ಕುಣಿಗಲ್ : ತಾಲೂಕಿನ ರಾಯಗೋನಹಳ್ಳಿ ಸರ್ಕಾರಿ ಶಾಲೆಯು ಸಂಪೂರ್ಣ ಶಿಥಿಲ ಗೊಂಡಿದ್ದು ಈ ಬಗ್ಗೆ ಮಾನ್ಯ ಶಾಸಕರಾದ “ಹೆಚ್ ಡಿ ರಂಗನಾಥ್ ” ಅವರಿಗೆ ಇಲ್ಲಿನ ಶಾಲಾ ವಿದ್ಯಾರ್ಥಿಗಳು ಭಾವುಕರಾಗಿ ಕೈಮುಗಿದು ನಮ್ಮ ಶಾಲೆಯಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿ ಕೊಡಬೇಕು ನಾವು ಸದಾ ಅವರಿಗೆ ಚಿರಋಣಿಯಾಗಿರುತ್ತೇವೆ,
ನಮ್ಮ ತಾಲೂಕಿನ ಮಾನ್ಯ ಶಾಸಕರು ಈ ತಾಲೂಕಿನಲ್ಲಿ ಅಭಿವೃದ್ಧಿಗೆ ಹೆಚ್ಚಿನದಾಗಿ ಶ್ರಮಿಸುತ್ತಿದ್ದಾರೆ, ಬಹಳ ಅದ್ಭುತವಾದ ಶಾಸಕರು ಎಂದು ಹೇಳಿಕೊಳ್ಳಲು ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ, ಆದ್ದರಿಂದ ಈ ಬಡ ವಿದ್ಯಾರ್ಥಿಗಳು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಈ ಶಾಲೆಯಲ್ಲಿನ ಸಮಸ್ಯೆಗಳನ್ನು ತಾವುಗಳು ಒಮ್ಮೆ ಭೇಟಿಕೊಟ್ಟು ಈ ಬಡ ವಿದ್ಯಾರ್ಥಿಗಳ ಬಗ್ಗೆ ಕರುಣೆ ತೋರಿ ಅತಿ ಶೀಘ್ರದಲ್ಲಿ ಶಿಥಿಲ ಗೊಂಡಿರುವ ಕಟ್ಟಡಗಳನ್ನು ದುರಸ್ತಿ ಮಾಡಿಸಿ ನಿಮ್ಮ ಮಕ್ಕಳಂತೆ ನಮ್ಮನ್ನು ಸಹ ಭಾವಿಸಿ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಇರುವ ಅನುಕೂಲಗಳನ್ನು ನಮ್ಮ ಶಾಲೆಗೂ ಸಹ ಮಾಡಿಕೊಡಬೇಕು ಎಂದು ಅಲ್ಲಿನ ಶಾಲಾ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡು ಶಾಸಕರಿಗೆ ಕೈ ಮುಗಿದು ಮನವಿ ಮಾಡಿಕೊಂಡರು, ನಮ್ಮ ಶಾಲೆಗೂ ಸಹ ಕ್ರೀಡೆಗೆ ಸಂಬಂಧಪಟ್ಟಂತ ವಸ್ತುಗಳು ಹಾಗೂ ಕಂಪ್ಯೂಟರ್ ಗಳು ಬಹಳ ಅತ್ಯವಶ್ಯಕವಾಗಿದೆ, ಶಾಸಕರು ದೊಡ್ಡ ಮನಸ್ಸು ಮಾಡಿ ಈ ಶಾಲೆಗೆ ಅವುಗಳನ್ನು ಸಹಾಯ ಮಾಡಿದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ಅಲ್ಲಿನ ಶಾಲಾ ವಿದ್ಯಾರ್ಥಿಗಳು ಮಾನ್ಯ ಶಾಸಕರಿಗೆ ಮನವಿ ಮಾಡಿಕೊಂಡರು,,
ಶೌಚಾಲಯ ಕಾಂಪೌಂಡ್ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಶಾಲಾ ಕೊಠಡಿಗಳ ಚಾವಣಿ ಕುಸಿದಿರುವುದು, ಕೊಠಡಿ ಗೋಡೆ ಬಿರುಕು ಬಿಟ್ಟಿರುವುದು, ಕೀಟಕಿ ಬಾಗಿಲು ಶಿಥಿಲವಾಗಿರುವುದು, ಇದು ತಾಲೂಕಿನ ಕೊತ್ತಗೆರೆ ಹೋಬಳಿ ರಾಯಗೋಣ ಹಳ್ಳಿಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು ಕೊಠಡಿಗಳು ಧರೆಗೆ ಉರುಳುವ ಅಪಾಯದಲ್ಲಿವೆ, ಸರ್ಕಾರಿ ಶಾಲೆಯ ದುಸ್ಥಿತಿ ಕಂಡು ವಿದ್ಯಾರ್ಥಿಗಳು ದುರಸ್ತಿಗೆ ಮುಂದಾದರು ನೂರಾರು ಅಡೆತಡೆಗಳು ಶಾಲೆಯಲ್ಲಿ ಈಗ 24 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಪೋಷಕರು ಶಾಲೆಯ ದುಸ್ಥಿತಿ ಕಂಡು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದೆ,,
ಶಾಲಾ ಕಟ್ಟಡದ ಸೂಕ್ತ ನಿರ್ವಹಣೆ ಇಲ್ಲದಿರುವುದು ಜೊತೆಗೆ ಕಿಟಕಿ ಬಾಗಿಲುಗಳು ಸಂಪೂರ್ಣ ಶೀತೀಲ ಗೊಂಡಿದ್ದು ಕಿಟಕಿಗಳ ಸೀಲಿಂಗ್ ಕುಸಿತಿದೆ ಇದರಿಂದ ಹಗಲಲ್ಲೇ ಶಾಲೆ ಕೊಠಡಿ ಒಳಗೆ ಹುಳು ಹುಪ್ಪಟ್ಟೆಗಳು ಒಳ ನುಗ್ಗುತ್ತಿವೆ ಎನ್ನಲಾಗಿದೆ,
ಗ್ರಾಮ ಪಂಚಾಯತಿಯವರು ನಮ್ಮ ಸರ್ಕಾರಿ ಶಾಲೆಗೆ ಭೇಟಿಕೊಟ್ಟು ಇಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿ, ಶಾಲೆಯಲ್ಲಿ ಇರುವ ಕಟ್ಟಡಗಳ ಶಿಥಿಲಗಳನ್ನು ಪರಿಶೀಲಿಸಿ ಕೊಠಡಿಗಳನ್ನು ನಿರ್ಮಿಸುವುದಕ್ಕಾಗಿ ಅಳತೆ ಮಾಡಿಕೊಂಡಿದ್ದಾರೆ,ಇಲ್ಲಿ ನಾನು ಕರ್ತವ್ಯಕ್ಕೆ ಹಾಜರಾದಾಗ 15 ಮಕ್ಕಳು ಮಾತ್ರ ಇದ್ದರು, ನಂತರ 24 ಶಾಲಾ ಮಕ್ಕಳಿದ್ದಾರೆ, ಇಲ್ಲಿನ ಕೊಠಡಿಗಳು ಸಂಪೂರ್ಣ ಶಿಥಿಲ ಗೊಂಡಿದ್ದು ಕೊಠಡಿಗಳ ಸಮಸ್ಯೆಯನ್ನು ನಮ್ಮ ಅಧಿಕಾರಿಗಳು ಎಚ್ಚೆತ್ತುಕೊಂಡು ಅತಿ ಶೀಘ್ರದಲ್ಲಿ ಇಲ್ಲಿರುವ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು,ಮುಂದೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆಯನ್ನು ವಹಿಸಿ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕು, ಮಕ್ಕಳ ಸುರಕ್ಷತೆಯೇ ನಮ್ಮ ಮುಖ್ಯ ಗುರಿ ನಾವು ಮಕ್ಕಳಿಗೋಸ್ಕರ ಹೆಚ್ಚಿನ ಆದ್ಯತೆಯನ್ನು ಕೊಡಬೇಕು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ತಾಲೂಕಿನಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ ಅದರಂತೆ ನಮ್ಮ ಶಾಲೆಯ ಬಗ್ಗೆಯೂ ಸಹ ಗಮನ ಹರಿಸಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಕೊಟ್ಟರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ, ಇಲ್ಲಿನ ವಿದ್ಯಾರ್ಥಿಗಳು ನಿಮಗೆ ಸದಾ ಚಿರಋಣಿಯಾಗಿರುತ್ತಾರೆ,ಎಂದು ಅಲ್ಲಿನ ಮುಖ್ಯ ಶಿಕ್ಷಕರಾದ ವನಜಾಕ್ಷಮ್ಮ ಅವರು ತಿಳಿಸಿದರು,,
