ನವದೆಹಲಿ: ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ JF-17 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಚೀನಾ ನಿರ್ಮಿತ ಜೆಎಫ್-17 ಯುದ್ಧ ವಿಮಾನ ಭಾರತದ ದಾಳಿಯನ್ನು ತಡೆಯಲು ಬಂದಿತ್ತು. ಈ ಸಂದರ್ಭದಲ್ಲಿ ಭಾರತ ಕ್ಷಿಪಣಿಯನ್ನು ಹಾರಿಸಿ ಬೀಳಿಸಿದೆ ಎಂದು ವರದಿಯಾಗಿದೆ. ಈ ವಿಚಾರದ ಬಗ್ಗೆ ಇಲ್ಲಿಯವರೆಗೆ ಭಾರತ ಸೇನೆ ಅಧಿಕೃತವಾಗಿ ತಿಳಿಸಿಲ್ಲ.
ಜೆಎಫ್ 17 ಚೀನಾ ನಿರ್ಮಿತ ಯುದ್ಧ ವಿಮಾನವಾಗಿದೆ. ಪಾಕಿಸ್ತಾನದ ಬಳಿ 150 ಜೆಎಫ್ 17 ವಿಮಾನಗಳಿವೆ. ಈ ಹಿಂದೆ ಅಭಿನಂದನ್ ವರ್ಧಮಾನ್ ಅವರು ಅಮೆರಿಕದ ಎಫ್ 16 ಯುದ್ಧ ವಿಮಾನ ಹೊಡೆದು ಹಾಕಿದ್ದರು. ಇದನ್ನೂ ಓದಿ: Operation Sindoor | 23 ನಿಮಿಷದ ದಾಳಿಗೆ 80ಕ್ಕೂ ಹೆಚ್ಚು ಉಗ್ರರು ಮಟ್ಯಾಶ್
ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಫೆ.27 ರಂದು ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು.

