By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ರಾಜ್ಯ ಸರಕಾರ ಯಾರನ್ನು ಓಲೈಕೆ ಮಾಡುತ್ತಿದೆ..? ಯಾರಿಂದ ಸೂಟ್‍ಕೇಸ್ ಬಂದಿದೆ..? : ಶೋಭಾ ಕರಂದ್ಲಾಜೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ರಾಜ್ಯ ಸರಕಾರ ಯಾರನ್ನು ಓಲೈಕೆ ಮಾಡುತ್ತಿದೆ..? ಯಾರಿಂದ ಸೂಟ್‍ಕೇಸ್ ಬಂದಿದೆ..? : ಶೋಭಾ ಕರಂದ್ಲಾಜೆ

ರಾಜ್ಯ-KarnatakaLatest

ರಾಜ್ಯ ಸರಕಾರ ಯಾರನ್ನು ಓಲೈಕೆ ಮಾಡುತ್ತಿದೆ..? ಯಾರಿಂದ ಸೂಟ್‍ಕೇಸ್ ಬಂದಿದೆ..? : ಶೋಭಾ ಕರಂದ್ಲಾಜೆ

Shobha Karandlaje attack on State Govt

Published July 19, 2025
Share
2 Min Read
Sh Sh Sh
SHARE

ಬೆಂಗಳೂರು: ರಾಜ್ಯ ಸರಕಾರ ಯಾವ ರಿಯಲ್ ಎಸ್ಟೇಟ್ ಸಲುವಾಗಿ ಕೆಲಸ ಮಾಡುತ್ತಿದೆ? ಯಾರನ್ನು ಓಲೈಕೆ ಮಾಡುತ್ತೀರಿ? ಅಥವಾ ಯಾರಿಂದ ಸೂಟ್‍ಕೇಸ್ ಬಂದಿದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.

ಹೆಬ್ಬಾಳದಲ್ಲಿ ಬಿ.ಎಂ.ಆರ್.ಸಿ.ಎಲ್ ಗೆ 45 ಎಕರೆ ಭೂಮಿಯನ್ನು ಮಂಜೂರು ಮಾಡುವ ಬದಲು ಕೇವಲ 9 ಎಕರೆ ಭೂಮಿಯನ್ನು ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಮುಖಂಡರ ಜೊತೆ ಅವರು ಇಂದು ಹೆಬ್ಬಾಳದ ಫ್ಲೈ ಓವರ್ ಬಳಿ ಇರುವ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ಭೂಮಿ ರೈತರದು. ಇಲ್ಲಿ ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೆಮ್ಮನಕೆರೆ ಮತ್ತು ಹೆಬ್ಬಾಳ ಗ್ರಾಮದ 55 ಎಕರೆ ಜಮೀನನ್ನು ಜೂನ್ 2000ದಲ್ಲಿ ಎಸ್.ಎಂ. ಕೃಷ್ಣ ಅವರ ಸರಕಾರ ಇದ್ದಾಗ ಗ್ಲೋಬಲ್ ಇನ್‍ವೆಸ್ಟರ್ಸ್ ಮೀಟ್ ವೇಳೆ ವಶಕ್ಕೆ ಪಡೆದಿದ್ದರು. ಬೇರೆಬೇರೆ ರೀತಿಯ ಸಾಂಸ್ಕøತಿಕ ಚಟುವಟಿಕೆಗೆ ಅವಕಾಶ ನೀಡುವುದು, ಹೋಟೆಲ್‍ಗಳ ಸ್ಥಾಪನೆಯ ಉದ್ದೇಶ ಇತ್ತು ಎಂದು ವಿವರಿಸಿದರು.

ಈ ಪೈಕಿ 4.5 ಎಕರೆ ಜಮೀನು ಲಕ್ಷ್ಮಿ ಟೂರಿಸಂಗೆ ನೀಡಿದ್ದಾರೆ. ಕೆಲವು ಭಾಗ ಮೆಟ್ರೊ, ರಸ್ತೆಗೆ ಹೋಗಿದೆ. ಅಂತಿಮವಾಗಿ ಉಳಿದಿರುವ 48 ಎಕರೆ ಜಮೀನನ್ನು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಹಬ್ ಮಾಡಬೇಕೆಂಬ ಬೇಡಿಕೆ ಸಾರ್ವಜನಿಕರದು. ಅದನ್ನು ಈಡೇರಿಸುವಂತೆ ಒತ್ತಾಯಿಸಿದರು.

ದೊಡ್ಡ ಪ್ರಮಾಣದ ಮೆಟ್ರೊ ಸ್ಟೇಷನ್ ಬೇಕು. ಬಿಎಂಟಿಸಿ ಡಿಪೋ ಅಭಿವೃದ್ಧಿ ಆಗಬೇಕಿದೆ. ವಿಮಾನನಿಲ್ದಾಣಕ್ಕೆ ಇದೇ ಹೆಬ್ಬಾಳ ರಸ್ತೆ ಮೂಲಕ 1.5 ಲಕ್ಷ ವಾಹನಗಳು ಓಡಾಡುತ್ತಿವೆ. ವಿಮಾನನಿಲ್ದಾಣಕ್ಕೆ 4-5 ಸಾವಿರ ವಾಹನಗಳು ಓಡಾಡುತ್ತಿವೆ. ಹೆಬ್ಬಾಳದಲ್ಲೇ ಬೋರ್ಡಿಂಗ್ ಪಾಸ್, ಇಮಿಗ್ರೇಶನ್ ಸಂಬಂಧಿತ ವ್ಯವಸ್ಥೆಗೆ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಕಚೇರಿ ಮಾಡಿಕೊಡಬೇಕಿದೆ. ದೇವನಹಳ್ಳಿ ರಸ್ತೆಯಲ್ಲಿ ವಾಹನ ಸಂದಣಿ ಕಡಿಮೆ ಮಾಡಲು ಅವಕಾಶವಿದೆ ಎಂದು ನುಡಿದರು.

