ಕುಣಿಗಲ್ : ರಾಜ್ಯ ಸರ್ಕಾರ ಇತ್ತೀಚೆಗೆ ರಾಸುಗಳು ಕಾಯಿಲೆಯಿಂದ ಬಳಲಿ ತುರ್ತು ಚಿಕಿತ್ಸೆ ಸಿಗದೇ ಸಾವನ್ನಪ್ಪ ಬಾರದೆಂಬ ಉದ್ದೇಶದಿಂದ ಪಶುಸಂಗೋಪನ ಇಲಾಖೆಯ ಮೂಲಕ ರಾಜ್ಯಾದ್ಯಂತ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯರನ್ನು ಒಳಗೊಂಡಂತೆ 1962 ಸಹಾಯವಾಣಿ ಆಂಬುಲೆನ್ಸ್ ವ್ಯವಸ್ಥೆಯನ್ನು ಜಾರಿಗೆ ತಂದು ಏಜೆನ್ಸಿಯನ್ನು ಮಹಾರಾಷ್ಟ್ರದ ಎಡು ಸ್ಪಾರ್ಕ್, ಇಂಟರ್ನ್ಯಾಷನಲ್ ಪ್ರೈಲಿ,ಕಂಪನಿಗೆ ವಹಿಸಿರುತ್ತದೆ,
ಅದರಂತೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಪಶುಸಂಗೋಪನ ಇಲಾಖೆ ವ್ಯಾಪ್ತಿಯ ಗ್ರಾಮೀಣ ಪ್ರದೇಶದಿಂದ ದೂರುಗಳು ಬಂದಾಗ ರಾಸುಗಳಿಗೆ ತುರ್ತು ಚಿಕಿತ್ಸೆ ನೀಡಲು KA 06,ಜಿ 1306, ಆಂಬುಲೆನ್ಸ್ ವಾಹನದ ಜೊತೆ ‘ವೈ ಎಲ್ ದೇವರಾಜು’ ಎಂಬ ವೈದ್ಯರನ್ನು ಕಂಪನಿ ನೇಮಕ ಮಾಡಿದೆ, ವೈ ಎಲ್ ದೇವರಾಜು ರವರು ಹಳ್ಳಿಗಾಡಿನ ರಾಸುಗಳಿಗೆ ತುರ್ತು ಚಿಕಿತ್ಸೆ ನೀಡಲು ತೆರಳಿದಾಗ ಚಿಕಿತ್ಸೆ ನೀಡಿದಂತಹ ರಾಶಿಗಳ ಮಾಲೀಕರಾದ ರೈತರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ,,
ರೈತರು ಹಣ ಕೊಡದಿದ್ದಾಗ ನೀವು ಕೊಡುವ ಹಣ ನನಗಲ್ಲ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ, ಎಂದು ಆತನು ಹೇಳಿದ್ದಾನೆ, ಹಾಗೂ ಈತನ ಕಂಪನಿಯ ಎಲ್ಲಾ ಸಂಯೋಜಕರಿಗೆ ಮತ್ತು ವ್ಯವಸ್ಥಾಪಕರಿಗೆ ಕೊಡಬೇಕು, ಇಲ್ಲದಿದ್ದರೆ ನಾಳೆ ಮತ್ತೆ ಏನಾದರೂ ತೊಂದರೆಯಾದರೆ ನಿಮಗೆ ಈ ಆಂಬುಲೆನ್ಸ್ ಅನ್ನು ನಾವು ಕಳುಹಿಸುವುದಿಲ್ಲ, ಎಂದು ಬಡ ರೈತರ ಬಳಿ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ,,
ಈ ಅಕ್ರಮದ ವಿಚಾರವನ್ನು ಕುರಿತು ಚಾಲಕ ಶ್ರೀನಿವಾಸ್ ರವರು ಮೇಲಾಧಿಕಾರಿಗಳಿಗೂ ಗಮನಕ್ಕೂ ತಂದರು ಕೂಡ,ಹಣದ ಆಸೆಗಾಗಿ ಆಸೆಪಟ್ಟು ಬಡ ರೈತರಿಗೆ ಸಿಗುವ ಸೌಲಭ್ಯಗಳನ್ನು ಉಡಿಸುವಲ್ಲಿ ವೈದ್ಯರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ,, ಪಶು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈ ಎಲ್ ದೇವರಾಜು, ಎಂಬುವ ವ್ಯಕ್ತಿ ವ್ಯವಸ್ಥಾಪಕರಿಗೂ ಹಾಗೂ ಇಲಾಖೆಯ ಗಮನಕ್ಕೂ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ಬಡ ರೈತರಿಗೆ ಅನುಕೂಲವಾಗುವ ರೀತಿ ನಾನು ಮಾಡಿರುವುದನ್ನು ಪಶು ಇಲಾಖೆ ವೈದ್ಯರಾದ, ವೈ ಎಲ್ ದೇವರಾಜು, ಎಂಬುವರು ನಿನಗೆ ಹಣ ಮಾಡುವ ಆಸೆ ಇದ್ದರೆ ಈ ಚಾಲಕ ವೃತ್ತಿಯಲ್ಲಿ ನನ್ನ ಜೊತೆ ಕರ್ತವ್ಯವನ್ನು ನಿರ್ವಹಿಸು ಇಲ್ಲದಿದ್ದರೆ,ನಿನ್ನನ್ನು ಮಾಗಡಿಗೆ ಎತ್ತಂಗಡಿ ಮಾಡಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದುಬಂದಿದೆ,,
