ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇದೀಗ ರಾಜ್ಯದಲ್ಲಿಯೇ ಮಾದರಿಯಾದ ಕೆಲಸಕ್ಕೆ ಕೈಹಾಕಿದೆ. ಕಸದಿಂದ ರಸ ಎಂಬ ಮಾತಿದೆ. ಈ ಮಾತನ್ನು ಮಾಡಿ ತೋರಿಸಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ .
ಹೌದು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ಹೀಗೂ ಬಳಸಬಹುದು ಅನ್ನೋದನ್ನು ಪಾಲಿಕೆ ರಾಜ್ಯದಲ್ಲಿ ಮೊದಲ ಬಾರಿಗೆ ಮಾಡಿ ತೋರಿಸಿದೆ. ತ್ಯಾಜ್ಯ ಸಂಗ್ರಹಣೆಯಲ್ಲಿ ಬಂದ ಪ್ಲಾಸ್ಟಿಕ್ ಅನ್ನು ಇದೀಗ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಮೂಲಕ, ಗುಣಮಟ್ಟದ ರಸ್ತೆ ನಿರ್ಮಾಣದ ಜೊತೆಗೆ ಪಾಲಿಕೆ ಬೊಕ್ಕಸಕ್ಕೆ ಹಣವನ್ನು ಕೂಡ ಉಳಿಸುತ್ತಿದೆ.



