ಕುಣಿಗಲ್ : ರಾಮನಗರ ಜಿಲ್ಲೆ ಬಿಡದಿ ಬದ್ರಾಪುರದಲ್ಲಿ ನಡೆದ ಖುಷಿ (14) ಎಂಬ ಮಾತು ಬಾರದ ಕಿವಿ ಕೇಳದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ವಿವಿಧ ಸಂಘಟನೆಗಳಿಂದ ಕುಣಿಗಲ್ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು,,
ಈ ಸಂದರ್ಭದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವಶಂಕರ್ ಮಾತನಾಡಿ ಶೋಷಿತರು ಆದಿವಾಸಿಗಳು ಹಕ್ಕಿಪಿಕ್ಕಿ ಜನಾಂಗಗಳ ಮೇಲೆ ನಿರಂತರ ದೌರ್ಜನ್ಯ ಅತ್ಯಾಚಾರಗಳು ನಡೆಯುತ್ತಿದ್ದರು, ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ದೇವರ ಬೇಸರರ ಸಂಗತಿಯಾಗಿದೆ, ಖುಷಿ ಎಂಬ ಅಪ್ರಾಪ್ತ ಪಾಲಕಿ ಮೇಲೆ ಅತ್ಯಾಚಾರ ಸಗಿದ ಆರೋಪಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ನಾಟಕದ ಅತ್ಯಂತ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು,,
ವರದಿ : ನರಸಿಂಹರಾಜು

