ಉತ್ತರಾಖಂಡ್ : ಇಲ್ಲಿನ ರುದ್ರಪ್ರಯಾಗ ಜಿಲ್ಲೆಯಲ್ಲಿ ಟೆಂಪೋ ಟ್ರಾವೆಲರ್ ಅಲಕನಂದಾ ನದಿಗೆ ಬಿದ್ದ ಪರಿಣಾಮ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
18 ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಉರುಳಿದೆ. ಇಂದು ಬೆಳಗ್ಗೆ 7:45ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಈಗಾಗಲೇ 7 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರಿಗೆ ಶೋಧ ಕಾರ್ಯ ನಡೆದಿದೆ.
SDRF ತಂಡ ಮಿಂಚಿನ ಕಾರ್ಯಚರಣೆ ನಡೆಸುತ್ತಿದ್ದು, ಸ್ಥಳದಲ್ಲಿ ಶೋಧ ಕಾರ್ಯ ಸಾಗುತ್ತಿದೆ. ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಯಿಸಿದ್ದು, ಗಾಯಗೊಂಡ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
- ತರಗತಿಯಲ್ಲೇ ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ವಿದ್ಯಾರ್ಥಿನಿಯಿಂದ ಚಪ್ಪಲಿ ಏಟು
- ಭಾರೀ ಮೊತ್ತಕ್ಕೆ ಆರ್‌ಸಿಬಿ ಸೆಲೆ ಆದ ಬೆನ್ನಲ್ಲೇ ವಿಜಯ್ ಮಲ್ಯ ಭಾವನಾತ್ಮಕ ಪೋಸ್ಟ್
- ಭಾರತ ಸೇರಿ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ತೆರೆದ ಇರಾನ್
- ಮಂಡ್ಯ: ಕಸದಲ್ಲಿ ಸಿಕ್ಕ ಚಿನ್ನದ ಉಂಗುರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕರು
- ”ನನ್ನನ್ನೇ ಸುಪ್ರೀಂ ಲೀಡರ್ ಮಾಡಲು ಮುಂದಾಗಿತ್ತು ಇರಾನ್, ನಾನು ಒಪ್ಪಲಿಲ್ಲ” : ಟ್ರಂಪ್

