ದೆಹಲಿ: ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಭೂಕಂಪವಾಗಿದ್ದು, ದೆಹಲಿ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸಹ ಕಂಪನ ಉಂಟಾಗಿದೆ.
ಸದ್ಯದ ಮಾಹಿತಿಯ ಪ್ರಕಾರ, ಹರಿಯಾಣದ ಜಜ್ಜರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಉಂಟಾಗಿದ್ದು, ಸಂಜೆ 7.49 ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ಇನ್ನು ಗುರುವಾರ ಸಹ ಮುಂಜಾನೆ ಹರಿಯಾಣದ ಜಜ್ಜರ್ ಬಳಿ 4.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹರಿದ್ವಾರ ರಿಡ್ಜ್ ಮತ್ತು ಮಹೇಂದ್ರಗಢ-ಡೆಹ್ರಾಡೂನ್ ಸಬ್‌ಸರ್ಫೇಸ್ ಫಾಲ್ಟ್ ಮುರಿದಿದ್ದು, ಅದಕ್ಕೆ ಕಾರಣ ಹುಡುಕಲಾಗುತ್ತಿದೆ.
ಗುರುವಾರದ ಭೂಕಂಪದ ನಂತರ, ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಭಾರತದ ಭೂಕಂಪನ ವಲಯ ನಕ್ಷೆಯಿಂದ ಇದರ ಬಗ್ಗೆ ವಿವರಣೆ ನೀಡಲಾಗಿದ್ದು, ಭೂಕಂಪ ವಲಯ IV ರಲ್ಲಿ ಭೂಕಂಪ ಉಂಟಾಗಿದೆ ಎಂದು ಹೇಳಿದೆ. ಅಲ್ಲದೇ, ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ಭೂಕಂಪ ಸಹ ಆಗುವ ಅಪಾಯದ ಸೂಚನೆಯಾಗಿದೆ ಎನ್ನಲಾಗುತ್ತಿದೆ. NNE-SSW ಪ್ರವೃತ್ತಿಯ ದೆಹಲಿ ಹರಿದ್ವಾರ ರಿಡ್ಜ್ ಮತ್ತು ಮಹೇಂದ್ರಗಢ-ಡೆಹ್ರಾಡೂನ್ ಸಬ್‌ಸರ್ಫೇಸ್ ನಡುವೆ ಭೂಕಂಪ ಉಂಟಾಗಿದೆ.

