ಗೋಕಾಕ : ಮಾತಾನಾಡೊದಿದೆ ಬಾ ಎಂದು ಕರೆದು ಯುವಕನೊರ್ವನನ್ನು ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾದ ಘಟನೆ ಗೋಕಾಕದ ಜಿಆರ್,ಬಿ,ಸಿ, ಗೇಟ ಹತ್ತಿರ ನಡೆದಿದೆ.
ಹಳೆ ವೈಷ್ಯಮದ ಕಾರಣ ಹಿಲ ಗಾರ್ಡನ ರಸ್ತೆಯಲ್ಲಿ ನಡೆದುಕೊಂಡು ಬರುತಿದ್ದ ಗೋಕಾಕ ನಗರದ ಗೊಂಧಳಿ ಗಲ್ಲಿಯ ನಿವಾಸಿ ಪರಶುರಾಮ ಗೊಂದಳಿ 25 ಇತನಿಗೆ ನಿನ್ನ ಹತ್ತಿರ ಮಾತನಾಡುವದಿದೆ, ಸ್ವಲ್ಪ ಬಾ ಎಂದು ಕರೆದು ಸುತ್ತು ವರೆದು ಚಾಕುವಿನಿಂದ ಇರಿದು ಕಲ್ಲಿನಿಂದ ತಲೆ ಮೇಲೆ ಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇನ್ನು ಕೂಡ ಮಂಗಳೂರಿನ ಶೆಟ್ಟಿ ಕೊಲೆ ಮಾಸಿಲ್ಲ ಗೋಕಾಕದಲ್ಲಿ ಮತ್ತೊಂದು ಕೊಲೆಯಾಗಿದ್ದು ಅದು ಕೂಡ ಜನನಿ ಬೀಡದ ಪ್ರದೇಶದಲ್ಲಿ ಯುವಕನನ್ನು ಬೀಕರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ಸುದ್ದಿ ತಿಳಿದ ತಕ್ಷಣ ಸಿಪಿಆಯ್ ಸುರೇಶಬಾಬು, ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ಕೊಲೆಯಾದ ಸ್ಥಳಕ್ಕೆ ದೌಡಾಯಿಸಿ ಪರಿಶಲಿನೆ ಮಾಡಿ ಕೊಲೆಗೆ ಕಾರಣ ಮತ್ತು ಕೊಲೆ ಮಾಡಿದವರ ಪತ್ತೆಗಾಗಿ ಬಲೆ ಬಿಸಿದ್ದಾರೆ,
ಇನ್ನು ಕೊಲೆಯಾದ ಪರಶುರಾಮ ಗೊಂದಳಿ ಇತನ ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ, ಇನ್ನು ಈ ಕೊಲೆಯಿಂದ ಗೋಕಾಕ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ,
ವರದಿ. ಮನೋಹರ್ ಮೆಗೇರಿ