ಸಬರ್ಬನ್‍ಗೆ ಜಮೀನು ಬೇಕು. ವರ್ತುಲ ರೈಲ್ವೆಗೆ ಜಮೀನು ಬೇಕು. ರೈಲ್ವೆ ಸ್ಟೇóಷನ್‍ಗೆ ಜಮೀನು ಬೇಕು. ಬಿಎಂಟಿಸಿಗೆ ಜಮೀನು ಅಗತ್ಯವಿದೆ. ಏರ್‍ಪೋರ್ಟಿಗೆ ವ್ಯವಸ್ಥೆಗೂ ಜಮೀನು ಅವಶ್ಯ. ಮೇ 1ರಂದು ಕಾಂಗ್ರೆಸ್ ಸರಕಾರವು 45 ಎಕರೆ ಜಮೀನನ್ನು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಹಬ್ ಮಾಡಲು ಕೊಡುವುದಾಗಿ ತಿಳಿಸಿತ್ತು. ಕೇವಲ 1 ತಿಂಗಳಲ್ಲಿ ಇದು ವ್ಯತ್ಯಾಸ ಆದುದೇಕೆ ಎಂದು ಕೇಳಿದರು.

2004ರಲ್ಲಿ ಭೂ ವಶಕ್ಕೆ ಪಡೆಯುವ ಸಂಬಂಧ ಅಂತಿಮ ಅಧಿಸೂಚನೆ ಆಗಿತ್ತು. ಇವತ್ತಿನತನಕ ಈ ಜಮೀನು ಖಾಲಿ ಬಿದ್ದಿದ್ದು, ಕಸ ತುಂಬುತ್ತಿದೆ ಎಂದು ಆಕ್ಷೇಪಿಸಿದರು. ರೈತರಿಗೆ ಪರಿಹಾರ ಮೊತ್ತ ಕೊಟ್ಟಿಲ್ಲ; ಕೆಐಎಡಿಬಿ ಆವತ್ತು ಜಾಗವನ್ನು ಲೇಕ್ ವ್ಯೂ ಟೂರಿಸಂ ಸಲುವಾಗಿ ವಶಕ್ಕೆ ಪಡೆದಿದ್ದು, ಇದರ ಮಾಲೀಕತ್ವ ಕೆಐಎಡಿಬಿ ಅಡಿ ಇದೆ ಎಂದು ತಿಳಿಸಿದರು.

ಇಲ್ಲೇ ರೋಹಿಂಗ್ಯಾಗಳು, ಅಪರಾಧ ಹಿನ್ನೆಲೆ ಉಳ್ಳವರು ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇದರ ಕುರಿತು ತನಿಖೆ ನಡೆಸಬೇಕು. ಎನ್‍ಐಎ ಇದರ ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ದೇಶದ್ರೋಹ ಮಾಡುವ ವ್ಯಕ್ತಿಗಳು ಇಲ್ಲಿ ನೆಲೆಸಿದ್ದಾರೆ. 48 ಎಕರೆ ಜಾಗವನ್ನೂ ಸರಕಾರ ಕೆಐಎಡಿಬಿ ವಶಕ್ಕೆ ಪಡೆದು ಮಲ್ಟಿ ಮೋಡ್ ಟ್ರಾನ್ಸ್‍ಪೋರ್ಟ್ ಸಿಸ್ಟಂಗೆ ಕೊಡಬೇಕೆಂದು ಅವರು ಆಗ್ರಹವನ್ನು ಮುಂದಿಟ್ಟರು. ರೈತರಿಗೆ ಇವತ್ತಿನ ಮಾರುಕಟ್ಟೆ ದರದಲ್ಲಿ ಪರಿಹಾರಧನ ನೀಡಬೇಕು ಎಂದು ತಿಳಿಸಿದರು.

  • ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
  • ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
  • ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
  • ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
  • ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

You Might Also Like

ವಿಜಯಪುರದ ಚಡಚಣದಲ್ಲಿ SBI ಬ್ಯಾಂಕ್‌ ದರೋಡೆ, 21 ಕೋಟಿ ರೂ. ದರೋಡೆ..!

ಕೊಪ್ಪಳದಲ್ಲಿ ಒಂದೇ ಕುಟುಂಬದ 3 ಜನ ಅನುಮಾನಾಸ್ಪದ ಸಾವು

ಮುಂಬೈನಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ, ಅದೃಷ್ಟವಶಾತ್ ತಪ್ಪಿದ ದುರಂತ

ಮದ್ಯ ಹಗರಣ: ಅರವಿಂದ್ ಕೇಜ್ರಿವಾಲ್‌ ಜಾಮೀನಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ

2028ರ ಚುನಾವಣೆಗೆ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ಕೆಲಸ ಮಾಡಿ: ಡಿಕೆಶಿ

TAGGED:Shobha Karandlaje
Share This Article
Facebook Copy Link Print
Previous Article Bomb Threat Bomb Threat Bomb Threat Bomb Threat : ಬೀದರ್​ನಲ್ಲಿರುವ ಗುರುದ್ವಾರ ಸ್ಫೋಟಿಸುವುದಾಗಿ ಕಿಡಿಗೇಡಿಗಳಿಂದ ಬೆಂದರಿಕೆ ಇ-ಮೇಲ್
Next Article Kananda Flag ಹಳದಿ- ಕೆಂಪು ಬಣ್ಣದ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಮತ್ತೆ ಹಕ್ಕು ಮಂಡನೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up