By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ದೇಶದ ಪ್ರಥಮ ಸೌರಶಕ್ತಿ ಸೆಕೆಂಡ್ ಲೈಫ್ ಬ್ಯಾಟರಿ ಸಂಯೋಜಿತ ‘EV Hub’ ಲೋಕಾರ್ಪಣೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ದೇಶದ ಪ್ರಥಮ ಸೌರಶಕ್ತಿ ಸೆಕೆಂಡ್ ಲೈಫ್ ಬ್ಯಾಟರಿ ಸಂಯೋಜಿತ ‘EV Hub’ ಲೋಕಾರ್ಪಣೆ

ರಾಜ್ಯ-KarnatakaLatest

ದೇಶದ ಪ್ರಥಮ ಸೌರಶಕ್ತಿ ಸೆಕೆಂಡ್ ಲೈಫ್ ಬ್ಯಾಟರಿ ಸಂಯೋಜಿತ ‘EV Hub’ ಲೋಕಾರ್ಪಣೆ

Country's first solar-powered second-life battery integrated EV Hub inaugurated

Published June 2, 2025
Share
3 Min Read
KJ George KJ George KJ George
SHARE

EV Hub : ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಸುಸ್ಥಿರ ಇಂಧನ ಬಳಕೆಯ ಮಾದರಿಯಲ್ಲೂ ನಮ್ಮದೇ ಮೊದಲ ಹೆಜ್ಜೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಬಳಿ ಬೆಸ್ಕಾಂ ಸ್ಥಾಪಿಸಿರುವ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ರಾಜ್ಯದಲ್ಲಿ ಹೆಚ್ಚುತ್ತಿರುವ ಇವಿ ಬೇಡಿಕೆಗೆ ಅನುಕೂಲವಾಗುವಂತೆ ಚಾರ್ಜಿಂಗ್ ಕೇಂದ್ರಗಳು ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ. ಅಲ್ಲದೇ, ಇದಕ್ಕೆ ನಮ್ಮ ರಾಜ್ಯದ ‘ಇವಿ ನೀತಿ’ ಹೆಚ್ಚಿನ ಬಲ ತುಂಬಿದೆ. ಇದೀಗ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಲಾಗಿದ್ದು, ಇದರಿಂದ ಕ್ಯಾಬ್‌ ಚಾಲಕರು, ಇವಿ ಬಳಕೆ ಮಾಡುತ್ತಿರುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ,”ಎಂದರು.

“ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್.) ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಈ ಸ್ಟೇಷನ್‌ನಲ್ಲಿ ಸೌರ ವಿದ್ಯುತ್ತನ್ನು ಹಳೆಯ ಕಾರ್ ಬ್ಯಾಟರಿಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಹಗಲಿನಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಅದನ್ನು ಬ್ಯಾಟರಿ ವ್ಯವಸ್ಥೆಯ ಸಹಾಯದಿಂದ ದಿನದ 24 ಗಂಟೆಯೂ ಇವಿ ವಾಹನಗಳಿಗೆ ಸರಬರಾಜು ಮಾಡಲಾಗುತ್ತದೆ,” ಎಂದು ಇಂಧನ ಸಚಿವರು ತಿಳಿಸಿದರು.

“ದೇಶದಲ್ಲೇ ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಒಟ್ಟು 5,880 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಈ ವರ್ಷ ಹೊಸದಾಗಿ 140 ಚಾರ್ಜರ್‌ಗಳನ್ನು ಅಳವಡಿಸಲಾಗಿದೆ ” ಎಂದು ವಿವರಿಸಿದರು.

ಚಾರ್ಜಿಂಗ್‌ ಸ್ಟೇಷನ್‌ ವಿಶೇಷತೆಗಳೇನು?
ಇವಿ ಹಬ್‌ನ ವಿಶೇಷತೆಯನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್‌, “24 ಗಂಟೆಗಳ ಕಾಲ ಇವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌ ಇದಾಗಿದೆ. ಈ ಹಬ್‌ನಲ್ಲಿ 45 ಕಿ.ವ್ಯಾ. ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿ.ವ್ಯಾ.ಹೆಚ್. ಸೆಕೆಂಡ್-ಲೈಫ್ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯ ದೊಂದಿಗೆ ಏಕಕಾಲದಲ್ಲಿ 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಒಟ್ಟು 23 ಚಾರ್ಜಿಂಗ್ ಪಾಯಿಂಟ್‌ಗಳಿವೆ. ನಮ್ಮ ಬೆಸ್ಕಾಂ ಕೈಗೆಟುಕುವ ದರದಲ್ಲಿ ಇವಿ ಚಾರ್ಜಿಂಗ್‌ ಸೌಲಭ್ಯ ಒದಗಿಸುತ್ತಿದೆ. ಖಾಸಗಿಯವರ ಚಾರ್ಚಿಂಗ್‌ ದರ ನಮ್ಮ ಸ್ಟೇಷನ್‌ಗೆ ಹೋಲಿಸಿದರೆ 2-3 ಪಟ್ಟು ಹೆಚ್ಚಿದೆ,”ಎಂದು ಮಾಹಿತಿ ನೀಡಿದರು.

