ಕುಣಿಗಲ್ : ಲಿಂಕ್ ಕೆನಾಲ್ ಮೂಲಕ ಹರಿದು ಬರುತ್ತಿರುವ ಹೇಮಾವತಿ ನೀರು ನಮ್ಮ ಕುಣಿಗಲ್ ತಾಲೂಕಿಗೆ ಮಾತ್ರ ಸೀಮಿತವಾಗಿರಬೇಕು, ರಾಮನಗರ ಜಿಲ್ಲೆಗೆ ಒಂದು ಹನಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಶಾಸಕ ಡಾ” ಹೆಚ್ ಡಿ ರಂಗನಾಥ್ ಮಾತನಾಡಿದರು,,
ಕುಣಿಗಲ್ ತಾಲೂಕಿನ ರೈತರಿಗೆ ಕೊಟ್ಟ ಮಾತಿನಂತೆ ಬಹುದಿನಗಳ ಹೋರಾಟದ ಕೂಸು, ನಮ್ಮ ಪಾಲಿನ ನೀರನ್ನು ಪಡೆಯಲು ಇರುವ ಏಕೈಕ ಅವಕಾಶ, ಕನಸಿನ ಯೋಜನೆ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭಗೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿ ಶಾಸಕ ಎಚ್ ಡಿ ರಂಗನಾಥ್ ಪರಿಶೀಲನೆ ನಡೆಸಿದರು,,
ನಮ್ಮ ಜಿಲ್ಲೆಯಲ್ಲಿ ಲಿಂಕ್ ಕೆನಾಲ್ ವಿರೋಧಿಸಿ ವಿರೋಧ ಪಕ್ಷದವರು ನಡೆಸುತ್ತಿರುವ ಪ್ರತಿಭಟನೆ ಕೇವಲ ರಾಜಕೀಯ ದುರುದ್ದೇಶವೇ ಹೊರತು ಯಾವುದೇ ಬೇರೆ ಕಾರಣದಿಂದ ಅಲ್ಲ, ಎಂದು ಮಾತನಾಡಿದ ಅವರು ನಮ್ಮ ಕುಣಿಗಲ್ ತಾಲೂಕಿನ ರೈತರ ಹಿತ ಕಾಪಾಡುವುದು ನಮ್ಮ ಮೊದಲ ಧ್ಯೇಯ, ಈ ನಿಟ್ಟಿನಲ್ಲಿ ನಮ್ಮ ತಾಲೂಕಿನ ರೈತರಿಗೆ ಮೋಸ ಮಾಡಬೇಡಿ ಕುಣಿಗಲ್ ಕೂಡ ತುಮಕೂರು ಜಿಲ್ಲೆಯ ಒಂದು ಅವಿಭಾಜ್ಯ ಅಂಗವಾಗಿರುವ ಕಾರಣದಿಂದ ಎಲ್ಲಾ ಶಾಸಕರು ಹಾಗೂ ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ಲಿಂಕ್ ಕೆನಾಲ್ಗೆಯಾವುದೇ ವಿರೋಧ ಮಾಡದೆ ಎಲ್ಲರೂ ಸಹಕಾರ ನೀಡಬೇಕೆಂದು ನಮ್ರತೆಯಿಂದ ಕೇಳಿಕೊಂಡರು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರಲು ನಮ್ಮ ತಾಲೂಕಿನ ವೈ ಕೆ, ರಾಮಯ್ಯನವರ ಹಾಗೂ ಹುಚ್ಚ ಮಾಸ್ತಿಗೌಡರು ಬಹಳ ಕಷ್ಟ ಪಟ್ಟಿದ್ದಾರೆ, ನಾವು ಅವರು ನಡೆದು ಬಂದ ದಾರಿಯಲ್ಲೇ ನಡೆಯೋಣ ಎಂದು ಮನವಿ ಮಾಡಿದರು,,