ನಾನು ಮನಸ್ಸು ಮಾಡಿದರೆ ನಿನ್ನನ್ನು ಕುಣಿಗಲ್ ತಾಲೂಕಿನಿಂದ ಮಾಗಡಿಗೆ ಟ್ರಾನ್ಸ್ಫರ್ ಮಾಡಿಸಬಲ್ಲೆ, ಯಾವ ರಾಜಕಾರಣಿಗಳಿಗೂ ನಾನು ಅಂಜುವುದಿಲ್ಲ ನನಗೆ ಆದಂತಹ ಪವರ್ ಇದೆ,ನೀನು ಏನಾದರೂ ಮಾಡಿಕೋ, ಅತಿ ಶೀಘ್ರದಲ್ಲೇ ನಿನ್ನನ್ನು ಕೆಲಸದಿಂದ ವಜಾ ಗೊಳಿಸುತ್ತೇನೆ, ನೀನು ಯಾವ ದಲಿತನಾದರೂ ಸರಿಯೇ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ,ಎಂದು ಬೆದರಿಕೆ ಯೊಡ್ಡಿದ್ದಾನೆ ಎಂದು ನೊಂದ ಚಾಲಕ ಶ್ರೀನಿವಾಸ್ ತಿಳಿಸಿದ್ದಾನೆ,,
ಇಲ್ಲದಿದ್ದರೆ ನಾಳೆ ಮತ್ತೆ ಏನಾದರೂ ತೊಂದರೆಯಾದರೆ ನಿಮಗೆ ಆಂಬುಲೆನ್ಸ್ ಕಳುಹಿಸುವುದಿಲ್ಲ,ಎಂದು ರೈತರಿಗೆ ಉಡಾಫೆ ಉತ್ತರವನ್ನು ನೀಡಿದ್ದ ವೈ,ಎಲ್ ದೇವರಾಜು ಎಂಬುವ ವೈದ್ಯ , ಹಣ ವಸೂಲಿ ಮಾಡುತ್ತಿದ್ದರು ರೈತರ ಗೋಳನ್ನು ನೋಡಲಾಗದೆ, ಚಾಲಕ ಶ್ರೀನಿವಾಸ್ ಕಂಪನಿಯ ಜಿಲ್ಲಾ ಸಂಯೋಜಕರ ಮತ್ತು ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು,ಸಹ ಈ ಬಗ್ಗೆ ಯಾವುದೇ ರೀತಿ ಕ್ರಮವಹಿಸಿಲ್ಲ ಎಂದು ತಾಲೂಕು ಪಶು ಇಲಾಖೆಯ ಮುಂದೆ ಎಡು ಸ್ಪಾರ್ಕ್ ( EDU SPARK )ಕಂಪನಿ ಪ್ರೈ. ಲಿ,ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ,
ಬಡತನದ ಜೀವನ ನಡೆಸುತ್ತಿರುವ ಪಶು ಇಲಾಖೆ ವಾಹನ ಚಾಲಕರಾದ ಶ್ರೀನಿವಾಸ್ ರವರಿಗೆ ನ್ಯಾಯ ಸಿಗುವವರೆಗೂ ಈ ಹೋರಾಟವನ್ನು ಕೈ ಬಿಡುವುದಿಲ್ಲ, ಶ್ರೀನಿವಾಸ್ ಅವರು ಏನು ತಪ್ಪು ಮಾಡಿದ್ದಾರೆ,ಎಂದು ದಾಖಲೆ ಕೊಡಬೇಕು ನೊಂದಿರುವ ಅವರಿಗೆ ಚಾಲಕ ವೃತ್ತಿಯನ್ನು ನೀಡಬೇಕು ವೈದ್ಯರಾದ ವೈ ಎಲ್ ದೇವರಾಜು ವಿರುದ್ಧ ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ಗಮನಹರಿಸಬೇಕು, ಹಣದ ಆಸೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು, ಅದಕ್ಕೆ ತೀವ್ರ ಕಡಿಮಣ ಹಾಕಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ, ಎಂದು ಎಲ್ಲಾ ದಲಿತಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,,
ಈ ಸಂದರ್ಭದಲ್ಲಿ ತಾಲೂಕು ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಎಸ್ ಟಿ ರಾಜು, ದಲಿತ ಸೇನೆ ರಾಷ್ಟ್ರೀಯ (ಸಂಘಟನೆ )ತಾಲೂಕು ಉಪಾಧ್ಯಕ್ಷರಾದ ಆರ್ ಎನ್ ಹಟ್ಟಿ ರಂಗಯ್ಯ, ದಲಿತ ಸೇನೆ ಸಹಕಾರ್ಯದರ್ಶಿ ಚಿಕ್ಕರಾಮು, ಬುಲೆಟ್ ಮೋಹನ್, ವೆಟನರಿ ವಾಹನ ಚಾಲಕ, ಶ್ರೀನಿವಾಸ್, ಹಾಗೂ ಸಂಘಟನೆಯ ಹಲವು ಮುಖಂಡರುಗಳು ಪ್ರತಿಭಟನೆಯಲ್ಲಿ ಹಾಜರಿದ್ದರು,,,
ವರದಿ : ನರಸಿಂಹರಾಜು

