ಒಂದು, ದೇಶ, ರಾಜ್ಯ ಅಂತ ಇದ್ಮೇಲೆ.. ಸಂಘಟನೆಗಳಿರಬೇಕು.. ತಪ್ಪುಗಳನ್ನ ಗುರುತಿಸಿ ನ್ಯಾಯದ ಪರ ಹೋರಾಡುವ ಧೀಮಂತ ನಾಯಕರು ಬೇಕು.. ಆದ್ರೆ ಕೆಲವ್ರು ಸಂಘಟನೆಗಳ ಹೆಸ್ರಲ್ಲಿ ದಂಧೆಗೆ ಇಳಿಸಿದ್ದಾರೆ.. ಅಮಾಯಕರನ್ನ ಟಾರ್ಗೆಟ್ ಮಾಡಿ ವಂಚಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ.. ಇದೇ ಈ ಹೊತ್ತಿನ ವಿಷೇಷ ಸಂಘಟನೆಗಳ ಹೆಸ್ರಲ್ಲಿ ದಂಧೆ.. ಅಮಾಯಕರು ವಿಲವಿಲ..
ಸಂಘಟನೆಗಳಂದ್ರೆ ಅನ್ಯಾಯದ ವಿರುದ್ಧ ಹೋರಾಡೋ ಒಂದು ಶಕ್ತಿ.. ರಾಜ್ಯ, ದೇಶದಲ್ಲಿ ಸಾಕಷ್ಟು ಸಂಘಟನೆಗಳಿವೆ.. ಉದಾಹರಣೆಗೆ ಕನ್ನಡ ಪರ ಸಂಘಟನೆಗಳು, RSS ಹೀಗೆ, ಜೈ ಭೀಮ್ ಸೇನೆ ಹೀಗೆ ಹಲವಾರು ಸಂಘಟನೆಗಳು ದೇಶದ ಒಳಿತಿಗಾಗಿ ಶ್ರಮಿಸ್ತಿವೆ.. ಕನ್ನಡ ಭಾಷೆಗೆ ಧಕ್ಕೆ ಉಂಟಾದ್ರೆ ಕನ್ನಡ ಸಂಘಟನೆಗಳು ಸುಮ್ನೆ ಕುರೋ ಮಾತಿಲ್ಲ.. ತಾಯಿ ಭಾಷೆ ಬಗ್ಗೆ ಅವಹೇಳನ ಮಾಡಿದವ್ರಿಗೆ ಸರಿಯಾಗಿ ಪಾಠ ಕಲಿಸ್ತಾರೆ.. ದಲಿತರು, ಬಡವರಿಗೆ ಅನ್ಯಾಯ ಆದ್ರೆ ಜೈ ಭೀಮ್ ಸೇನೆಯವ್ರು ಅಬ್ಬರಿಸ್ತಾರೆ. ನ್ಯಾಯ ಸಿಗೋವರೆಗೂ ಹೋರಾಡ್ತಾರೆ.. ಸಂಘಟನೆಗಳ ಹೋರಾಟದಿಂದ ಅದೆಷ್ಟೋ ಸಮಸ್ಯೆಗಳು ಬಗೆಹರಿದಿವೆ.. ಸರ್ಕಾರ ವಿರುದ್ಧ ಧ್ವನಿ ಎತ್ತಿ ಅನ್ಯಾಯಕ್ಕೊಳಗಾದವ್ರಿಗೆ ನ್ಯಾಯ ಒದಗಿಸ್ತಾರೆ..
ನಾವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನೋಡ್ತಾನೆ ಇರ್ತೇವೆ .. ಒಂದಲ್ಲ ಒಂದು ಸಂಘಟನೆ ಹೋರಾಟ ಮಾಡ್ತಾನೆ ಇರ್ತಾರೆ.. ಗುಂಡಿಗಳ ವಿಷ್ಯವಾಗಲಿ.. ಬಡವರ ಪರವಾಗಲಿ.. ಅನ್ಯಾಯಕ್ಕೊಳಗಾದವ್ರ ಪರವಾಗಲಿ ಧ್ವನಿ ಎತ್ತಿ ಪ್ರತಿಭಟನೆ ನಡೆಸ್ತಾರೆ.. ಆದ್ರೆ ಇಂಥಾ ಒಳ್ಳೊಳ್ಳೆ ಸಂಘಟನೆಗಳು ನಮ್ಮಲ್ಲಿ ಇರಬೇಕಾದರೆ ಕೆಲ ಕಿಡಿಗೇಡಿಗಳು ಇದನ್ನೇ ಬಂಡವಾಳ ಮಾಡ್ಕೊಂಡಿರೋದು ಎಷ್ಟು ಸರಿ ನೀವೆ ಹೇಳಿ.. ಸಂಘಟನೆಗಳ ಹೋರಾಟಕ್ಕೆ ಸರ್ಕಾರವೆ ಮಣಿಯುತ್ತೆ.. ಅಂತದ್ರಲ್ಲಿ ಕೆಲವ್ರು ಸಣ್ಣ ಸಣ್ಣ ಸಂಗಟನೆಗಳನ್ನ ಮಾಡ್ಕೊಂಡು ಗೊತ್ತು ಗುರಿಯಿಲ್ಲದ ಹೆಸ್ರಿಟ್ಟುಕೊಂಡು ದಂಧೆಗಿಳಿಯೋದು ಮಹಾ ಅಪರಾಧ.. ಇದು ಗೊತ್ತಿದ್ರೂ ಮಣ್ಣು ತಿನ್ನೋ ಕೆಲ್ಸ ಮಾತ್ರ ಬಿಡಲ್ಲ.. ದುಷ್ಟರು ಮಾಡೋ ಕಿಡಿಗೇಡಿ ಕೆಲಸಕ್ಕೆ ಒಳ್ಳೆ ಸಂಘಟನೆಗಳ ಹೆಸ್ರು ಹಾಳಾಗುವಂತಾಗಿದೆ..