ಕುಣಿಗಲ್ ತಾಲೂಕಿನ ನಮ್ಮ ರೈತರು ಯಾವುದೋ ವಿರೋಧ ಮಾಡಲಿಲ್ಲ, ನಮ್ಮ ಪಾಲಿನ 3 ಟಿಎಂಸಿ ನೀರು ಕಳೆದ 25 ವರ್ಷಗಳಿಂದ ನಮಗೆ ಹರಿದು ಬಂದಿಲ್ಲ, ಕೊನೆಯ ಭಾಗದಲ್ಲಿರುವ ನಮಗೆ ನಮ್ಮ ಪಾಲಿನ ನೀರನ್ನು ಹರಿಸಿಕೊಳ್ಳಲು ಲಿಂಕ್ ಕೆನಲ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು,
ತುಮಕೂರು ಜಿಲ್ಲೆಗೆ ಹರಿದು ಬರಬೇಕಾಗಿರುವ 24 ಟಿಎಂಸಿ ನೀರು ಹರಿಸಿಕೊಳ್ಳಲು ನಾನೇ ಖುದ್ದು ನಿಂತು ಹೋರಾಟ ಮಾಡುತ್ತೇನೆ, ತುಮಕೂರು ಜಿಲ್ಲೆಯ ಎಲ್ಲಾ ರೈತರ ಹಿತ ಕಾಪಾಡುವುದು ಕೂಡ ನನ್ನ ಕರ್ತವ್ಯ ಎಂದು ತಿಳಿಸಿದರು,
ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ, ಲಿಂಕ್ ಕೆನಾಲ್ ಯೋಜನೆ ಅನುಷ್ಠಾನ ಮಾಡದೆ ನಾವುಗಳು ಹಿಂದೆ ಹೆಜ್ಜೆ ಇಡುವ ಮಾತೇ ಇಲ್ಲ, ಸಮಯ ಬಂದರೆ ನಾವು ಎಲ್ಲಾ ಹೋರಾಟಕ್ಕೂ ಮುನ್ನುಗ್ಗಲು ಸಿದ್ದರಾಗಿದ್ದೇವೆ, ಆದರೆ ಇಲ್ಲಿ ಯಾವುದೇ ಸಂಘರ್ಷ ಬೇಡ ರೈತರ ಪರವಾಗಿ ನಿಲ್ಲೋಣ ನಾವುಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು, ಲಿಂಕ್ ಕೆನಾಲ್ ಯೋಜನೆಗೆ ಸಹಕಾರವನ್ನು ಮಾಡಿ ನಮ್ಮ ರೈತರಿಗೆ ನೀರು ಕೊಡಿ ಎಂದು ಮನವಿ ಮಾಡಿಕೊಂಡರು,,
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣ ಗೌಡ, ಬೆಂಗಳೂರು ಗ್ರಾಮಾಂತರ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್, ಪುರಸಭೆ ಸದಸ್ಯ ದೇವರಾಜು, ವಿಎಸ್ಎಸ್ ಎನ್ ಅಧ್ಯಕ್ಷರುಗಳಾದ ಹರೀಶ್ ಕೊರೆಗೌಡ ಸೇರಿದಂತೆ ಹಲವು ಉಪಸ್ಥಿತರಿದ್ದರು,,
ಕುಣಿಗಲ್ ತಾಲೂಕಿನ ಹುತ್ರಿದುರ್ಗ, ಕೊತ್ತಗೆರೆ, ಯಡಿಯೂರು, ಹುಲಿಯೂರುದುರ್ಗ, ಅಮೃತೂರು ಹಾಗೂ ಕಸಬಾ ಹೋಬಳಿ ಗಳಿಗೆ ಸಮಗ್ರವಾಗಿ ನೀರಾವರಿ ಕಲ್ಪಿಸಲು ನಾನು ಈಗಾಗಲೇ ಎಲ್ಲಾ ಯೋಜನೆಗಳನ್ನು ರೂಪಿಸಿ ಕಾಮಗಾರಿ ಪ್ರಗತಿಯಲ್ಲಿದೆ, ಲಿಂಕ್ ಕೆನ್ನೆಲ್ ಕಾಮಗಾರಿ ಮುಗಿದು ನಮ್ಮ ಪಾಲಿನ ಮೂರು ಟಿಎಂಸಿ ನೀರು ಹರಿದರೆ ನಮ್ಮ ಕುಣಿಗಲ್ ತಾಲೂಕು ರೈತರ ಬೆಳಗ್ಗೆ ಒಂದು ಹಸಿರುಮಯವಾಗಲಿದೆ,,
ಡಾ” ಎಚ್ ಡಿ ರಂಗನಾಥ ಶಾಸಕ
ವರದಿ : ನರಸಿಂಹರಾಜು,

