ಕುಣಿಗಲ್ : ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ದಾಖಲೆಯಿಲ್ಲದ ಜಮೀನಿಗೆ ಇಲ್ಲಿನ ಬೆಸ್ಕಾಂ ಅಧಿಕಾರಿ “ವೀರಭದ್ರಚಾರ್” (AEE ) ಎಂಬುವರು ಹಣದಾಸೆಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಿ ಸರ್ಕಾರಕ್ಕೆ ವಂಜಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ,,
ಕಿತ್ನಾಮಂಗಲ ಗ್ರಾಮದ ವಾಸಿಯಾದ ಕೃಷ್ಣಮೂರ್ತಿ ಎಂಬುವರು ಕುಣಿಗಲ್ ಬೆಸ್ಕಾಂ ಇಲಾಖೆಯ ಮುಂದೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಧಿಕಾರಿಯಾದ”ವೀರಭದ್ರಚಾರ್” ಎಂಬುವರು ಈ ಭ್ರಷ್ಟಾಚಾರದಲ್ಲಿ ಹಾಗೂ ಅವ್ಯವಹಾರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನವಿದೆ, ಯಾವ ದಾಖಲೆಯೂ ಇಲ್ಲದೆ ಬೋರ್ವೆಲ್ ಕನೆಕ್ಷನ್ ಕೊಟ್ಟಿದ್ದಾರೆ, ಇವರಿಗೆ ನಾಚಿಕೆಯಾಗಬೇಕು ಇವರು ಸರ್ಕಾರದ ಅನ್ನ ತಿಂದು ಸರ್ಕಾರಕ್ಕೆ ವಂಚಿಸುತ್ತಿರುವ ಭ್ರಷ್ಟರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು,,
ಈ ಹಿಂದೆ 2017ರಲ್ಲಿ ಕಚೇರಿಗೆ ಬಂದು ಅರ್ಜಿಯನ್ನು ಕೊಟ್ಟ ನಂತರ ಆ ಅರ್ಜಿಗೆ ಯಾವುದೇ ಉತ್ತರವನ್ನು ಕೊಡದೆ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ನಮ್ಮನ್ನು ಕಡೆಗಣಿಸಿ ಹಾಗೂ ಅಂದಿನಿಂದ ಇಲ್ಲಿಯವರೆಗೂ ನಮ್ಮ ಅಹವಾಲುಗಳನ್ನು ಅರ್ಜಿಯ ಮುಖಾಂತರ ಕೊಟ್ಟರು ಸಹ ಮೇಲಾಧಿಕಾರಿಗಳ ಗಮನಕ್ಕೆ ತರದೆ ಕರ್ತವ್ಯದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಮಾತನಾಡಿದರು, ಇಲ್ಲಿನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಧಿಕಾರಿ “ವೀರಭದ್ರಚಾರ್” ಎಂಬುವರು ಹಣ ಕೊಟ್ಟರೆ ದಾಖಲಾತಿ ಇಲ್ಲದ ಜಮೀನಿಗೆ ಸೂಕ್ತ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುತ್ತಿದ್ದಾರೆ ಕರ್ತವ್ಯದಲ್ಲಿ ಸರ್ಕಾರದ ಐಡಿ ಕಾರ್ಡ್ ಕೂಡ ಬಳಸುವುದಿಲ್ಲ ಇವರು ಯಾರೆಂಬುದು ಸಾರ್ವಜನಿಕರಿಗೆ ತಿಳಿದಂತಾಗಿದೆ ಈ ಬಗ್ಗೆ ಮೇಲಾಧಿಕಾರಿಗಳು ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಈ ಕೂಡಲೇ ಕರ್ತವ್ಯದಿಂದ ವಜಾ ಗೊಳಿಸಬೇಕು, ಇಲ್ಲದಿದ್ದರೆ ಬೆಸ್ಕಾಂ ಇಲಾಖೆ ಮುಂದೆ ದಲಿತ ಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು, ಇಂತಹ ಭ್ರಷ್ಟ ಅಧಿಕಾರಿಗಳು ಇದ್ದರೆ ಬಡವರಿಗೆ ಹಾಗೂ ರೈತರಿಗೆ ಸಿಗುವಂತಹ ಯಾವ ಸೌಲಭ್ಯಗಳು ಸಹ ದೊರಕುವುದಿಲ್ಲ ಎಂದು ಮಾತನಾಡಿದರು,,
ಒಂದು ತಿಂಗಳ ಹಿಂದೆ ಈ ಅಕ್ರಮದ ವಿಚಾರವಾಗಿ ಅರ್ಜಿಯನ್ನು ಕೊಟ್ಟಿದ್ದು ಈ ವಿಷಯವನ್ನು ಸಹ ಅವರ ಮೇಲಾಧಿಕಾರಿಗಳಿಗೆ ತಿಳಿಸದೆ ಕಳ್ಳಾಟ ಆಡುತ್ತಿದ್ದಾರೆ, ಸಾರ್ವಜನಿಕರು ಮಾಹಿತಿ ಕೇಳಲು ಬಂದರೆ ಕದ್ದು ಮುಚ್ಚಿ ಓಡುತ್ತಿದ್ದಾರೆ, ನಾಗರೀಕರ ಬಳಿ ಮುಖ ಕೊಟ್ಟು ಮಾತನಾಡುತ್ತಿಲ್ಲ, ಈತ ಹಣದಾಸೆಗೆ ತನ್ನ ಕರ್ತವ್ಯವನ್ನು ಮರೆತು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ, ಮೂರು ಬೋರ್ ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ, ಹಲವು ವರ್ಷಗಳಿಂದ ಆರ್ ಆರ್ ನಂಬರ್ ಇಲ್ಲದೆ ವಿದ್ಯುತ್ ಪೂರೈಕೆಯಾಗುತ್ತದ್ದರು ಸಹ ಹಣದಾಸೆಗೆ ಕಣ್ಮುಚ್ಚಿ ಕುಳಿತಿದ್ದಾರೆ ಹಾಗೂ ಮೇಲಾಧಿಕಾರಿಗಳ ಮಾತಿಗೂ ಕಿಂಚಿತ್ತು ಗೌರವ ಕೊಡದೆ ಅರ್ಜಿಗಳನ್ನು ಕೊಟ್ಟರು ಸಹ ಮೇಲಾಧಿಕಾರಿಗಳ ಗಮನಕ್ಕೆ ತರದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು,
ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತನಿಖೆ ಮಾಡಬೇಕು ಇಲ್ಲದಿದ್ದರೆ ಬೆಸ್ಕಾಂ ಇಲಾಖೆಯನ್ನು ಲೂಟಿ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು,,
ವರದಿ : ನರಸಿಂಹರಾಜು

