ಬೆಳಗಾವಿ : ಆದಾಯ ಮೀರಿ ಆಸ್ತಿ ಸಂಪಾದನೆಗೆ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಎಫ್.ಐ.ಆರ್. ದಾಖಲಾಗಿದೆ. ಎಂದು ಸಾಮಾಜೀಕ ಕಾರ್ಯಕರ್ತ ಸುಜೀತ್ ಮುಳಗುಂದ ಮತ್ತು ರಾಜಕುಮಾರ್ ಟೋಪಣ್ಣನವರ ಹೇಳಿದರು.
ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. 2012 ರಲ್ಲಿ ಆದಾಯ ಮೀರಿ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿತ್ತು. ಬೆಂಗಳೂರು ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಹಿನ್ನೆಡೆಯುಂಟಾಗಿತ್ತು.
ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದಾಗ ಕರ್ನಾಟಕ ಲೋಕಾಯುಕ್ತರು ಸ್ವಂತ ಪ್ರೇರಿತ ದೂರನ್ನು ಶಾಸಕ ಅಭಯ್ ಪಾಟೀಲ್ ಅವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. ಲೋಕಾಯುಕ್ತ ಪೊಲೀಸರು ತನಿಖೆಯ ವಿಳಂಬದ ಕಾರಣವನ್ನು ಸ್ಪಷ್ಟಿಪಡಿಸಬೇಕು ಎಂದರು.
ಸಾಮಾಜೀಕ ಕಾರ್ಯಕರ್ತರಾದ ರಾಜೀವ್ ಟೋಪಣ್ಣವರ, ಈ ಪ್ರಕರಣದಲ್ಲಿ ಬೆಳಗಾವಿಯ ಲೋಕಾಯುಕ್ತ ಅಧಿಕಾರಿಗಳು ವಿಳಂಬ ಧೋರಣೆಯನ್ನು ಅನುಸರಿಸಿದ್ದರು. ಲೋಕಾಯುಕ್ತರ ಮೇಲೆ ರಾಜ್ಯದ ಜನರು ಇಟ್ಟಿರುವ ಭರವಸೆಯನ್ನು ಲೋಕಾಯುಕ್ತರು ಕಳೆದುಕೊಳ್ಳಬಾರದು. ನಮ್ಮ ಕಾನೂನು ಹೋರಾಟ ನ್ಯಾಯ ಸಿಗುವವರೆಗೂ ನಿರಂತರವಾಗಿರಲಿದೆ ಎಂದರು.
ವರದಿ : ದಯಾನಂದ. ಎಂ.