ಈ ಶಾಲೆಯಲ್ಲಿ ಹಲವು ವರ್ಷಗಳಿಂದ ಹಳೆ ಕಟ್ಟಡಗಳು ದುರಸ್ತಿಯಾಗದ ಕಾರಣ ಶಾಲಾ ಮಕ್ಕಳು ಅದೇ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಬಂದಿದೆ, ಈ ಮಳೆಗಾಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೊಠಡಿಗಳಲ್ಲಿ ಕುಳಿತುಕೊಂಡರೆ ಮಳೆ ಬರುವ ಸಂದರ್ಭದಲ್ಲಿ ಮೇಲಿನಿಂದ ಮಳೆ ನೀರು ನೇರವಾಗಿ ವಿದ್ಯಾರ್ಥಿಗಳ ಮೇಲೆ ಬೀಳುವುದರಿಂದ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತದೆ, ಕೊಠಡಿ ಗೋಡೆಯ ಮೇಲೆ ಹರಿದು ಬಂದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತುಂಬಾ ತೊಂದರೆಯಾಗುತ್ತದೆ ಮಳೆ ಬರುವ ಸಂದರ್ಭದಲ್ಲಿ ಶಾಲೆಯ ಹೊರಗೆ ಪಾಠ ಮಾಡುವ ಪರಿಸ್ಥಿತಿ ಬರುತ್ತದೆ, ಇಲ್ಲಿ ಶಿಥಿಲ ಗೊಂಡಿರುವ ಕೊಠಡಿಯನ್ನು ಹೆಸರಿಗಷ್ಟೇ ಡೆಮಾಲಿಶ್ ಮಾಡಿದ್ದಾರೆ ಇದುವರೆಗೂ ಮತ್ತೆ ಈ ಸರ್ಕಾರಿ ಶಾಲೆಗೆ ಯಾವ ಅಧಿಕಾರಿಗಳು ಸಹ ಭೇಟಿ ಕೊಟ್ಟಿಲ್ಲ, ಊಟದ ವ್ಯವಸ್ಥೆ ಬಹಳ ಅದ್ಭುತವಾಗಿದೆ, ನಮ್ಮ ಶಾಲೆಯಲ್ಲಿ ಸಿಗುವಂತಹ ಊಟದ ರುಚಿ ಬೇರೆ ಯಾವ ಶಾಲೆಯಲ್ಲೂ ಸಹ ಸಿಗುವುದಿಲ್ಲ, ಮುಂದಿನ ಜನ್ಮದಲ್ಲಿ ಇವರೇ ನಮಗೆ ತಾಯಿಯಾಗಿ ಹಸಿವು ನೀಗಿಸಬೇಕು, ಹಾಗೂ ಇಲ್ಲಿನ ಎಲ್ಲಾ ಶಿಕ್ಷಕರು ನಮ್ಮ ತಂದೆ ತಾಯಿ ಅಂತ ಹೆಚ್ಚಿನದಾಗಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ, ಪ್ರತಿ ಜನ್ಮದಲ್ಲೂ ಈ ಶಿಕ್ಷಕರೇ ನಮಗೆ ದಾರಿದೀಪವಾಗಬೇಕು ಇಂತಹ ಶಿಕ್ಷಕರನ್ನು ಪಡೆದ ನಾವೇ ಪುಣ್ಯವಂತರು ಎಂದು ಭಾವುಕರಾಗಿ ವಿದ್ಯಾರ್ಥಿಗಳು ಮಾತನಾಡಿದರು,,
ಕೂಡಲೇ ಸರ್ಕಾರ ಈ ಶಾಲೆಯನ್ನು ದುರಸ್ತಿಗೊಳಿಸಬೇಕು, ಇಲ್ಲದಿದ್ದರೆ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ವಿದ್ಯಾರ್ಥಿಗಳಿಗೆ ಮುಂದಾಗುವ ಅಪಾಯವನ್ನು ತಪ್ಪಿಸಬೇಕು, ಹಾಗೂ ಅಡುಗೆ ಕೊಠಡಿಯಲ್ಲಿ ಮೇಲಿನಿಂದ ಸಿಮೆಂಟ್ ಉದುರುತ್ತಿದ್ದು ಮಕ್ಕಳ ತಿನ್ನುವ ಊಟಕ್ಕೆ ಸಣ್ಣ ಸಣ್ಣ ಕಲ್ಲುಗಳು ಉದುರುತ್ತಿವೆ ಆದ್ದರಿಂದ ಅಡುಗೆ ಕೊಠಡಿಯ ಮೇಲ್ಭಾಗದಲ್ಲಿ ಹಾಕಿರುವ ಹಳೆಯ ಸಿಮೆಂಟ್ ಹಾಗೂ ಕಂಬಿಗಳನ್ನು ಹೊಸದಾಗಿ ನಿರ್ಮಿಸಬೇಕು ಎಂಬುದು ಅಲ್ಲಿನ ಪೋಷಕರ ಅಳಲಾಗಿದೆ,,
ವರದಿ ನರಸಿಂಹರಾಜು