ಸಂಘಟನೆಗಳನ್ನ ಕಟ್ಟೋದು ದೊಡ್ಡ ವಿಷ್ಯವಲ್ಲ.. ಸಂಘನೆಯನ್ನ ಹೇಗೆ ಮುನ್ನಡೆಸಬೇಕು.. ಯಾರ ಪರವಾಗಿ ಶ್ರಮಿಸ್ಬೇಕು ಅನ್ನೋದು ಬಹಳ ಮುಖ್ಯ.. ಒಳ್ಳೊಳ್ಳೆ ಕೆಲಸಗಳನ್ನ ಮಾಡಿ.. ಜನ್ರಿಗೆ ಧೈರ್ಯ ತುಂಬೋ ಕೆಲ್ಸ ಮಾಡ್ಬೇಕು.. ಅಲ್ದೆ ಸಂಘಟನೆಗಳಂದ್ರೆ ಹೀಗಿರಬೇಕಪ್ಪ ಅಂತಾ ಎಲ್ರು ಹೊಗಳಬೇಕು.. ನಿಮ್ಮನ್ನ ಕಂಡ ಕೂಡಲೇ ಮರಿಯಾದೆ,ಗೌರವ ಕೊಡೋ ರೀತಿ ಇರಬೇಕು.. ಇದೆಲ್ಲಾ ಬಿಟ್ಟು ಸಂಘಟನೆ ಹೆಸ್ರಲ್ಲಿ ದಂಧೆ ಮಾಡಿದ್ರೆ ದೇವ್ರು ಮೆಚ್ಚುತಾನ ಸ್ವಾಮಿ ನಿಮ್ಮನ್ನ.. ದೇವ್ರು ಇರ್ಲಿ.. ಬಡವರ ಹೊಟ್ಟೆಗೆ ಕೊಳ್ಳಿ ಇಟ್ಟು ನೀವು ನೆಮ್ಮಿಯಿಂದ ಇರೋಕೆ ಸಾಧ್ಯವಾ ಹೇಳಿ.. ನಿಮ್ಮ ತೀಟೆಗೆ ಬೇರೆವ್ರ ಮನೆ ಹಾಳಾದ್ರೂ ಪರವಾಗಿಲ್ಲ ಅಂತಾ ಹೊಂಚಾಕಿ ದರೋಡೆ, ವಂಚನೆ ಮಾಡ್ತೀರಲ್ಲ ಒಮ್ಮೆ ನಿಮ್ಮನ್ನ ನೀವೆ ಪ್ರಶ್ನೆ ಮಾಡ್ಕೋಳ್ಳಿ.. ಯಾಕಂದ್ರೆ ಈ ಕಾಲದಲ್ಲಿ ಮಹಾನ್ ವ್ಯಕ್ತಿಗಳಿಗೆ ಉಳಿಗಾಲವಿಲ್ಲ.. ಅಂತದ್ರಲ್ಲಿ ನೀವೆಲ್ಲಾ ಯಾವ ಲೆಕ್ಕ..
ಸಂಘಟನೆಗಳನ್ನ ಕಟ್ಟೋದು ತಪ್ಪಲ್ಲ.. ಹಾಗಾಂತ ಸಂಘಟನೆಯಲ್ಲಿ ಇರೋರೆಲ್ಲಾ ಕೆಟ್ಟವರಂತೂ ಅಲ್ಲ.. ಮಹಾನ್ ಹೋರಾಟಗಾರರು ನಮ್ಮ ಕಣ್ಮುಂದೆ EXAMPLE ಆಗಿದ್ದಾರೆ.. ಆದ್ರೆ ಸತ್ಯ, ಧರ್ಮ, ಸಮಾನತೆ, ನ್ಯಾಯವನ್ನ ಬದಿಗೊದ್ದು ಅನ್ಯಾಯ, ಸುಲಿಗೆ, ವಂಚನೆ, ದರ್ಪ, ದೌರ್ಜನ್ಯ ಅನ್ನೋದಕ್ಕೆ ಸಂಘಟನೆ ಕಟ್ಟೋದು ಮಹಾಪಾಪದ ಕೆಲಸ.. ಕೆಲವ್ರ ಕೆಂಗಣ್ಣಿಗೆ ಅಮಾಯಕರು ಬಲಿಯಾಗ್ತಿದ್ದಾರೆ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ.. ನ್ಯಾಯದ ಪರವಾಗಿ ಸದಾ ಶ್ರಮಿಸಿ.. ನಿಮಗೂ ಒಳ್ಳೆದು..
ಒಟ್ನಲ್ಲಿ ಯಾರ್ ಏನಾದ್ರು ಪರ್ವಾಗಿಲ್ಲ.. ನಮ್ಮ ಬದುಕೇ ನಮಗೆ ಹೆಚ್ಚು ಅಂತಾ ವಂಚನೆ ಮಾಡೋರು ಇನ್ನಾದ್ರು ಎಚ್ಚೆತ್ತುಕೊಳ್ಳಬೇಕು.. ಸಂಘಟನೆಗಳ ಹೆಸ್ರಲ್ಲಿ ದಂಧೆ ಮಾಡೋದನ್ನ ಬಿಟ್ಟು ಒಳ್ಳೆದಾರಿಯಲ್ಲಿ ನಡೆಯಬೇಕಿದೆ..

