ನಮಗೆ ಪುರುಷರ ಅವಶ್ಯಕತೆ ಇಲ್ಲ ಎಂದು ಬದೌನ್ ಶಿವ ದೇವಸ್ಥಾನದಲ್ಲಿ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಇಬ್ಬರು ಯುವತಿಯರು ಪರಸ್ಪರ ಹಾರ ಬದಲಿಸಿಕೊಂಡು ಸಹ ಜೀವನ ನಡೆಸಲು ಸಜ್ಜಾಗಿದ್ದಾರೆ.
ನಾವು ಪರಸ್ಪರ ಭರವಸೆ ನೀಡಿದ್ದೇವೆ – ನಾವು ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಾಗದಿದ್ದರೆ, ನಾವು ನಮ್ಮ ಉಳಿದ ಜೀವನವನ್ನು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಕಳೆಯುತ್ತೇವೆ ಎಂದು ಈ ಇಬ್ಬರು ಹೇಳಿದ್ದಾರೆ.
ಇಬ್ಬರೂ ಕಲೆಕ್ಟರೇಟ್‌ನಲ್ಲಿರುವ ಶಿವ ದೇವಾಲಯದಲ್ಲಿ ಹೂಮಾಲೆಗಳನ್ನು ಬದಲಾಯಿಸಿಕೊಂಡರು ಮತ್ತು ತಮ್ಮ ಜೀವನದುದ್ದಕ್ಕೂ ಪರಸ್ಪರ ಒಟ್ಟಿಗೆ ಇರುವ ಪ್ರತಿಜ್ಞೆ ಮಾಡಿದರು. ನಮಗೆ ಪುರುಷರು ಬೇಡ, ಅದಕ್ಕಾಗಿಯೇ ನಾವು ಒಟ್ಟಿಗೆ ಇರಲು ನಿರ್ಧರಿಸಿದ್ದೇವೆ. ನಮ್ಮ ಕುಟುಂಬ ಸದಸ್ಯರು ನಮ್ಮನ್ನು ಒಪ್ಪಿಕೊಂಡರೆ ಒಳ್ಳೆಯದು.. ಇಲ್ಲದಿದ್ದರೂ ನಮಗೆ ಯಾವುದೇ ಬೇಸರವಿಲ್ಲ.

