ಆದುನಿಆಧುನಿಕತೆ ಮುಂದುವರೆದಿದ್ದು ನಾವೀಗ 21ನೇ ಶತಮಾನಕ್ಕೆ ಕಾಲಿಟ್ಟಿದ್ದೇವೆ . ಪ್ರಪಂಚ ಇದೀಗ 5 ಜಿ 6ಜಿ ಯುಗದಲ್ಲಿ ಓಡಾಡುತ್ತಿದ್ದಾರೆ. ಇಲ್ಲೊಂದು ಕುಗ್ರಾಮ ಇನ್ನೂ ಮೊಬೈಲ್ ನೆಟ್ವರ್ಕ್ ಇಲ್ಲದೆ ಅನಾದಿಕಾಲದ ಪದ್ಧತಿಯಲ್ಲಿ ಈ ಗ್ರಾಮದಲ್ಲಿ ಜನರು ವಿದ್ಯಾವಂತರಾಗಿದ್ದರು ಕೂಡ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು 150 ರಿಂದ 250 ಮನೆಗಲಿದ್ದು ಸುಮಾರು 1000 ಜನ ಮೇಲ್ಪಟ್ಟು ವಾಸಿಸುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಆ ಗ್ರಾಮದಲ್ಲಿ ಸೌಲಭ್ಯ ಇಲ್ಲದೆ ಸುರಕುಂಟೆ ಸೊರಗುತ್ತಿದೆ ಈ ಗ್ರಾಮದಲ್ಲಿ ಪ್ರತಿಯೊಬ್ಬರ ಕಿಸೆಯಲ್ಲಿ ಮೊಬೈಲ್ ಇದ್ದರೂ ಆ ಮೊಬೈಲಿಗೆ ನೆಟ್ವರ್ಕ್ ಮಾತ್ರ ಸಿಗುತ್ತಿಲ್ಲ ತಂತ್ರಜ್ಞಾನ ಚರವೇಗದಲ್ಲಿ ಮುನ್ನುಗುತ್ತಿದ್ದರೂ ಪ್ರತಿ ಕೆಲಸಕ್ಕೆ ಕಾರ್ಯಕ್ಕೂ ಇಂಟರ್ನೆಟ್ ಮುಖ್ಯವಾಗಿದೆ ಅದರಲ್ಲೂ ಇದೀಗ ಶಿಕ್ಷಣದಲ್ಲಿ ಪುಸ್ತಕಗಳೆಲ್ಲಿನ ಪಾಠಗಳು ಓದಕಿಂತ ಮುಖ್ಯವಾಗಿ ಆನ್ಲೈನ್ ನಲ್ಲಿ ಪಠ್ಯಗಳು ಲಭ್ಯವಾಗುತ್ತಿದ್ದೀಯೋ ಶಾಲಾ-ಕಾಲೇಜುಗಳಲ್ಲಿ ನೀಡುವ ಚಟುವಟಿಕೆಗಳಿಗೆ ಇಂಟರ್ನೆಟ್ ಕನೆಕ್ಷನ್ ತುಂಬಾ ಅವಶ್ಯಕ ವಿದ್ದು ಇಂತಹ ಸಂದರ್ಭದಲ್ಲಿ ಈ ಸುರುಕುಂಟೆ ಗ್ರಾಮಕ್ಕೆ ನೆಟ್ವರ್ಕ್ ಭಾಗ್ಯವಿಲ್ಲದಂತಾಗಿದೆ.
ಇದರಂತೆ ಸಾಮಾನ್ಯವಾಗಿ ಈ ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯು ಅಥವಾ ಬೇರೆ ಯಾವುದೇ ಸಮಸ್ಯೆಯು ತುರ್ತು ಸೇವೆಗಳನ್ನು ಸಂಪರ್ಕಿಸಲು ಸಹ ಗ್ರಾಮಸ್ಥರು ನರಕ ಯಾತನೆ ಅನುಭವಿಸುತ್ತಿದ್ದಾರೆ.
ಈ ಗ್ರಾಮದಲ್ಲಿ ಸಮಸ್ಯೆಯ ಬಗ್ಗೆ ಹಲವು ಬಾರಿ ಸರ್ವಿಸ್ ಪ್ರವೈಡ್ರ್ಸ್ ಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಈ ಗ್ರಾಮದ ಶಾಲೆಗೆ ಶಿಕ್ಷಕರಾಗಿ ಹಾಗೂ ಇತರೆ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು ಬರಲು ಸಹ ಇಂದೇ ಟಾಗುತ್ತಿದ್ದಾರೆ.
ಮುಳಬಾಗಿಲು ತಾಲೂಕಿನಲ್ಲಿ ಅತಿ ಹೆಚ್ಚು ಟಮೋಟ ಬೆಳೆಯುವ ಗ್ರಾಮಗಳ ಪಟ್ಟಿಯಲ್ಲಿ ಸೂರುಕುಂಟೆ ಗ್ರಾಮವು ಒಂದಾಗಿದ್ದು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿರುವ ರೈತರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಶಯದೊಂದಿಗೆ ತಮ್ಮ ಮಕ್ಕಳನ್ನು ದೂರದ ನಗರ ಪಟ್ಟಣ ಪ್ರವೇಶಗಳಿಗೆ ಕಳಿಸಿಕೊಡುವ ಪರಿಸ್ಥಿತಿ ಎದುರಾಗಿದೆ
ಗ್ರಾಮದ ಜನರು ಮುಂದಿನ 30 ದಿನಗಳಲ್ಲಿ ಪರಿಹಾರವಾಗತಿದ್ದಲ್ಲಿ ಸೂರುಕುಂಟೆ ಗ್ರಾಮದಿಂದ ಜಿಲ್ಲಾ ಕಛೇರಿ ವರೆಗೂ ಪಾದಯಾತ್ರೆಯನ್ನು ಹಮ್ಮಿಕೊಂಡು ಜಿಲ್ಲಾ ಕಛೇರಿ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ವರದಿ : ಅರುಣ್ ಕುಮಾರ್

