳುಹಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿಸಿದ್ದಾರೆ. ಈ ಪ್ರವೃತ್ತಿ ನಡೆಯುತ್ತಿದ್ದರೇ ಇಡೀ ರಾಜ್ಯದಲ್ಲಿ ನಿಮ್ಮ ಬಿಜೆಪಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಲು ಬಿಡುವುದಿಲ್ಲ. ಎಂದು ಡಿಕೆ ಶಿವಕುಮಾರ್ ಬಿಜೆಪಿ ಅವರಿಗೆ ವಾರ್ನಿಂಗ್ ಕೊಟ್ಟರು. ಬಿಜೆಪಿ ನಾಯಕರು ನಿಮ್ಮ ಕಾರ್ಯಕರ್ತರಿಗೆ ಹೇಳಿ.ಬೆಳಗಾವಿಯಲ್ಲಿ ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆಶಿ ಎಚ್ಚರಿಕೆ ಕೊಟ್ಟರು.
ವರದಿ. ದಯಾನಂದ. ಎಂ