ಚಾರ್ಚ್‌ ಮಾಡುವುದು ಹೇಗೆ?
ಬೆಸ್ಕಾಂನ ಇವಿ ಮಿತ್ರ ಅಪ್ಲಿಕೇಷನ್‌ನಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಳ, ದರ, ಲಭ್ಯವಿರುವ ಸ್ಲಾಟ್‌ಗಳು ಎಂಬ ಮಾಹಿತಿ ಪಡೆಯಬಹುದು. ಅಥವಾ ಸ್ಟೇಷನ್‌ನಲ್ಲಿರುವ ಕ್ಯೂರ್‌ಕೋಡ್‌ ಸ್ಕ್ಯಾನ್ ಮಾಡಿ, ವಾಟ್ಸಪ್‌ಮೂಲಕವೂ ಹಣ ಪಾವತಿಸಿ ಚಾರ್ಜ್‌ ಮಾಡಬಹುದು.

ದರ:
ಎಸಿ-001-ಪ್ರತಿ ಯೂನಿಟ್‌ಗೆ 7.02 ರೂ.
ಡಿಸಿ-001-ಪ್ರತಿ ಯೂನಿಟ್‌ಗೆ 7.16 ರೂ.
ಸಿಸಿಎಸ್‌-2-ಪ್ರತಿ ಯೂನಿಟ್‌ಗೆ 7.83 ರೂ.

“ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುತ್ತಿರುವ ಕ್ಯಾಬ್‌ ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಹೊಸ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಿರುವುದು ಸಂತಸದ ವಿಷಯ. ವಿಮಾನ ನಿಲ್ದಾಣದಿಂದ ನಿತ್ಯ 10,000 ಕ್ಯಾಬ್‌ಗಳು ಬೆಂಗಳೂರಿಗೆ ಓಡಾಡುತ್ತವೆ. ಈ ಪೈಕಿ ಸಾವಿರಾರು ಎಲೆಕ್ಟ್ರಿಕ್‌ ಕಾರ್‌ಗಳಿದ್ದು, ಅವುಗಳ ಚಾರ್ಚಿಂಗ್‌ಗೆ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ. ದೇಶದಲ್ಲಿ ನಮ್ಮ ರಾಜ್ಯ ಇಂಥ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ಸಂಗತಿ”
ಕೃಷ್ಣ ಬೈರೇಗೌಡ, ಕಂದಾಯ ಸಚಿವರು

You Might Also Like

ಟ್ರೊಲ್ ಮಾಡಲು ಕಾಂಗ್ರೆಸ್ ಹಾಕಿದ್ದ ಮೋದಿಯವರ ತಾಯಿ AI ವೀಡಿಯೊ ತೆಗೆಯುವಂತೆ ಹೈಕೋರ್ಟ್ ಸೂಚನೆ

ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ, ಅಚ್ಚರಿಗೊಳಗಾದ ಗ್ರಾಮಸ್ಥರು

KPCC ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಡಿಕೆಶಿ ಸರ್ಕಸ್ – ದೆಹಲಿಯಲ್ಲಿ ಭರ್ಜರಿ ರಾಜಕೀಯ

ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ್ರಿ ಕುರಿತು ಪರಮೇಶ್ವ‌ರ್ ಹೇಳಿದ್ದೇನು..?

ಆರ್‌ಸಿಬಿ ಫ್ಯಾನ್ಸ್‌ ಗೆ ಗುಡ್‌ನ್ಯೂಸ್‌- DK ರಿಎಂಟ್ರಿ

TAGGED:EV Hub
Share This Article
Facebook Copy Link Print
Previous Article Make My Trip Make My Trip Make My Trip ರೈಲ್ವೇ ಟಿಕೆಟ್‌ ಬುಕ್ ಮಾಡುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್
Next Article HD Kumaraswamy HD Kumaraswamy HD Kumaraswamy ₹4,150 ಕೋಟಿ ಹೂಡಿಕೆ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Nitish Kumar Nitish Kumar Nitish Kumar
ಮಾ.30ರಂದು ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ…?
ರಾಷ್ಟ್ರೀಯ-National
March 27, 2026
Mangaluru Murder Arif Mangaluru Murder Arif Mangaluru Murder Arif
ಕರಾವಳಿಯಲ್ಲಿ ರೌಡಿಶೀಟರ್ ಕಗ್ಗೊಲೆ: ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಹತ್ಯೆ
ದಕ್ಷಿಣ ಕನ್ನಡ-Dakshina Kannada
March 27, 2026
Bank Holidays Bank Holidays Bank Holidays
ಏಪ್ರಿಲ್‌ನಲ್ಲಿ 11 ದಿನ ಬ್ಯಾಂಕ್ ರಜೆ ಬಂದ್
ರಾಜ್ಯ-Karnataka
March 27, 2026
Ticket 01 Ticket 01 Ticket 01
ಶಾಸಕರಿಗೆ 1+1 ಐಪಿಎಲ್ ಟಿಕೆಟ್ ನೀಡಲು KSCA ಒಪ್ಪಿಗೆ
ಕ್ರೀಡೆ-Sports
March 27, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up