ಗುಬ್ಬಿ : ಹೇಮಾವತಿ ಲಿಂಕ್ ಕೆನಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ವಿರುದ್ಧ ತೀವ್ರ ಸಿಡಿದೆದ್ದ ಗುಬ್ಬಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಆರ್ ವೆಂಕಟೇಶ್,
ರೈತರು ಹೋರಾಟ ಮಾಡುತ್ತಿರುವುದು ನಮ್ಮ ನೀರು ನಮ್ಮ ಹಕ್ಕು ಎಂದು, ಆದರೆ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಟಿಕೆಟ್ ಆಸೆಗೋಸ್ಕರ ರೈತರನ್ನು ಹತ್ತಿಕ್ಕುವ ಕೆಲಸ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು,,
ಶಾಸಕರಾದ ಎಸ್ ಆರ್ ಶ್ರೀನಿವಾಸ್ ರವರ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಗುಬ್ಬಿ ತಾಲೂಕಿನ ನಾಗರೀಕರನ್ನು ಅಡಇಟ್ಟಿದ್ದಾರೆ,ಎಂದು ಮಾತನಾಡಿದ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ, ಶಾಸಕರ ಬಗ್ಗೆ ಮಾತನಾಡುವುದಕ್ಕೆ ಅವನಿಗೆ ಯೋಗ್ಯತೆ ಇಲ್ಲ ಅವನು ಬಿಜೆಪಿ ಮುಖಂಡನೆ ಅಲ್ಲ ಎಂಬ ಹೇಳಿಕೆಯನ್ನುತಾಲೂಕು ಅಧ್ಯಕ್ಷರಾದ ವೆಂಕಟೇಶ್ ಆರ್ ನೀಡಿದ್ದಾರೆ,,
ಡಿಕೆ ಶಿವಕುಮಾರ್ ರವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು ಶ್ರೀನಿವಾಸ್ ರವರು ಎಂಬ ಹೇಳಿಕೆಯನ್ನು ಎನ್.ಡಿ.ಎ ಪಕ್ಷದ ಮೈತ್ರಿಕೂಟದ ಅಭ್ಯರ್ಥಿಯಾದ ದಿಲೀಪ್ ಕುಮಾರ್ ಹೇಳಿಕೆ ನೀಡಿದ್ದಾರೆ,,
ಶಾಸಕರ ಪರವಾಗಿ ಪ್ರತ್ಯುತ್ತರ ನೀಡಿದ ವೆಂಕಟೇಶ್ ರವರು ನಿನಗೆ ಧಮ್ಮಿದ್ದರೆ, ತಾಕತ್ತಿದ್ದರೆ,ಕೇಂದ್ರ ಮುಖ್ಯಮಂತ್ರಿ ಎಚ್ ಡಿ,ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡು, ನರೇಂದ್ರ ಮೋದಿಯವರ ಬಗ್ಗೆ ಮಾತನಾಡು, ಒಂದು ಸ್ಟೇಟ್ಮೆಂಟ್ ಕೊಡಿಸು ಎಂದು ಏರು ಧ್ವನಿಯಲ್ಲಿ ಎಚ್ಚರಿಕೆ ನೀಡಿದ್ದಾರೆ,
ನೀನು ಸಹ ಹೋರಾಟ ಮಾಡು ನಾವು ಬೆಂಬಲಿಸುತ್ತೇವೆ,ನಿನ್ನ ವೈಯಕ್ತಿಕ ಮಾಹಿತಿ ನನಗೆ ಸಂಪೂರ್ಣ ಗೊತ್ತಿದೆ, ಬೇರೆಯವರ ವೈಯಕ್ತಿಕ ಮಾಹಿತಿ ನಿನಗೇಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು,,
ವರದಿ : ನರಸಿಂಹರಾಜು

